ಅಂಕಿತ ನಾಮ: ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 32 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ
ಪರಿಚಯ: ಕಾಲ ಸು. 1160. ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ. ನೆಲದಲ್ಲಿ ಚೆಲ್ಲಾಡಿದ ಅಕ್ಕಿಯನ್ನು ಆಯ್ದು ಬದುಕುವುವು ಇವನ ಕಾಯಕ ‘ಕಾಯಕವೇ ಕೈಲಾಸ’ ಎಂಬ ಪ್ರಸಿದ್ಧ ನುಡಿಗಟ್ಟು ಈತನ ವಚನದಲ್ಲಿ ದೊರೆಯುತ್ತದೆ. ಕಾಯಕ ಮತ್ತು ದಾಸೋಹ ಇವನ 32 ವಚನಗಳ ಮುಖ್ಯ ವಸ್ತುಗಳು, ನೋಡಿ: ಆಯ್ದಕ್ಕಿ ಲಕ್ಕಮ್ಮ.
ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ,
ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ.
ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ,
ಅಮರೇಶ್ವರಲಿಂಗವನರಿಯಬಾರದು.
ಅಮೃತದ ಸವಿ ಸ್ವಾದಿಸುವರಿಗಲ್ಲದೆ
ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ
ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ?
ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ
ನೇಮದ ಕಟ್ಟು ನಿನ್ನದು ಬಸವಣ್ಣಾ.
ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ?
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ,
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.