ಮಂಗಟ್ಟೆ ಹಕ್ಕಿ (ಹಾರ್ನ್ ಬಿಲ್)
ಹೆಣ್ಣು ಹಾರ್ನ್ ಬಿಲ್ ಮೊಟ್ಟೆಯಿಡುವ ಸಂದರ್ಭದಲ್ಲಿ, ಮರದ ಪೊಟರೆಯನ್ನು ಆಯ್ಕೆ ಮಾಡಿ, ಪೊಟರೆಯ
ಒಳಗೆ ಹೋಗಿ ಪೊಟರೆಯ ದ್ವಾರವನ್ನು ಕೇವಲ ಕೊಕ್ಕು ಇಳಿ ಬಿಡುವಷ್ಟು ಜಾಗ ಉಳಿಸಿ ಮುಚ್ಚಿ ಬಿಡುತ್ತದೆ.
ಪೊಟರೆಯ ಒಳಗೆ ಮೊಟ್ಟೆಯಿಟ್ಟು, ಮರಿ ಮಾಡಿ ಒಮ್ಮೆ ಮರಿಗಳು ಬಲಿತ ಮೇಲೆ ಪೊಟರೆಯ ದ್ವಾರವನ್ನು
ಗಂಡು ಹಕ್ಕಿ ಒಡೆಯುತ್ತದೆ. ಆಗ ಹೆಣ್ಣು ಹಕ್ಕಿ ಮರಿಗಳೊಂದಿಗೆ ಹೊರಗೆ ಬರುತ್ತದೆ. ಅಲ್ಲಿಯವರೆಗೆ ಗಂಡು
ಹಕ್ಕಿ ಪ್ರತಿ ದಿನವೂ ಆಹಾರವನ್ನು ತಂದು ಅ ಪೊಟರೆಯ ಒಳಗೆ ಹಾಕುತ್ತದೆ. ಹೆಣ್ಣು ಹಕ್ಕಿ ಅದನ್ನೇ
ಸೇವಿಸಿ ಬದುಕುತ್ತದೆ. ಮೊಟ್ಟೆಯೊಡೆದು ಮರಿ ಬರುವ ತನಕ ಹೆಣ್ಣು ಹಕ್ಕಿಗೆ ಹೊರಗಿನ ಪ್ರಪಂಚದ
ಸಂಪರ್ಕವೇ ಇರುವುದಿಲ್ಲ. ಅಕಸ್ಮಾತ್ ಗಂಡು ಹಕ್ಕಿ ವಾಪಾಸ್ ಬರದಿದ್ದರೆ ಹೆಣ್ಣು ಹಕ್ಕಿ ಅದೇ ಪೊಟರೆಯಲ್ಲಿ
ತನ್ನ ಕಡೆ ಉಸಿರು ಬಿಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.