fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಡಿಸೆಂಬರ್ 14, 2015

ಸೋಮನಾಥ ದೇವಾಲಯ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಪುರ. ಈ ಗ್ರಾಮದಲ್ಲಿರುವ ಸೋಮನಾಥ ದೇವಾಲಯ ಪವಿತ್ರ ತಾಣವಾಗಿದೆ.  ಸೋಮನಾಥೇಶ್ವರ ದೇವಾಲಯದ ಒಳಗೆ ನಾನಾ ಬಗೆಯ, ನಾನಾ ಆಕಾರದ ಸಾವಿರಾರು ಶಿವಲಿಂಗಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಅರ್ಧ ಇಂಚಿನ ಲಿಂಗದಿಂದ ಹಿಡಿದು ದೊಡ್ಡಗಾತ್ರದ ಬೃಹದೇಶ್ವರ ಲಿಂಗಗಳೂ ಇಲ್ಲಿವೆ. ಹೀಗಾಗೇ ಈ ಕ್ಷೇತ್ರ ಕೋಟಿಲಿಂಗಕ್ಷೇತ್ರ ಎಂದು ಖ್ಯಾತವಾಗಿದೆ.
ಇಲ್ಲಿರುವ ಲಿಂಗಗಳು ಪಂಚಲಿಂಗ, ವರದಾಶಂಕರ ಲಿಂಗ, ಸಂಗಮೇಶ್ವರಲಿಂಗ, ಅಷ್ಟಲಿಂಗ, ನವಲಿಂಗ, ರುದ್ರಾಕ್ಷಿ ಲಿಂಗ, ರುದ್ರಲಿಂಗ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತವೆ.
ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎಂದು ಊರಿನ ಹಿರಿಯರು ಹೇಳುತ್ತಾರೆ. ಕ್ರಿ.ಶ.೧೪೬೯ರ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯ ನಿರ್ಮಾಣವಾಗಿರಬಹುದು ಇದನ್ನು ವಿಜಯನಗರದ ದೊರೆ ಎರಡನೇ ವೀರಪ್ರತಾಪ ಸದಾಶಿವರಾಯ ಕಟ್ಟಿಸಿರುವನೆಂದು ದೇವಾಲಯದ ಹೊರಗೆ ಇರುವ ಶಾಸನ ತೋರಿಸುತ್ತಾರೆ.
ದೇವಾಲಯದ ಪ್ರಾಕಾರದಲ್ಲಿ ಹಲವೆಡೆ ಸಾಲು ಸಾಲು ಲಿಂಗಗಳಿದ್ದರೆ, ಮತ್ತೆ ಕೆಲವೆಡೆ ಗುಂಪುಗಳಾಗಿ ಲಿಂಗಪ್ರತಿಷ್ಠೆ ಮಾಡಲಾಗಿದೆ. ಮತ್ತೆ ಕೆಲವೆಡೆ ಹಂತ ಹಂತಗಳಲ್ಲಿ ಲಿಂಗಗಳಿವೆ.
ಸೋಮನಾಥ ದೇವಾಲಯದ ಗರ್ಭಗೃಹದ ಮುಂದೆ ಕಲ್ಲಿನ ಕಂಬವೊಂದರ ಮೇಲೆ ಶಿವಲಿಂಗವಿದೆ. ಇದನ್ನು ಹರಿವಾಣ ಲಿಂಗ ಎಂದು ಕರೆಯಲಾಗುತ್ತದೆ. ಕೊಳವೆ ಜೋಡಿಸಿರುವ ಈ ಲಿಂಗಕ್ಕೆ ಅಭಿಷೇಕ ಮಾಡಿ, ಲಿಂಗ ತಿರುಗಿಸಿದರೆ ಆ ತೀರ್ಥ ದೇವಾಲಯದಲ್ಲಿರುವ ಎಲ್ಲ ಶಿವಲಿಂಗಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳುತ್ತಾರೆ. ಈಗ ಆ ವ್ಯವಸ್ಥೆ ಇಲ್ಲ ಆದರೆ ಲಿಂಗ ತಿರುಗುತ್ತದೆ.
ದೇವಾಲಯದ ಗರ್ಭಗೃಹದ ಎಡಭಾಗದಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋಪಾಲಕರನ್ನು ಕಾಪಾಡಿದ ಕೃಷ್ಣ, ಗಣಪತಿ, ನವಿಲೇರಿ ಸವಾರಿ ಮಾಡುತ್ತಿರುವ ಷಣ್ಮುಖ, ರಾವಣ, ಗಣಪತಿ ಇರುವ ಗೋಕರ್ಣ ಮಹಾತ್ಮೆ, ಗಜಗೌರಿ ವ್ರತ, ಬೇಡರ ಕಣ್ಣಪ್ಪ ಮೊದಲಾದ ದೃಶ್ಯಾವಳಿಗಳಿವೆ.
koppal, pura, kotilinga, somanatha temple, ಸೋಮನಾಥ ದೇವಾಲಯ, ಪುರ, ಕೊಪ್ಪಳ, ಕೋಟಿಲಿಂಗ, kannadaratna.com, our temples.in, ಕರ್ನಾಟಕದ ದೇವಾಲಯಗಳು, ನಮ್ಮ ದೇವಾಲಯಗಳು
ದೇವಾಲಯದಲ್ಲಿ ಅಮೃತಬಾವಿ ಸೇರಿದಂತೆ ಐದು ಬಾವಿಗಳಿವೆ. ಮೂರನೇ ದ್ವಾರದಲ್ಲಿರುವ ಹಾಲಿನ ಬಾವಿಯ ಸುತ್ತ ಕಾಮಧೇನು, ಕಲ್ಪವೃಕ್ಷ, ಆಂಜನೇಯ ವಿಗ್ರಹಗಳಿವೆ. ದೇವಾಲಯದಲ್ಲಿರುವ ಮೂರು ಕಾಲಿನ ಮಂಟಪ, ವೀರಭದ್ರ ಮೂರ್ತಿ ಗಮನಾರ್ಹವಾಗಿದೆ. ದೇವಾಲಯದ ಗೋಪುರದ ಮೇಲೆ ಸಹ ಲಿಂಗಾಕೃತಿಯ ಸಾವಿರಾರು ಗೋಪುರಗಳಿವೆ.


