fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಮೇ 30, 2016
ಗುರುವಾರ, ಮೇ 26, 2016
ಆಯ್ದಕ್ಕಿ ಮಾರಯ್ಯ
ಅಂಕಿತ ನಾಮ: ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 32 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ
ಪರಿಚಯ: ಕಾಲ ಸು. 1160. ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ. ನೆಲದಲ್ಲಿ ಚೆಲ್ಲಾಡಿದ ಅಕ್ಕಿಯನ್ನು ಆಯ್ದು ಬದುಕುವುವು ಇವನ ಕಾಯಕ ‘ಕಾಯಕವೇ ಕೈಲಾಸ’ ಎಂಬ ಪ್ರಸಿದ್ಧ ನುಡಿಗಟ್ಟು ಈತನ ವಚನದಲ್ಲಿ ದೊರೆಯುತ್ತದೆ. ಕಾಯಕ ಮತ್ತು ದಾಸೋಹ ಇವನ 32 ವಚನಗಳ ಮುಖ್ಯ ವಸ್ತುಗಳು, ನೋಡಿ: ಆಯ್ದಕ್ಕಿ ಲಕ್ಕಮ್ಮ.
ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ,
ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ.
ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ,
ಅಮರೇಶ್ವರಲಿಂಗವನರಿಯಬಾರದು.
ಅಮೃತದ ಸವಿ ಸ್ವಾದಿಸುವರಿಗಲ್ಲದೆ
ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ
ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ?
ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ
ನೇಮದ ಕಟ್ಟು ನಿನ್ನದು ಬಸವಣ್ಣಾ.
ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ?
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ,
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
ಬುಧವಾರ, ಮೇ 25, 2016
ಮಂಗಳವಾರ, ಮೇ 24, 2016
ಗುಟ್ಟು
ಬಿಟ್ಟುಕೊಟ್ಟರೆ ನಿಮ್ಮ ಜುಟ್ಟು ಇದರ ಕೈಯಲ್ಲಿ...
ಕಿವಿಯಲ್ಲಿ ಕೇಳಿ ಬಾಯಲ್ಲಿ ಬಿಡಬಾರದ ವಿಷಯ
ಹೇಳದೇ ಉಳಿದ ಸತ್ಯ
ಗುಟ್ಟು ಗುಟ್ಟಾಗಿಯೇ ಇದೆಯೆಂದರೆ ಅದು ಯಾರಿಗೂ ಗೊತ್ತಾಗಿಲ್ಲವೆಂದೇ ಅರ್ಥ
ಯಶಸ್ಸಿಗೊಂದು ರಹದಾರಿ ಈ ರಹಸ್ಯ
ಹೆಣ್ಣಿನ ಬಳಿ ಗುಟ್ಟು ನಿಲ್ಲುವುದೇ ಇಲ್ಲ. ಹೆಣ್ಣಿಂದ ಹೆಣ್ಣಿಗೆ ಓಡುತ್ತಲೇ ಇರುತ್ತದೆ
ಗೋಪಿಯ ಬಳಿ ಹೇಳಿದ ಗೌಪ್ಯ
ಅಪ್ಪನ ಕಣ್ಣು ತಪ್ಪಿಸಿ ಸಿಗರೇಟು ಸೇದಿದ ಸೀಕ್ರೇಟು ವಿಚಾರ
ರಟ್ಟಾದರೆ ಮಾತ್ರ ನಿಮಗೇ ಪೆಟ್ಟು
ಗುಟ್ಟು ಎಲ್ಲಿದ್ದರೂ ರಟ್ಟಾಗುತ್ತದೆ ಅದೇ ಅದರ ಸ್ವಭಾವ
ರಟ್ಟೇ ಆಗದ ಗುಟ್ಟು ಎಂಬುದಿದ್ದರೆ ಅದು ಯಾರಿಗೂ ತಿಳಿದಿರಲು ಸಾಧ್ಯವೇ ಇಲ್ಲ
