fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಡಿಸೆಂಬರ್ 28, 2015

ಗಾಡವಾದ ಪ್ರೀತಿ

ಒಮ್ಮೊಮ್ಮೆ ಅತಿ ಗಾಡವಾದ ಪ್ರೀತಿಯು ಸಹ 
 ಬರ ಬರುತ್ತ ಬಣ್ಣ ಕಳೆದುಕೊಂಡು ಸ್ವಾರ್ಥಕ್ಕೆ ಗುರಿಯಾಗಿ,  
ಕಲಹಕ್ಕೆ ಕಿಡಿಯಾಗಿ,  
ದ್ವೇಶಕ್ಕೆ ಅಡಿಯಾಗಿ
  ಪ್ರೀತಿಯೇ ಅಸೂಯೆಯೆಂಬ ಕತ್ತಿಯಂತಾಗಿ  
ಅವನನ್ನಿವಳು ಇವನನ್ನವಳು ಹಿಂಬಾಲಿಸಿ 
 ಕಾಡಿಸಿ ಕೊನೆಗೆ ಅಲ್ಲೊಂದು ಅಂತ್ಯವನ್ನಾಗಿಸುವಂತೆ ಮಾಡಿಬಿಡುತ್ತದೆ.

ಶನಿವಾರ, ಡಿಸೆಂಬರ್ 26, 2015

ಅವಸರದ ರೇಕಣ್ಣ

ಶುಕ್ರವಾರ, ಡಿಸೆಂಬರ್ 25, 2015

+50,000

ಇಂದಿಗೆ +50,000 ಪುಟಗಳ ವೀಕ್ಷಣೆಯಾದವು, ನಿಮ್ಮ ಈ ಕರುನಾಡ ಕಂದನ ತಾಣವನ್ನು ವೀಕ್ಷಿಸುತ್ತಿರುವ ತಮಗೆಲ್ಲರಿಗೂ ಹೃತ್ಪೂರವವಾದ ಧನ್ಯವಾದಗಳನ್ನು ಹೇಳುತ್ತ, ಅನಂತದೂದ್ದಕ್ಕೂ ಬೆಳೆಯಲಿ ಎಂಬ ಹಂಬಲವನ್ನು ಈ ಕರುನಾಡ ಕಂದನದ್ದಾಗಿಗೆ.
ನಿಮ್ಮ ಈ ಕರುನಾಡ ಕಂದನ ಕನ್ನಡದ ಏಳಿಗೆಗ ಸದಾ ಶ್ರಮಿಸುವವನು,
..
ಕನ್ನಡವೇ ಸತ್ಯ, ಅದನ್ನು ಬಳಸು ನೀ ನಿತ್ಯ.
ಬನ್ನಿ ಕನ್ನಡಿಗರು ಕೈ ಜೋಡಿಸಿ, ಕನ್ನಡ ಬೆಳಸಿ, ಮುಂದಿನ ಪೀಳಿಗೆಗೆ ತಿಳಿಸಿ.

ಗೆನೆಡ್ + ಇಂಚು ಹುಳ



ಗುರುವಾರ, ಡಿಸೆಂಬರ್ 24, 2015

ಸಮಾಧಿ



  • ಸೊಳ್ಳೆ, ಹೆಂಡತಿ ಮತ್ತು ಅಲಾರ್ಮಗಳ ಕಾಟವಿಲ್ಲದೇ ನಿಶ್ಚಿಂತವಾಗಿ ಮಲಗಬಹುದಾದ ಶಯ್ಯಾಸನ
  • ಇಲ್ಲಿನ ನಿದ್ರಾ ಭಂಗಿಗೆ ಶವಾಸನ ಎನ್ನಬಹುದು
  • ನಮ್ಮೆಲ್ಲರ ಪಯಣದ ಅಂತಿಮ ಗುರಿ ಗೋರಿ
  • ಇದನ್ನು ಕಟ್ಟಲೆಂದು ಬಳಸುವ ಬಂಡವಾಳವೆಲ್ಲ ಡೆಡ್ ಇನ್ವೆಷ್ಟ್ಮೆಂಟೇ
  • ಮಣ್ಣಲ್ಲಿ ಮಣ್ಣಾಗುವ ಸ್ಥಳ
  • ಶಾಶ್ವತ ಸಮಾಧಾನ ಸಿಗೋದು ಇಲ್ಲೊಂದೇ
  • ಸತ್ತವಗೆ ಸಮಾಧಿ ಕಟ್ಟುವುದಕ್ಕಿಂತ ಇರುವವರಿಗೆ ಮನೆ ಕಟ್ಟಿಸುವುದು ಲೇಸು
  • ಜೀವನದ ಪ್ರಶ್ನೆಗೆ ಅಂತಿಮ ಉತ್ತರ
  • ಯೋಗಶಾಸ್ತ್ರದ ಪ್ರಕಾರ ಇದೊಂದು ಸ್ಥಿತಿ. ಸಮಾಧಿ ಸ್ಥಿತಿಗೆ ತಲುಪಬಲ್ಲವ ಸಮಾಧಿಯಾಗಲು ಹೆದರಲಾರ

-ವಿಶ್ವನಾಥ ಸುಂಕಸಾಳ

ಮಂಗಳವಾರ, ಡಿಸೆಂಬರ್ 22, 2015

ಅಮ್ಮ ನಿನ್ನ ಹೊಗಳಲು

ಅಮ್ಮ ನಿನ್ನ ಹೊಗಳಲು ಯಾವ ಪದವ ಹುಡುಕಲಿ?
  ಅಮ್ಮ ನಿನ್ನ ಮಮತೆ ಪ್ರೀತಿಯ ಹೇಗೆ ತಾನೆ ಮರೆಯಲಿ?
ಅಮ್ಮ ನಿನ್ನ ಮಡಿಲದು ಪ್ರೀತಿ ಸುಧೆಯ ಕಡಲು.
 ಅಮ್ಮ ನಿನ್ನ ಮಡಿಲದು ಸ್ವರ್ಗಕಿಂತ ಮಿಗಿಲು.
ಅಮ್ಮ ನಿನ್ನ ನುಡಿಗಳು ಹಾಲು ಜೇನ ಸಂಗಮ. 
ಅಮ್ಮ ನಿನ್ನ ಮೊಗವದು ಹುಣ್ಣಿಮೆಯ ಚಂದ್ರಮ.
ಅಮ್ಮ ನೀನು ಸನಿಹವಿರಲು ಗವನ್ನೇ ಮರೆವೆನು. 
ಅಮ್ಮ ನಿನ್ನ ಜೊತೆಯಿರಲು ಗವನ್ನೇ ಗೆಲ್ಲುವೆನು.
ಮುಂದಿನಾ ಜನುಮವಿರಲು ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು ಹರುಷದಲ್ಲಿ ಕುಣಿವೆನು.
                                  ಕವಿ ಕನ್ನಡಿಗ ವಿಜಯ್ ಜಿ

ಭಾನುವಾರ, ಡಿಸೆಂಬರ್ 20, 2015

ಹತ್ತು ಹತ್ತು ಇಪ್ಪತ್ತು

ಹತ್ತು ಹತ್ತು ಇಪ್ಪತ್ತು,
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು ನಲವತ್ತು,
ಎದುರಿಗೆ ಮಾವಿನ ಮರವಿತ್ತು.
ನಲವತ್ತು ಹತ್ತು ಐವತ್ತು
ಮಾವಿನ ಮರದಲಿ ಕಾಯಿತು
ಐವತ್ತು ಹತ್ತು ಅರವತ್ತು
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪನುದುರಿತ್ತು
ಎಪ್ಪತ್ತು ಹತ್ತು ಎಂಭತ್ತು
ಮಾಲಿಯ ಕಂಡನು ಸಂಪತ್ತು.
ಎಂಭತ್ತು ಹತ್ತು ತೊಂಭತ್ತು
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು ನೂರು
ಓಡುತ ಮನೆಂiiನು ಸೇರು || ಜಿ.ಪಿ ರಾಜರತ್ನಂ.

1.. ಜಾಹೀರಾತು

2.ಜಾಹೀರಾತು