ಶಿವರಾತ್ರಿಯ ವೇಳೆ ಇಲ್ಲಿ ರಥೋತ್ಸವ ಜರುಗುತ್ತದೆ. ಎಳ್ಳಮಾವಾಸ್ಯೆ, ನಾಗರಪಂಚಮಿ ಹಾಗೂ ಶ್ರಾವಣದಲ್ಲಿ ಇಲ್ಲಿ ಪೂಜೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪರೂಪದ ಈ ದೇವಾಲಯ ಸಂರಕ್ಷಣೆಗೆ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ಪ್ರಜ್ಞಾವಂತರ ಮನವಿ.

1 ಕಾಮೆಂಟ್‌:

  1. ಬಹಳ ಅರ್ಥಪೂರ್ಣ ಬರಹಗಳಿವೆ ಸರ್,,,,,,,,, ಬ್ಲಾಗಿನ ಬಣ್ಣವನ್ನು ಸರಳವಾದ ಬಣ್ಣಕ್ಕೆ ಬದಲಾಯಿಸಿದರೆ, ಕಣ್ಣಿಗೆ ಹಾಗು ಮನಸ್ಸಿಗೆ ಮುದ ನೀಡುತ್ತದೆ (ಅನಿಸಿಕೆ ಅಷ್ಟೇ, ತಪ್ಪಿದ್ದರೆ ಕ್ಷಮಿಸಿ)

    ಪ್ರತ್ಯುತ್ತರಅಳಿಸಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು