ವಿಜ್ಞಾನಕ್ಕೆ ಸವಾಲೀ ಕ್ಷೇತ್ರ....
*ಟಿ.ಎಂ.ಸತೀಶ್
ತೀರಾ
ವಾದಕ್ಕಿಳಿದರೆ,
ದೇರ್
ಈಸ್ ಎ ವೈಟಲ್ ಫೋರ್ಸ್ ಎಂದು ಹೇಳುತ್ತಾರೆ. ಆ ಅಗೋಚರ ಶಕ್ತಿಯನ್ನೇ ನಾವು
ದೇವರೆನ್ನುವುದು. ಈ ಆಧುನಿಕ ಯುಗದಲ್ಲಿ ಕೂಡ ವಿಜ್ಞಾನಕ್ಕೆ ನಿಲುಕದ ಹಲವು
ಸಂಗತಿಗಳು ಇವೆ.
ವಿಜ್ಞಾನಿಗಳು
ಪವಾಡವೆಂಬುದು ಸುಳ್ಳು ಎಂದು ಹಲವು ಸಂದರ್ಭಗಳಲ್ಲಿ ಸಾಬೀತು ಪಡಿಸಿದ್ದಾರಾದರೂ
ಭವರೋಗವನ್ನು ಗೆಲ್ಲಲು ಸಾಧ್ಯವೇ?
ಇದು
ವಿಜ್ಞಾನಾತೀತವಾದ ವಿಚಾರ.
ಬೆಣ್ಣೆಯನ್ನು
ಒಲೆಯ ಮೇಲಿಟ್ಟು ಕಾಯಿಸಿ,
ಕರಗಿಸಿದರೆ ಅದು ತುಪ್ಪವಾಗುತ್ತದೆ. ಆದರೆ,
ಒಮ್ಮೆ
ತುಪ್ಪವಾದ ಬೆಣ್ಣೆಯನ್ನು ಪ್ರಿಡ್ಜ್‌ನಲ್ಲೇ ಇಟ್ಟರೂ,
ಶೈತ್ಯಾಗಾರದಲ್ಲಿ ಇಟ್ಟರೂ ಅದು ಮತ್ತೆ ಬೆಣ್ಣೆಯಾಗುವುದು ಸಾಧ್ಯವಿಲ್ಲದ ಮಾತು.ಆದರೆ,
ಶಿವಗಂಗೆಯಲ್ಲಿ ಈ ಪವಾಡವನ್ನು ಪ್ರತ್ಯಕ್ಷ ಕಾಣಬಹುದು. ಭಗವಂತನ ಕೃಪೆಯಿದ್ದರೆ
ಅಸಾಧ್ಯವಾದುದೂ ಸಾಧ್ಯ. ಅದಕ್ಕೇ ಅಲ್ಲವೇ ವಚನಕಾರರು ಶಿವನೊಲಿದರೆ ಕೊರಡು
ಕೊನರುವುದಯ್ಯ ಎಂದದ್ದು.
ಇಂಥ ವೈಶಿಷ್ಟ್ಯ
ಹಾಗೂ ಮಹಿಮಾನ್ವಿತವಾದ ಪುಣ್ಯಕ್ಷೇತ್ರ ಕರ್ನಾಟಕದಲ್ಲಿದೆ ಎಂಬುದು ಹೆಮ್ಮೆಯ ವಿಷಯ.
ಈ ಕ್ಷೇತ್ರ
ದಕ್ಷಿಣ ಕಾಶಿ ಎಂದೇ ಖ್ಯಾತವಾಗಿದೆ. ಹೆಸರೇ ಹೇಳುವಂತೆ ಇಲ್ಲಿ ಎಲ್ಲಿ ನೋಡಿದರೂ ಶಿವ
ಹಾಗೂ ಗಂಗೆಯರೇ ಕಾಣುತ್ತಾರೆ. ಬೆಟ್ಟವೂ ಕೂಡ ಒಂದೊಂದು ದಿಕ್ಕಿನಿಂದ ಒಂದೊಂದು
ಆಕಾರದಲ್ಲಿ ಗೋಚರಿಸುತ್ತದೆ.
ಶಿವಗಂಗೆಯ
ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲೂ ಬರುತ್ತದೆ. ಹೊಯ್ಸಳರ ಕಾಲದ
ವಿಷ್ಣುವರ್ಧನ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯವನ್ನು
ಜೀರ್ಣೋದ್ಧಾರ ಮಾಡಿದ್ದಾರೆ. ಗುಡಿ ಗೋಪರ ನಿರ್ಮಿಸಿದ್ದಾರೆ.
ಇಲ್ಲಿ
ಸ್ವರ್ಣಾಂಭ ಸಹಿತ ಗಂಗಾಧರೇಶ್ವರ,
ಶಾಂತೇಶ್ವರ,
ಓಂಕಾರೇಶ್ವರ,
ರೇವಣ
ಸಿದ್ಧೇಶ್ವರ,
ಕುಂಭೇಶ್ವರ,
ಸೋಮೇಶ್ವರ,
ಮುದ್ದು
ವೀರೇಶ್ವರನೆಂಬ ಅಷ್ಟ ಲಿಂಗಗಳಿದ್ದರೆ,
ಅಗಸ್ತ್ಯತೀರ್ಥ,
ಶಂಕರತೀರ್ಥ,
ಕಣ್ವತೀರ್ಥ,
ಕದಂಬತೀರ್ಥ,
ಮೈತ್ಲಾ
ತೀರ್ಥ,
ಪಾತಾಳಗಂಗೆ,
ಒಳಕಲ್
ತೀರ್ಥ,
ಕಪಿಲತೀರ್ಥ ಎಂಬ
ಅಷ್ಟ ತೀರ್ಥಗಳಿವೆ.
ಅಗಸ್ತ್ಯತೀರ್ಥದ
ಸುತ್ತ ೧೦೮ ಲಿಂಗಗಳಿವೆ. ಗಂಗಾಧರೇಶ್ವರ ಹಾಗೂ ಸ್ವರ್ಣಾಂಭ ದೇವಾಲಯಗಳು ಅತ್ಯಂತ
ಪುರಾತನವಾದವು. ಇದಲ್ಲದೆ,
ನಂದಿ,
ವೃಷಭ,
ಮಕರಬಸವ,
ಮಹಿಷ
ಬಸವ,
ಗಾರೆ ಬಸವ,
ದೊಡ್ಡ
ಬಸವ,
ಕಡಲೆ ಬಸವ,
ಗಿರಿಬಸವ,
ಕೋಡುಗಲ್ಲು ಬಸವ ಎಂಬ ಅಷ್ಟ ಮಹಾ ವೃಷಭ ಇದೆ. ಶಿವಗಂಗೆ ಕಡಿದಾದ ಬೆಟ್ಟದ ಮೇಲಿರುವ
ಕಾರಣ ಇದು ಚಾರಣ ಪ್ರಿಯರಿಗೆ ಅತ್ಯುತ್ತಮ ಗಿರಿಶಿಖರ. ಇದೇ ಬೆಟ್ಟದಲ್ಲೇ ನಾಟ್ಯರಾಣಿ
ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಐತಿಹ್ಯವಿದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.