ರಜೆಯ ಮಜ ಮುಗಿಯಿತು |
ಶಾಲೆ ಶುರು ಆಯಿತು |
ಜಿಟಿ ಜಿಟಿ ಮಳೆಯಲಿ ಛತ್ರಿ ಹಿಡಿದು |
ಶಾಲೆಗೆ ಹೋಗಲು ಬಲು ಖುಷಿಯು |
ಅಮ್ಮನು ಕಟ್ಟಿದ ತಿಂಡಿಯ ಡಬ್ಬಿ ಕೈಯಲಿ ಹಿಡಿದು |
ಅಪ್ಪನು ತಂದ ಹೊಸ ಬ್ಯಾಗು ಹೆಗಲಿಗೆ ಹಾಕಿ |
ಯುನಿಫಾರ್ಮ್ ಧರಿಸಿ |
ಶಾಲೆಗೆ ಹೋಗೋಣ |
ನಮ್ಮ ಶಾಲೆಯ ಸುಂದರ |
ಇದುವೆ ದೇವರ ಮಂದಿರ |
ವಿದ್ಯೆ ನೀಡಿ ಬುದ್ಧಿ ಕೊಡುವ |
ಗುರುವೆ ನಮ್ಮಯ ದೇವರು |
ಅವರ ಪಾದಕೆ ಶಿರವ ಬಾಗಿಸಿ |
ಭಕ್ತಿಯಿಂದಲಿ ನಮಿಸೋಣ |
ಪಾಠ ಮುಗಿಸಿ ಆಟ ಆಡಲು |
ಮೈದಾನಕ್ಕೆ ಜಿಗಿಯೋಣ |
ಶಾಲೆಯ ಕೈ ತೋಟದಲ್ಲಿ |
ಹೂವು ಹಣ್ಣನು ಬೆಳೆಸೋಣ |
ನಿತ್ಯವು ಹಸಿರು ಕಾಣುವಂತೆ |
ದಿನವೂ ನೀರುಣಿಸೋಣ |
ಗುರುಗಳು ಕಲಿಸಿದ ಪಾಠವ ಕಲಿತು |
ಅಮ್ಮನ ಮಡಿಲ ಸೇರೋಣ |
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಶನಿವಾರ, ಸೆಪ್ಟೆಂಬರ್ 20, 2014
ಶಾಲೆಗೆ ಹೋಗೋಣ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.