ಯಾರಿಗೂ ತಿಳಿದಿರದ ವಿಷಯ ಗುಟ್ಟಲ್ಲ ಎಲ್ಲರಿಗೂ ತಿಳಿಯದ ವಿಷಯ ಗುಟ್ಟು
ಕಿವಿಯ ಬಳಿ ಹೇಳುವ ಕಿವಿಮಾತು
ಪಿಸುಮಾತಿನಲ್ಲಿ ಬಾಯಿಂದ ಕಿವಿಗೆ ವರ್ಗಾಯಿಸಲ್ಪಡುವ ವಿಚಾರ
ಹೆಂಗಸರ ವಯಸ್ಸು
ದೊಡ್ಡವರ ಸಣ್ಣತನವೆಲ್ಲ ದಾಖಲಾಗುವ ಡೈರಿ
ಕಿವಿಗಳ ಸಾರ್ಥಕ್ಯವಿರುವುದೇ ಇದನ್ನು ಕೇಳುವಲ್ಲಿ
ಕೇಂದ್ರ ಸರ್ಕಾರದ ಕೆಲವು ನೀತಿ ನಿಯಮಗಳು
ಮೀಡಿಯಾದವರಿಗೆ ಇನ್ನೂ ತಲುಪದ ಸುದ್ದಿ
-ವಿಶ್ವನಾಥ ಸುಂಕಸಾಳ
ಭಾನುವಾರ, ಮೇ 22, 2016
ಅಪ್ಪಾ ನಿನ್ನ ಬರುವಿಕೆಯಲ್ಲಿ
ನಿನ್ನ ನೆನಪಾಗುತಿದೆ ಅಪ್ಪಾ ಹೃದಯ ಮಿಡಿಯುತಿದೆ ಅಪ್ಪಾ – ಅಮ್ಮ ನಿಮ್ಮಿಬ್ಬರ ಹೊರತು ಮತ್ತೇನು ಬೇಡವಾಗಿದೆ ತಟದಲ್ಲಿ ಕಾದು ಕುಳಿತಿರುವೆ ಒಮ್ಮೆಯಾದರು ಬರುವೆಯೆಂದು
ನಿನ್ನಲ್ಲಿ ಮಾತನಾಡಬೇಕು ಅಪ್ಪಾ ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ ಅಪ್ಪಾ ಒಮ್ಮೆ ಬಂದುಬಿಡು ನನ್ನ ಅಮ್ಮನಿಗಾಗಿ ಅವಳ ಮಾಸಿದ ಕಣ್ಣಿನಲ್ಲಿ ಅಡಗಿರುವ ನೋವಿಗೆ ನೀನು ಮಾತ್ರ ಸಮಾಧಾನ ಮಾಡಬಲ್ಲೆ
ನಿನಗಾಗಿ ಅವಳು ಕಾಯದ ದಿನವಿಲ್ಲ ಪ್ರಪಂಚವರಿಯದ ನನ್ನ ಅಮ್ಮ ಸುತ್ತುವರಿದ ಸುಳಿಯಿಂದ ನೀನೇ ಬಿಡಿಸಬೇಕು , ಅಪ್ಪಾ ನನಗಿಂತಲೂ ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು
ಎಲ್ಲಿ ಅಡಗಿರುವೆ ನೀಲನಭದ ಗಾಳಿಯಲಿ ಲೀನಗೊಂದೆಯಾ ಅಪ್ಪಾ ಕರ್ತವ್ಯ ಮರೆತು ಹೋಗದಿರು, ನಿನಗಾಗಿ ಕಾಯುತಿರುವೆ ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ …
…ಮಾಲಿನಿ ಭಟ್ .(By ಕರ್ನಾಟಕ ಇನ್ಫೋಲೈನ್ on July 13, 2012 )
ಶುಕ್ರವಾರ, ಮೇ 20, 2016
ನಾಯಿಮರಿ ನಾಯಿಮರಿ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಏಕೆ
ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ
ಜಾಣಮರಿ ತಾಳು ಹೋಗಿ
ತಿಂಡಿ
ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ಬುಧವಾರ, ಮೇ 18, 2016
ಶನಿವಾರ, ಮೇ 14, 2016
ಉಡುಪಿಯ ಶ್ರೀಕೃಷ್ಣ
ಟಿ.ಎಂ.ಸತೀಶ್
ಉಡುಪಿ ಇಂದು
ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹು ಪ್ರಾಚೀನವೂ,
ಪುರಾಣ
ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ
ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡಗೋಲು ಕೃಷ್ಣನ ಸೊಬಗನ್ನು
ಸವಿಯುವುದೇ ಒಂದು ಆನಂದ.
