ಅಂಕಿತ ನಾಮ:
ಸದ್ಯೋಜಾತಲಿಂಗ
ಕಾಲ: 1160
ದೊರಕಿರುವ ವಚನಗಳು: 105 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. 105 ವಚನಗಳು ದೊರೆತಿವೆ. ತತ್ವಚಿಂತನೆ ಇವನ ಮುಖ್ಯ ಆಸಕ್ತಿ. ಬೆಡಗಿನ ವಚನಗಳ ಮಾರ್ಗಕ್ಕೆ ಒಲಿದವನು.

ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ,
ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ
ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ?
ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ
ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ,
ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ
ಆಶೆಯ ಪಾಶದ ಪರಿಭ್ರಮಣವನರಿತು
ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ,
ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು
ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ
ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ.

ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ
ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ?
ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ
ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ?
ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ.
ಇಂತೀ ಆಚರಣೆ ಆಶ್ರಿತದ ಭೇದ.
ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.