ಹತ್ತು ಹತ್ತು
ಇಪ್ಪತ್ತು,
ತೋಟಕೆ ಹೋದನು
ಸಂಪತ್ತು
ಇಪ್ಪತ್ತು ಹತ್ತು
ಮೂವತ್ತು
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು
ನಲವತ್ತು,
ಎದುರಿಗೆ ಮಾವಿನ
ಮರವಿತ್ತು.
ನಲವತ್ತು ಹತ್ತು
ಐವತ್ತು
ಮಾವಿನ ಮರದಲಿ
ಕಾಯಿತು
ಐವತ್ತು ಹತ್ತು
ಅರವತ್ತು
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು
ಎಪ್ಪತ್ತು
ಕಾಯಿಯು ತಪ
ತಪನುದುರಿತ್ತು
ಎಪ್ಪತ್ತು ಹತ್ತು
ಎಂಭತ್ತು
ಮಾಲಿಯ ಕಂಡನು
ಸಂಪತ್ತು.
ಎಂಭತ್ತು ಹತ್ತು
ತೊಂಭತ್ತು
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು
ನೂರು
ಓಡುತ ಮನೆಂiiನು ಸೇರು || ಜಿ.ಪಿ ರಾಜರತ್ನಂ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.