ಭಾರತದ ಏಳು
ಪ್ರಮುಖ ಯಾತ್ರಾಸ್ಥಳಗಳ ಪೈಕಿ ಉಡುಪಿಯೂ ಒಂದು. ಪುರಾಣ ಪ್ರಸಿದ್ಧವಾದ ಉಡುಪಿ,
ಕನಕದಾಸರಿಂದಾಗಿ ಇತಿಹಾಸ ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ
ಶ್ರೀಕೃಷ್ಣನ ದರ್ಶನಭಾಗ್ಯಕ್ಕಾಗಿ ವರ್ಷದ ಎಲ್ಲ ಕಾಲದಲ್ಲೂ ಭಕ್ತರು ಆಗಮಿಸುತ್ತಾರೆ.
ಭಗವಂತನನ್ನು ಮುಖ್ಯದ್ವಾರದ ಬದಲಿದೆ,
ಹಿಂಬದಿಯ
ಪುಟ್ಟ ನವರಂದ್ರದ ಕಿಟಕಿಯ ಮೂಲಕ ನೋಡಿ,
ಕೃಷ್ಣನ
ಸೊಬಗನ್ನು ಕಣ್ಮು ತುಂಬಿಕೊಂಡು ಅಮಿಮಾನಂದ ಪಡುತ್ತಾರೆ. ಈ ಕಿಟಕಿಗೆ ನವರಂಗ ಕಿಟಕಿ,
ಕನಕನ
ಕಿಂಡಿ ಎಂಬ ಹೆಸರುಗಳುಂಟು.
ಬೆಂಗಳೂರಿನಿಂದ
425 ಕಿ. ಮಿ. ದೂರದಲ್ಲಿ ರುವ ಉಡುಪಿ ಮಧ್ವಾಚಾರ್ಯರ ಪಾದಧೂಳಿನಿಂದ ಪುನೀತವಾದ
ಉಡುಪಿ,
ವೇದ ಶಿಕ್ಷಣ
ನೀಡುವ ಪ್ರಸಿದ್ಧ ಶಿಕ್ಷಣಕೇಂದ್ರವೂ ಹೌದು. ಕೃಷ್ಣ ಮಠದ ಸುತ್ತ ವಿಶಾಲವಾದ
ರಾಜಾಂಗಣವಿದೆ. ಇಲ್ಲಿ ಒಂದು ದೀರ್ಘ ಸುತ್ತು ಹಾಕಿದೆವೆಂದರೆ ನಮಗೆ
ಶ್ರೀಮಧ್ವಾಚಾರ‍್ಯ ಸ್ಥಾಪಿತ ಅಷ್ಟ ಮಠಗಳ ದರ್ಶನವೂ ಆಗುತ್ತದೆ. ರಾಜಾಂಗಣ
ಪ್ರವೇಶಿಸುತ್ತಿದ್ದಂತೆಯೇ ಕನಕನ ಕಿಂಡಿ ಭಕ್ತರ - ಪ್ರವಾಸಿಗರ ಗಮನ ಸೆಳೆಯುತ್ತದೆ.
ತುಸು ದೂರದಲ್ಲೇ ಪವಿತ್ರ ಮಧ್ವ ಸರೋವರ ಇದೆ.
