fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮೇ 10, 2016

ನುಡಿಮುತ್ತು - 34



ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು. — ವಿನೋಬಾ ಭಾವೆ

 ಜಟೆಯಿಂದಾಗಲೀ, ಗೋತ್ರದಿಂದಾಗಲೀ, ಹುಟ್ಟಿನಿಂದಾಗಲೀ ಯಾರೂ ಬ್ರಾಹ್ಮಣರಾಗುವುದಿಲ್ಲ, ಇದು ಶುದ್ದ ಸುಳ್ಳು, ಕೇವಲ ಧರ್ಮಗ್ರಂಥಗಳಲ್ಲಿ ಬರೆದಿದೆ ಎಂದ ಮಾತ್ರಕ್ಕೆ ತಲಾಂತರಗಳಿಂದ, ನಿಮ್ಮ ಹಿರಿಯರಿಂದ ನಡೆದುಕೊಂಡು ಬಂದ ಪದ್ಧತಿ ಎಂದ ಮಾತ್ರಕ್ಕೆ ಅವುಗಳನ್ನು ಒಪ್ಪಿಕೊಳ್ಳಲೇ ಬೇಡಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ.” –ಬುದ್ಧ

ಯಾರು ಬಹಳ ನಮ್ರರಾಗಿ ಕೆಳಕೆಳಗೆ ಇಳಿದರೋ ಅವರೆಲ್ಲ ಪಾರಾದರು, ಉಚ್ಚಕುಲೀನರಾಗಿದ್ದು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು.” –ಕಬೀರ

ಆಧುನಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಹಿಂದೂ ಧರ್ಮದ ಅಂತರಂಗದಲ್ಲಿ ಸ್ಥಳವೇ ಇಲ್ಲ. ಹಿಂದೂ ಧರ್ಮ ಸಹೋದರತೆ ಹಾಗೂ ಸಮಾನತೆಯನ್ನು ಸದಾ ಹತ್ತಿಕ್ಕುತ್ತುರುತ್ತದೆ. ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಗಳನ್ನು ತೆಗೆದರೆ ಹಿಂದೂ ಧರ್ಮದಲ್ಲಿ ಇನ್ನೇನು ಉಳಿಯುವುದಿಲ್ಲ.” –ಅಂಬೇಡ್ಕರ್

ಅಸ್ಪೃಶ್ಯತೆ ಹಿಂದೂ ಧರ್ಮದ ಭಾಗವೆಂದು ಯಾರಾದರೂ ಸಾಬೀತು ಮಾಡಿದರೆ ಅಂದೇ ಧರ್ಮ ನನಗೆ ಬೇಕಿಲ್ಲವೆಂದು ಸಾರುವೆ.” –ಮಹಾತ್ಮ ಗಾಂಧಿ

ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ ಇತ್ಯಾದಿಗಳನ್ನು ಉಳಿಸಿಕೊಳ್ಳೋದಾದರೆ, ನನಗೆ ಭಾರತೀಯತೇನೇ ಬೇಡ. ನನಗೆ ಭಾರತೀಯನಾಗೋದಂದ್ರೆ ವಿಶ್ವ ಮಾನವನಾಗೋದು.”  –ಕುವೆಂಪು

ಗಾಂಧೀಜಿಯವರು ಆಸ್ತಿಕರಾಗಿಲ್ಲದಿದ್ದರೆ ಮೇಲ್ಜಾತಿಯವರು ಹಾಗೂ ಭಾರತದ ಸಂಘಪರಿವಾರ ಬಾಪೂ ಅವರನ್ನು ಸೈದ್ಧಾಂತಿಕವಾಗಿ ಎಂದೋ  ಮುಗಿಸಿಬಿಡುತ್ತಿದ್ದರು.” –ಅಸ್ಗರ್ ಅಲಿ ಇಂಜಿನಿಯರ್

ಮಳೆಗೂ  ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ.ಸಂತೋಷವೂ ಹಾಗೆಯೇ, ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.

*ಹಿಂದಿನ ಬಗ್ಗೆ ಯೋಚಿಸಿದರೆ ದುಃಖವಾದೀತು. ಮುಂದಿನ ಬಗ್ಗೆ ಚಿಂತಿಸಿದರೆ ಭಯ ವಾಗಬಹುದು. ಆದ್ದರಿಂದ ಇಂದಿನ ಬಗ್ಗೆ ಯೋಚಿಸೋಣ, ಇದರಿಂದ ನೆಮ್ಮದಿ,ಸಂತಸ ದೊರೆತೀತು.

ಸುಂದರವಾದ ವಸ್ತುಗಳು ಉತ್ತಮವಾಗಿರಲೇ ಬೇಕೆಂದಿಲ್ಲ. ಆದರೆ ಉತ್ತಮ ವಸ್ತುಗಳು ಸದಾ ಸುಂದರವಾಗಿರುತ್ತದೆ. ಸುಂದರವಾದ ಮುಖಕ್ಕಿಂತ, ಸುಂದರ ಹೃದಯವಂತರನ್ನು ಶೋದಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು