ಬೇಕಾಗುವ ಸಾಮಗ್ರಿಗಳು
- ಎಣ್ಣೆ ಒಂದು ಸೌಟು
- ಶುಂಟಿ
- ಬೆಳ್ಳುಳ್ಳಿ(ಪೇಸ್ಟ್)
- 1 ಚಮಚ ಚಿಲ್ಲಿ ಸಾಸ್/ಹ.
- ಮೆಣಸಿನ ಕಾಯಿ ಪೇಸ್ಟ್
- 3 ಚಮಚ ದೊ.ಮೆಣಸಿನಕಾಯಿ,
- ಈರುಳ್ಳಿ,
- ಎಲೆಕೋಸು,
- ಆಲೂಗಡ್ಡೆ,
- ಕ್ಯಾರೆಟ್,
- ಹುರಳೀಕಾಯಿ (ಪ್ರತಿಯೊಂದೂ ತೆಳ್ಳಗೆ ಉದ್ದಕ್ಕೆ ಸೀಳಿದ್ದು ಕಾಲು ಲೋಟಗಳು)
- ಹಸಿಬಟಾಣಿ ಕಾಲು ಲೋಟ
- ಸೋಯಾ ಮತ್ತು ಟೊಮಾಟೋ ಸಾಸ್ ಎರಡು ಚಮಚ
- ಬಾಸುಮತಿ ಅನ್ನ ಒಂದು ಲೋಟ ಅಕ್ಕಿಯದು
- ನಿಂಬೆರಸ
- ಕೊತ್ತಂಬರಿ
- ರುಚಿಗೆತಕ್ಕಷ್ಟು ಉಪ್ಪು
ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ,ಹ.ಮೆಣಸಿನ ಕಾಯಿ ಪೇಸ್ಟ್ ಹಾಕಿ ಒಂದು ನಿಮಿಷ ಬಾಡಿಸಿ ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ,ಹಸಿಬಟಾಣಿ,ಸೋಯಾ ಮತ್ತು ಟೊಮಾಟೋ ಸಾಸ್ ಹಾಕಿ ಮೂರು ನಾಲ್ಕು ನಿಮಿಷ ಬಾಡಿಸಿ ಹರವಿದ ಬಾಸುಮತಿ ಅನ್ನಕ್ಕೆ ಕಲಸಿ, ತಿನ್ನಲು ಬಡಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.