ಉಡುಪಿಯಲ್ಲಿರುವ
ಶ್ರೀಕೃಷ್ಣನ ವಿಗ್ರಹ ಅಲ್ಲಿಗೆ ಬಂದ ಬಗ್ಗೆಯೂ ಒಂದು ಕಥೆ ಇದೆ. ಹಿಂದೆ
ದ್ವಾರಕಾನಗರದಲ್ಲಿ ಇದ್ದ ಶ್ರೀಕೃಷ್ಣನ
ಮೂಲಮೂರ್ತಿ ಪವಿತ್ರ ಗೋಪಿ ಚಂದನದಿಂದ
ಮುಚ್ಚಿಹೋಗಿತ್ತು. ನಾವಿಕರೊಬ್ಬರು ಚಂದನಲೇಪಿತ ಶ್ರೀಕೃಷ್ಣನೂ ಇದ್ದ ಇಡೀ ಚಂದನದ
ಗುಡ್ಡೆಯನ್ನು ತನ್ನ ದೋಣಿಯಲ್ಲಿ ತುಂಬಿಕೊಂಡು ಪಶ್ಚಿಮ ಕರಾವಳಿಯ ಕಡೆ
ಬರುತ್ತಿದ್ದಾಗ ಭೀಕರ ಬಿರುಗಾಳಿಗೆ ಆತನ ಹಡಗು ಸಿಲುಕಿತು. ಇದನ್ನು ತಮ್ಮ
ದಿವ್ಯದೃಷ್ಟಿಯಿಂದ ತಿಳಿದ ಮಧ್ವಾಚಾರ್ಯರು ಮಲ್ಪೆಯ ಬಳಿ ದೋಣಿ ದಡ ಮುಟ್ಟಲು
ನೆರವಾಗುತ್ತಾರೆ. ಆಗ ನಾವಿಕ ಇದಕ್ಕೆ ಪ್ರತಿಫಲವಾಗಿ ಏನು ಬೇಕು ಕೇಳಿ ಎಂದಾಗ.
ಮಧ್ವಾಚಾರ್ಯರು ಚಂದನಲೇಪಿತ ಶ್ರೀಕೃಷ್ಣನನ್ನು ಕೇಳಿ ಪಡೆಯುತ್ತಾರೆ. ಆನಂತರ
ಮೂರ್ತಿಯನ್ನು ನಿರ್ಮಲ ಜಲದಲ್ಲಿ ಶುಚಿಗೊಳಿಸಿ ತಮ್ಮ ಮಠದಲ್ಲಿ
ಪ್ರತಿಷ್ಠಾಪಿಸಿದ್ದಾರೆ. ಮತ್ತೊಂದು ಕಥೆಯ ರೀತ್ಯ ಬಿರುಗಾಳಿಗೆ ಸಿಲುಕಿದ
ದೋಣಿಯಲ್ಲಿದ್ದ ಶ್ರೀಕೃಷ್ಣಮೂರ್ತಿ ನೀರಿನಲ್ಲಿ ಮುಳುಗಿತು. ಇದನ್ನು ದಿವ್ಯ
ದೃಷ್ಟಿಯಿಂದ ಅರಿತ ಆಚಾರ್ಯರು ಸಮುದ್ರದಿಂದ ಕೃಷ್ಣಮೂರ್ತಿಯನ್ನು ಹೊರತೆಗೆದು
ಅದನ್ನು ತಂದು ೧೩ನೇ ಶತಮಾನದಲ್ಲಿ ಸಂಕ್ರಾಂತಿಯ ದಿನ ಉಡುಪಿಯಲ್ಲಿ
ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ಆಚಾರ‍್ಯರು ಭಕ್ತರು ದೇವರನ್ನು
ಪೂಜಿಸುತ್ತಾ ಬಂದಿದ್ದಾರೆ.
ಪರ್ಯಾಯ
: ಶ್ರೀ ಕೃಷ್ಣ
ವಿಗ್ರಹವನ್ನು ಮಧ್ವಾಚಾರ್ಯರ ಶಿಷ್ಯರು ಮಾತ್ರ ಮುಟ್ಟಬಹುದು. ಕೃಷ್ಣ ಮಠದ ಸುತ್ತ
ಎಂಟು ಮಠಗಳಿವೆ. ಈ ಮಠಗಳ ಮಠಾಶರು ಮಾತ್ರ ವಿಗ್ರಹವನ್ನು ಮುಟ್ಟಬಹುದು. ಪೂಜೆ
ಮಾಡಬಹುದು. ಅನ್ಯರಿಗೆ ವಿಗ್ರಹವನ್ನು ಸ್ಪರ್ಶಿಸಲು ಅವಕಾಶವಿಲ್ಲ. ಪ್ರತಿಯೊಂದು
ಮಠದವರೂ ಸರತಿಯ ಪ್ರಕಾರ ಎರಡು ವರ್ಷ ಪೂಜೆ ಮಾಡುತ್ತಾರೆ. ಒಂದು ಮಠದ ಪೂಜಾಕಾರದ ಅವ
ಮುಗಿದಾಗ ಇದನ್ನು ಮತ್ತೊಂದು ಮಠಕ್ಕೆ ವರ್ಗಾಯಿಸಲಾಗುತ್ತದೆ. ಈ ಅಕಾರ ಹಸ್ತಾಂತರ
ಕಾರ್ಯಕ್ರಮಕ್ಕೆ
ಪರ್ಯಾಯ ಎಂದು ಕರೆಯುತ್ತಾರೆ. ಉಡುಪಿ ಪರ್ಯಾಯ ಉಡುಪಿಯಲ್ಲಿ
ಜರುಗುವ ಎಲ್ಲ ಉತ್ಸವ
,
ಹಬ್ಬಗಳಿಗೆ
ಕಿರೀಟಪ್ರಾಯ. ಇಲ್ಲಿ ಪ್ರತಿ ವರ್ಷ ಸಂಕ್ರಾಂತಿಯಂದು ಜಾತ್ರೆ ನಡೆಯುತ್ತದೆ. ಈ
ಸಂದರ್ಭದಲ್ಲಿ ಕೃಷ್ಣನಿಗೆ ವಜ್ರಕಿರೀಟಧಾರಣೆ ನಡೆಯುತ್ತದೆ. ಜಾತ್ರೆ,
ಆಯನಗಳ
ಸಂದರ್ಭದಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿರುವ ಚಿನ್ನದ ರಥ ಎಳೆಯುತ್ತಾರೆ.
ಉಡುಪಿಗೆ
ಹೋಗಬೇಕೆಂದಿದ್ದೀರಾ
? ಬೆಂಗಳೂರಿನಿಂದ
ಕುಂದಾಪುರಕ್ಕೆ ಹೋಗುವ ಎಲ್ಲ ಬಸ್ಸುಗಳೂ ಉಡುಪಿ ನಗರಕ್ಕೆ ಹೋಗುತ್ತವೆ.
ಬೆಂಗಳೂರಿನಿಂದ ಉಡುಪಿಗೆ ರಸ್ತೆ ಮಾರ್ಗದಲ್ಲಿ ಸುಮಾರು ೯ ಗಂಟೆಗಳ ಪ್ರಯಾಣ. ಉಡುಪಿಯ
ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಒಂದು ಕಿಲೋ ಮೀಟರ್‌ಗಿಂತ ಹೆಚ್ಚು ದೂರವಿಲ್ಲ.
ಉಡುಪಿಯ ಸುತ್ತಮುತ್ತ ಇರುವ ಮರವಂತೆ,
ಮಲ್ಪೆ
ಬೀಚ್‌ಗಳು,
ಸೈಂಟ್
ಮೇರಿಸ್ ದ್ವೀಪ,
ಕೊಲ್ಲೂರು,
ಸೌಪರ್ಣಿಕಾ ನದಿಯ ಸಮುದ್ರ ಸೇರುವ ಸಂಗಮ ಸ್ಥಳವೇ ಮೊದಲಾದ ಪ್ರೇಕ್ಷಣೀಯ ಸ್ಥಳಗಳೂ
ಉಡುಪಿಯ ಪ್ರವಾಸೋದ್ಯಮಕ್ಕೆ ನೆರವಾಗಿವೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಮಂಗಳವಾರ, ಮೇ 10, 2016
ನುಡಿಮುತ್ತು - 34
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು. — ವಿನೋಬಾ ಭಾವೆ
“ಜಟೆಯಿಂದಾಗಲೀ, ಗೋತ್ರದಿಂದಾಗಲೀ, ಹುಟ್ಟಿನಿಂದಾಗಲೀ ಯಾರೂ ಬ್ರಾಹ್ಮಣರಾಗುವುದಿಲ್ಲ, ಇದು ಶುದ್ದ ಸುಳ್ಳು, ಕೇವಲ ಧರ್ಮಗ್ರಂಥಗಳಲ್ಲಿ ಬರೆದಿದೆ ಎಂದ ಮಾತ್ರಕ್ಕೆ ತಲಾಂತರಗಳಿಂದ, ನಿಮ್ಮ ಹಿರಿಯರಿಂದ ನಡೆದುಕೊಂಡು ಬಂದ ಪದ್ಧತಿ ಎಂದ ಮಾತ್ರಕ್ಕೆ ಅವುಗಳನ್ನು ಒಪ್ಪಿಕೊಳ್ಳಲೇ ಬೇಡಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ.” –ಬುದ್ಧ
“ಯಾರು ಬಹಳ ನಮ್ರರಾಗಿ ಕೆಳಕೆಳಗೆ ಇಳಿದರೋ ಅವರೆಲ್ಲ ಪಾರಾದರು, ಉಚ್ಚಕುಲೀನರಾಗಿದ್ದು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು.” –ಕಬೀರ
“ಆಧುನಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಹಿಂದೂ ಧರ್ಮದ ಅಂತರಂಗದಲ್ಲಿ ಸ್ಥಳವೇ ಇಲ್ಲ.ಈ ಹಿಂದೂ ಧರ್ಮ ಸಹೋದರತೆ ಹಾಗೂ ಸಮಾನತೆಯನ್ನು ಸದಾ ಹತ್ತಿಕ್ಕುತ್ತುರುತ್ತದೆ. ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಗಳನ್ನು ತೆಗೆದರೆ ಈ ಹಿಂದೂ ಧರ್ಮದಲ್ಲಿ ಇನ್ನೇನು ಉಳಿಯುವುದಿಲ್ಲ.” –ಅಂಬೇಡ್ಕರ್
“ಅಸ್ಪೃಶ್ಯತೆ ಹಿಂದೂ ಧರ್ಮದ ಭಾಗವೆಂದು ಯಾರಾದರೂ ಸಾಬೀತು ಮಾಡಿದರೆ ಅಂದೇ ಆ ಧರ್ಮ ನನಗೆ ಬೇಕಿಲ್ಲವೆಂದು ಸಾರುವೆ.” –ಮಹಾತ್ಮ ಗಾಂಧಿ
“ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ ಇತ್ಯಾದಿಗಳನ್ನು ಉಳಿಸಿಕೊಳ್ಳೋದಾದರೆ, ನನಗೆ ಆ ಭಾರತೀಯತೇನೇ ಬೇಡ. ನನಗೆ ಭಾರತೀಯನಾಗೋದಂದ್ರೆ ವಿಶ್ವ ಮಾನವನಾಗೋದು.” –ಕುವೆಂಪು
“ಗಾಂಧೀಜಿಯವರು ಆಸ್ತಿಕರಾಗಿಲ್ಲದಿದ್ದರೆ ಮೇಲ್ಜಾತಿಯವರು ಹಾಗೂ ಭಾರತದ ಸಂಘಪರಿವಾರ ಬಾಪೂ ಅವರನ್ನು ಸೈದ್ಧಾಂತಿಕವಾಗಿ ಎಂದೋ ಮುಗಿಸಿಬಿಡುತ್ತಿದ್ದರು.” –ಅಸ್ಗರ್ ಅಲಿ ಇಂಜಿನಿಯರ್
ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ.ಸಂತೋಷವೂ ಹಾಗೆಯೇ, ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.
*ಹಿಂದಿನ ಬಗ್ಗೆ ಯೋಚಿಸಿದರೆ ದುಃಖವಾದೀತು. ಮುಂದಿನ ಬಗ್ಗೆ ಚಿಂತಿಸಿದರೆ ಭಯ ವಾಗಬಹುದು. ಆದ್ದರಿಂದ ಇಂದಿನ ಬಗ್ಗೆ ಯೋಚಿಸೋಣ, ಇದರಿಂದ ನೆಮ್ಮದಿ,ಸಂತಸ ದೊರೆತೀತು.
ಸುಂದರವಾದ ವಸ್ತುಗಳು ಉತ್ತಮವಾಗಿರಲೇ ಬೇಕೆಂದಿಲ್ಲ. ಆದರೆ ಉತ್ತಮ ವಸ್ತುಗಳು ಸದಾ ಸುಂದರವಾಗಿರುತ್ತದೆ. ಸುಂದರವಾದ ಮುಖಕ್ಕಿಂತ, ಸುಂದರ ಹೃದಯವಂತರನ್ನು ಶೋದಿಸಬೇಕು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...