ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಡಿಸೆಂಬರ್ 14, 2015

ಸೋಮನಾಥ ದೇವಾಲಯ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಪುರ. ಈ ಗ್ರಾಮದಲ್ಲಿರುವ ಸೋಮನಾಥ ದೇವಾಲಯ ಪವಿತ್ರ ತಾಣವಾಗಿದೆ.  ಸೋಮನಾಥೇಶ್ವರ ದೇವಾಲಯದ ಒಳಗೆ ನಾನಾ ಬಗೆಯ, ನಾನಾ ಆಕಾರದ ಸಾವಿರಾರು ಶಿವಲಿಂಗಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಅರ್ಧ ಇಂಚಿನ ಲಿಂಗದಿಂದ ಹಿಡಿದು ದೊಡ್ಡಗಾತ್ರದ ಬೃಹದೇಶ್ವರ ಲಿಂಗಗಳೂ ಇಲ್ಲಿವೆ. ಹೀಗಾಗೇ ಈ ಕ್ಷೇತ್ರ ಕೋಟಿಲಿಂಗಕ್ಷೇತ್ರ ಎಂದು ಖ್ಯಾತವಾಗಿದೆ.
ಇಲ್ಲಿರುವ ಲಿಂಗಗಳು ಪಂಚಲಿಂಗ, ವರದಾಶಂಕರ ಲಿಂಗ, ಸಂಗಮೇಶ್ವರಲಿಂಗ, ಅಷ್ಟಲಿಂಗ, ನವಲಿಂಗ, ರುದ್ರಾಕ್ಷಿ ಲಿಂಗ, ರುದ್ರಲಿಂಗ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತವೆ.
ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎಂದು ಊರಿನ ಹಿರಿಯರು ಹೇಳುತ್ತಾರೆ. ಕ್ರಿ.ಶ.೧೪೬೯ರ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯ ನಿರ್ಮಾಣವಾಗಿರಬಹುದು ಇದನ್ನು ವಿಜಯನಗರದ ದೊರೆ ಎರಡನೇ ವೀರಪ್ರತಾಪ ಸದಾಶಿವರಾಯ ಕಟ್ಟಿಸಿರುವನೆಂದು ದೇವಾಲಯದ ಹೊರಗೆ ಇರುವ ಶಾಸನ ತೋರಿಸುತ್ತಾರೆ.
ದೇವಾಲಯದ ಪ್ರಾಕಾರದಲ್ಲಿ ಹಲವೆಡೆ ಸಾಲು ಸಾಲು ಲಿಂಗಗಳಿದ್ದರೆ, ಮತ್ತೆ ಕೆಲವೆಡೆ ಗುಂಪುಗಳಾಗಿ ಲಿಂಗಪ್ರತಿಷ್ಠೆ ಮಾಡಲಾಗಿದೆ. ಮತ್ತೆ ಕೆಲವೆಡೆ ಹಂತ ಹಂತಗಳಲ್ಲಿ ಲಿಂಗಗಳಿವೆ.
ಸೋಮನಾಥ ದೇವಾಲಯದ ಗರ್ಭಗೃಹದ ಮುಂದೆ ಕಲ್ಲಿನ ಕಂಬವೊಂದರ ಮೇಲೆ ಶಿವಲಿಂಗವಿದೆ. ಇದನ್ನು ಹರಿವಾಣ ಲಿಂಗ ಎಂದು ಕರೆಯಲಾಗುತ್ತದೆ. ಕೊಳವೆ ಜೋಡಿಸಿರುವ ಈ ಲಿಂಗಕ್ಕೆ ಅಭಿಷೇಕ ಮಾಡಿ, ಲಿಂಗ ತಿರುಗಿಸಿದರೆ ಆ ತೀರ್ಥ ದೇವಾಲಯದಲ್ಲಿರುವ ಎಲ್ಲ ಶಿವಲಿಂಗಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳುತ್ತಾರೆ. ಈಗ ಆ ವ್ಯವಸ್ಥೆ ಇಲ್ಲ ಆದರೆ ಲಿಂಗ ತಿರುಗುತ್ತದೆ.
ದೇವಾಲಯದ ಗರ್ಭಗೃಹದ ಎಡಭಾಗದಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋಪಾಲಕರನ್ನು ಕಾಪಾಡಿದ ಕೃಷ್ಣ, ಗಣಪತಿ, ನವಿಲೇರಿ ಸವಾರಿ ಮಾಡುತ್ತಿರುವ ಷಣ್ಮುಖ, ರಾವಣ, ಗಣಪತಿ ಇರುವ ಗೋಕರ್ಣ ಮಹಾತ್ಮೆ, ಗಜಗೌರಿ ವ್ರತ, ಬೇಡರ ಕಣ್ಣಪ್ಪ ಮೊದಲಾದ ದೃಶ್ಯಾವಳಿಗಳಿವೆ.
koppal, pura, kotilinga, somanatha temple, ಸೋಮನಾಥ ದೇವಾಲಯ, ಪುರ, ಕೊಪ್ಪಳ, ಕೋಟಿಲಿಂಗ, kannadaratna.com, our temples.in, ಕರ್ನಾಟಕದ ದೇವಾಲಯಗಳು, ನಮ್ಮ ದೇವಾಲಯಗಳು
ದೇವಾಲಯದಲ್ಲಿ ಅಮೃತಬಾವಿ ಸೇರಿದಂತೆ ಐದು ಬಾವಿಗಳಿವೆ. ಮೂರನೇ ದ್ವಾರದಲ್ಲಿರುವ ಹಾಲಿನ ಬಾವಿಯ ಸುತ್ತ ಕಾಮಧೇನು, ಕಲ್ಪವೃಕ್ಷ, ಆಂಜನೇಯ ವಿಗ್ರಹಗಳಿವೆ. ದೇವಾಲಯದಲ್ಲಿರುವ ಮೂರು ಕಾಲಿನ ಮಂಟಪ, ವೀರಭದ್ರ ಮೂರ್ತಿ ಗಮನಾರ್ಹವಾಗಿದೆ. ದೇವಾಲಯದ ಗೋಪುರದ ಮೇಲೆ ಸಹ ಲಿಂಗಾಕೃತಿಯ ಸಾವಿರಾರು ಗೋಪುರಗಳಿವೆ.


ಶಿವರಾತ್ರಿಯ ವೇಳೆ ಇಲ್ಲಿ ರಥೋತ್ಸವ ಜರುಗುತ್ತದೆ. ಎಳ್ಳಮಾವಾಸ್ಯೆ, ನಾಗರಪಂಚಮಿ ಹಾಗೂ ಶ್ರಾವಣದಲ್ಲಿ ಇಲ್ಲಿ ಪೂಜೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪರೂಪದ ಈ ದೇವಾಲಯ ಸಂರಕ್ಷಣೆಗೆ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ಪ್ರಜ್ಞಾವಂತರ ಮನವಿ.

ಭಾನುವಾರ, ಡಿಸೆಂಬರ್ 13, 2015

ನವೆಂಬರ್, 2015 ರ ಟಾಪ್ - 3

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 )  ನವೆಂಬರ್ - 2015

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಕಿನ್ಯಾ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

UC Browser

ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Windows

Android

Macintosh

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

 Windows 8.1
  Windows 7
Google Web Preview
 ಕಳೆದ ತಿಂಗಳ ಪುಟವೀಕ್ಷಣೆಗಳು
2,123
ಕಳೆದ ತಿಂಗಳಲ್ಲಿ  G+ ಒಟ್ಟು ಸದಸ್ಯರು ಸಂಖ್ಯೆ
+ 63

ಗುರುವಾರ, ಡಿಸೆಂಬರ್ 10, 2015

ನುಡಿಮುತ್ತು 29

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
— ಮಾಸ್ತಿ

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕುಬರಿಯ ಚೀಲಗಳಾಗಬಾರದು
— ಕುವೆಂಪು

ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ ಕಾಣುವ ಪ್ರತಿಬಿಂಬವೇ ಪತಿ.
ತ್ರಿವೇಣಿ

ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ. 
— ಸಿಗ್ಮಂಡ್ ಫ್ರಾಯ್ಡ್

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆಮೌನ.
— ಕನ್‌ಫ್ಯೂಷಿಯಸ್

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು 
— ಮಹಾತ್ಮಾ ಗಾಂಧಿ

ನಾಚಿಕೆ ಅನ್ನುವುದನ್ನು ಬಿಟ್ಟಾಗ ಮಾನವ ಮೃಗನಾಗುತ್ತಾನೆ.
-ಯಾರೋ

ನಿಮ್ಮ ನಿನ್ನೆಯ ದಿನ ಇಂದಿನ ದಿನವನ್ನು ನುಂಗದಂತೆ ನೋಡಿಕೊಳ್ಳಿ.
-ಅನಾಮಿಕ

ನಗಲು ಬರುವವನು ಮಾತ್ರ ಇತರರನ್ನೂ ನಗಿಸಬಲ್ಲ.
-ವಿಟ್ ಮನ್

ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.
-ವಿವೇಕಾನಂದ
                                                                          ಕೃಪೆ : ಮಾ.ಕೃ.ಮಂಜು

ಬುಧವಾರ, ಡಿಸೆಂಬರ್ 09, 2015

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 6

ಮಾರ್ಮಿಸೆಟ್  ಜಾತಿಯ ಕೋತಿ



ಮಾರ್ಮಿಸೆಟ್ ಜಾತಿಯ ಕೋತಿಗಳಲ್ಲಿ ಒಂದು ವಿಶೇಷ ಗುಣವಿದೆ. ಮರಿಗಳ ಜನ್ಮಕ್ಕೆ ಕಾರಣವಾಗುವ ಮಾರ್ಮಿಸೆಟ್ ಜಾತಿ ಕೋತಿಗಳು ಮರಿಗಳಿಗೆ  ಕೇವಲ ಆಹಾರ ಒದಗಿಸುವುದಷ್ಟೇ ಅಲ್ಲದೆ ಮರಿ ಹಾಕಿದ ತಾಯಿ ಕೋತಿಗೂ ಆಹಾರವನ್ನು ಅರಸಿ ತಂದು ನೀಡುತ್ತದೆ. ತಾಯಿ ಕೋತಿ ಮರಿಗಳು  ದೊಡ್ಡದಾಗಿ ಬೆಳೆಯುವವರೆಗೂ ಮರಿಗಳ ಆರೈಕೆ ಮಾಡುತ್ತದೆ.

1.. ಜಾಹೀರಾತು

2.ಜಾಹೀರಾತು