fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮಾರ್ಚ್ 10, 2015

ನುಡಿಮುತ್ತು 20

ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.
ಮಹಾತ್ಮ ಗಾಂಧಿ

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.
— ಕನ್‌ಫ್ಯೂಷಿಯಸ್

ಕರುಣೆಯೇ ಪರಮ ಜ್ಞಾನ.
ಫಿಲಿಪ್ ಜೇಮ್ಸ್ ಬೈಲಿ

ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.
ಅಲ್‌ಬರ್ಟ್ ಐನ್‌ಸ್ಟೀನ್

ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.
ಜೇಮ್ಸ್ ಬ್ರಾಡ್‌ಸ್ಕಿ

ಇದೊಂದು ದೊಡ್ಡ ಸತ್ಯ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ; ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ. 
-ಸ್ವಾಮಿ ವಿವೇಕಾನಂದ

ತನ್ನೊಳಗೆ ನಗುವವನು ಜ್ಞಾನಿ
ತಾನೆ ನಗುವವನು ಹುಚ್ಚ
ತನ್ನ ಗೆಳತಿಯ ನೆನೆದು ನಗುವವನು ಪ್ರೇಮಿ
ಮೈ ಮರೆತು ನಗುವವನು ರಸಿಕ
ಇನ್ನೊಬ್ಬರಿಗಾಗಿ ನಗುವವನು ಅಯೋಗ್ಯ
ಇನ್ನೊಬ್ಬರಿಗೆ ನೋವಾಗುವಂತೆ ನಗುವವನು ಖಳನಾಯಕ
ನಕ್ಕು ಮನರಂಜನೆ ನೀಡುವವನು ವಿದೂಷಕ
ನಗುತ್ತಲೇ ವಿಜಯ ಸಾದಿಸುವವನು ಬುದ್ದಿವಂತ
ಗೆದ್ದರೂ ನಗದವನು ಕರ್ಮಯೋಗಿ.


''ಪೂರ್ವಾನುಭವಗಳ ಸ್ವಪ್ನಾರಣ್ಯದಲ್ಲಿ
ಪೋಲಿ ಪೋಲಿಯಾಗಿ ಅಲೆಯುವುದೇ ಹರಟೆ''
-ಕುವೆಂಪು

ಮ೦ಗಳವೆ೦ಬೆನು ಜಗಕಿದಕೆಲ್ಲಕುಹಿ೦ಗಲಿ ಭವ ತಾಪ೦ ದೋಷ೦ತ೦ಗಲಿ ಮನ ಶಮದೊಳು ನಿರ್ವೈರ್ಯ೦ಅ೦ಗವಿಸಲಿ ಸದ್ರಸತೋಷ೦.
ಪು ತಿ

ಸ್ವೀಕರಿಸುವ ಮನಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸಿದ್ದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಹಾಡುವುದಿದ್ದರೆ ಅನುಭವದ ಮಾತುಗಳನ್ನೇ ಹಾಡು
ಕೇಳುವುದಿದ್ದರೆ ಸದುಪದೇಶಗಳನ್ನು ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು


ನುಂಗುವ ಇಚ್ಚೆಯಿದ್ದರೆ ಸಿಟ್ಟನ್ನೇ ನುಂಗು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು