ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಮೇ 09, 2022

ನಮ್ಮ ನಂಬಿಕೆಗಳು 17


೧೭) ನವರಾತ್ರಿಗಳು ಏಕೆ ಇವೆ?
ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕೂ ಮತ್ತು ಇಂದಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು- ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂದು ನಾವು ಆಚರಿಸುತ್ತೇವೆ. ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಆಹಾರ ಪದ್ಧತಿಗೆ ಹೊಂದಿ ಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತಸಮೂಹವು ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿ ಕೊಳ್ಳುತ್ತಾರೆ. ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

ಭಾನುವಾರ, ಮೇ 01, 2022

🦋 ಎಲ್ಲ ತಿಂಗಳಿನ ಮಹತ್ವ ದಿನಗಳ ಪಟ್ಟಿ‌ (ಜನೇವರಿ - ಡಿಸೆಂಬರ್) 🦋

1 - 12 ತಿಂಗಳಗಳ ಪಟ್ಟಿ
ಜನೇವರಿ ಪೇಬ್ರವರಿ
ಮಾರ್ಚ್ ಎಪ್ರೀಲ ಮೇ ಜೂನ್
  ಜುಲೈ     ಅಗಸ್ಟ   ಸೆಪ್ಟಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್

ಮೇ ತಿಂಗಳ ಮಹತ್ವದ ದಿನಗಳು

ಗೌತಮ ಬುದ್ಧ


ಮೇ ೧: ಕಾರ್ಮಿಕರ ದಿನಾಚರಣೆ. 
ಮೇ ೩: ಪತ್ರಿಕಾ ಸ್ವಾತಂತ್ರ್ಯ ದಿನ
ಮೇ  : ರಾಷ್ಟ್ರೀಯ ಶ್ರಮಿಕರ ದಿನವಿಶ್ವ ನಗುವಿನ ದಿನ(ಮೊದಲನೇ ರವಿವಾರ),
            ವಿಶ್ವ ಅಸ್ತಮಾ ದಿನ (ಮೊದಲನೇ ಮಂಗಳವಾರ).
ಮೇ ೮: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ದಿನಾಚರಣೆ.
ಮೇ ೯: ಅ.ನ.ಕೃಷ್ಣರಾಯರಜನ್ಮದಿನ, ೧೯೪೫ರಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡ ದಿನ.
ಮೇ ೧೦: ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ೧೫೧ನೇ ವಾರ್ಷಿಕೋತ್ಸವ.
ಮೇ ೧೧: ರಾಷ್ಟ್ರೀಯ ತಂತ್ರಜ್ಞಾನ ದಿನ
ಮೇ ೧೨: ವಿಶ್ವದ ಹಲವೆಡೆ ತಾಯಂದಿರ ದಿನ (
ಎರಡನೇ ರವಿವಾರ ).
ಮೇ ೧೩: ತತ್ವಜ್ಞಾನಿಗಳ ದಿನ, ರಾಷ್ಟ್ರೀಯ ಭಾವೈಕ್ಯತೆಯ ದಿನ
ಮೇ ೧೪: ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದಬುದ್ಧ ಪೂರ್ಣಿಮ.
ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ
ಮೇ ೧೭: ವಿಶ್ವ ದೂರಸಂಪರ್ಕ ದಿನ
ಮೇ ೨೧: ಭಯೋತ್ಪಾದನೆ ವಿರೋಧಿ ದಿನ
ಮೇ ೨೪: ಕಾಮನ್ ವೆಲ್ತ್ ದಿನ
ಮೇ ೨೭: ಎನ್.ಸಿ.ಸಿ ದಿನ
ಮೇ ೨೯: ೧೯೫೩ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ನೋರ್ಗೆಯವರಿಂದ ಮೌಂಟ್ ಎವರೆಸ್ಟ್ ಪರ್ವತದ ಮೊದಲ ಆರೋಹಣ - ಮೌಂಟ್ ಎವರೆಸ್ಟ್ ದಿನ
ಮೇ ೩೦: ಫ್ರಾನ್ಸ್ ದೇಶದ ನಾಯಕಿ ಜೋನ್ ಆಫ್ ಆರ್ಕ್ದಹನದ ಆಚರಣೆ.
ಮೇ ೩೧: ವಿಶ್ವ ತಂಬಾಕುರಹಿತ ದಿನ

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ) 

1.. ಜಾಹೀರಾತು

2.ಜಾಹೀರಾತು