ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಏಪ್ರಿಲ್ 03, 2017

ಬಣ್ಣ (Colour)

ಬಣ್ಣಗಳನ್ನು ಬಿಟ್ಟು ಹೇಗೆ ಬದುಕೋದು ನಾವು? ಅದು ಸಾಧ್ಯವೇ? ಎಲ್ಲಾ ವಸ್ತುಗಳಿಗೂ ಒಂದಲ್ಲಾ ಒಂದು ಬಣ್ಣ ಇದ್ದೇ ಇರುತ್ತದೆ. ನಾವು ಬಣ್ಣವೇ ಇಲ್ಲದ ಬಟ್ಟೆ ಹಾಕಿಕೊಳ್ಳಬೇಕು ಎಂದು ಇಷ್ಟಪಟ್ಟರೆ ಅದು ಯಾವತ್ತೂ ಸಿಗಲು ಸಾಧ್ಯವಿಲ್ಲ. ಬಣ್ಣವಿಲ್ಲದ ಯಾವುದನ್ನೂ ನಾವು ಊಹಿಸಿಕೊಳ್ಳಲು ಅಸಾಧ್ಯ.
ಕೆಲವು ಪ್ರಾಣಿಗಳಿಗೆ ಬಣ್ಣಗಳನ್ನು ಗುರುತಿಸುವುದು ಸಾಧ್ಯವಿಲ್ಲವಂತೆ. ಆದರೆ ಮನುಷ್ಯ ಅನಾದಿ ಕಾಲದಿಂದಲೂ ಬಣ್ಣದ ಜೊತೆಗೇ ಬೆಳೆದು ಹಾಗೂ ಬೆರೆತು ಬಂದಿದ್ದಾನೆ. ನಾಗರಿಕತೆಯ ಉಗಮದಿಂದಲೂ ಮನುಷ್ಯನ ಬದುಕಿನೊಂದಿಗೆ ಬಣ್ಣಗಳು ತಳುಕು ಹಾಕಿಕೊಂಡಿವೆ. ಹಾಗಾಗಿ ನಾವು ಬಣ್ಣಗಳಿಗೆ ಸಾಕಷ್ಟು ಆದ್ಯತೆ ನೀಡುತ್ತೇವೆ. ನಿತ್ಯ ಜೀವನದಿಂದ ಹಿಡಿದು ಹಬ್ಬ ಹರಿದಿನಗಳವರೆಗೆ ಪ್ರತಿ ಹಂತದಲ್ಲೂ ಬಣ್ಣಗಳ ಜೊತೆ ನಮ್ಮ ಒಡನಾಟವಿರುತ್ತದೆ.
ಬಣ್ಣಗಳಲ್ಲೂ ಶುಭ-ಅಶುಭ ಬಣ್ಣಗಳಿವೆ. ಎಲ್ಲಾ ಬಣ್ಣಗಳೂ ಕಣ್ಣಿಗೆ ಆನಂದವನ್ನುಂಟು ಮಾಡುತ್ತವೆಯಾದರೂ ಎಲ್ಲಾ ಬಣ್ಣಗಳನ್ನೂ ಎಲ್ಲಾ ಕಾರ್ಯಗಳಿಗೂ ಉಪಯೋಗಿಸುವುದಿಲ್ಲ. ಏಕೆಂದರೆ ಬಣ್ಣಗಳ ಜೊತೆಗೆ ನಂಬಿಕೆಯೂ ಬಹಳ ಮುಖ್ಯವಾದ ನಂಟು ಹೊಂದಿದೆ. ನಮ್ಮ ಸಂಸ್ಕೃತಿಯಲ್ಲಿ ಹಾಗೂ ಪರಂಪರೆಯಲ್ಲಿ ಪ್ರತಿಯೊಂದು ಬಣ್ಣಕ್ಕೂ ಅದರದ್ದೇ ಆದ ವಿಭಿನ್ನ ವ್ಯಾಖ್ಯಾನಗಳಿವೆ. ಸಾಮಾನ್ಯವಾಗಿ ಮನೆಗಳಲ್ಲಿ ಕಪ್ಪು ಬಟ್ಟೆ ಹಾಕ್ಕೋಬೇಡ, ಕಪ್ಪು$ಬಣ್ಣದ ವಾಹನ ತಗೋಬೇಡ ಎನ್ನುವುದುಂಟು. ಕಪ್ಪು$ಬಣ್ಣದ ಚಪ್ಪಲಿ, ಬ್ಯಾಗ್‌ ಏನೇ ತೆಗೆದುಕೊಂಡರೂ ಕೆಲ ಮನೆಗಳಲ್ಲಿ ಹಿರಿಯರು ಅಪಸ್ವರ ಎತ್ತುತ್ತಾರೆ. ಏಕೆಂದರೆ ಕಪ್ಪು ಅಶುಭವೆಂದೂ ಅದು ಶನಿಗ್ರಹದ ಬಣ್ಣವೆಂದೂ ನಂಬಿಕೆ. ಕಪ್ಪು$ಬಣ್ಣದ ಬಟ್ಟೆ ಹಾಕಿಕೊಂಡ ದಿನ ಯಾವ ಕೆಲಸವೂ ಆಗುವುದಿಲ್ಲ, ಕಪ್ಪು$ಬಣ್ಣದ ವಾಹನ ತೆಗೆದುಕೊಂಡರೆ ಒಂದಲ್ಲಾ ಒಂದು ದಿನ ಆಕ್ಸಿಡೆಂಟ್‌ ಆಗುತ್ತದೆ ಎಂದು ಬಹಳ ಜನ ನಂಬುತ್ತಾರೆ. ನೀಲಿ ಬಣ್ಣ ಕೂಡ ಶನಿಗೆ ಪ್ರಿಯವಾದದ್ದೆಂದು ಅದನ್ನೂ ಸ್ವಲ್ಪ ದೂರವಿಟ್ಟಿರುತ್ತಾರೆ.
ಯಾವ ಬಣ್ಣಕ್ಕೆ ಏನರ್ಥ?
ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳಿಗೂ ನಮ್ಮ ಶಾಸ್ತ್ರದ ಪ್ರಕಾರ ಏಳು ಗ್ರಹಗಳನ್ನು ಪ್ರತಿಬಿಂಬಿಸುವ ಬಣ್ಣಗಳಿಗೂ ಸ್ವಲ್ಪ ವ್ಯತ್ಯಾಸವಿದೆ. ಕಾಮನಬಿಲ್ಲಿನ ಬಣ್ಣಗಳನ್ನು ಜ್ಞಾಪಕ ಇಟ್ಟುಕೊಳ್ಳಲು ಶಾಲೆಯಲ್ಲಿ ಒಂದು ಚುಟುಕಾದ ಪದ ಹೇಳಿಕೊಟ್ಟಿದ್ದು ನೆನಪಿದೆಯೇ? ವಿಬYಯಾರ್‌ (Vibgyor): ವೈಲೆಟ್‌, ಇಂಡಿಗೋ, ಬ್ಲೂ, ಗ್ರೀನ್‌, ಯಲ್ಲೋ, ಆರೆಂಜ್‌ ಮತ್ತು ರೆಡ್‌. ಈ ಏಳು ಬಣ್ಣಗಳು ನಮ್ಮ ಕಣ್ಣಿಗೆ ಕಾಮನಬಿಲ್ಲಿನಲ್ಲಿ ಕಾಣಿಸುತ್ತವೆ, ಈ ಏಳು ಬಣ್ಣಗಳೂ ಸೇರಿ ಬಿಳಿಯ ಬಣ್ಣವಾಗಿದೆ ಅಂತ ಹೇಳಿದ್ದರು. ಹಾಗೆಯೇ ನಮ್ಮ ಏಳು ಗ್ರಹಗಳು ಹಾಗೂ ಏಳು ದಿನಗಳು ಯಾವ ಯಾವ ಬಣ್ಣಗಳನ್ನು ಸೂಚಿಸುತ್ತವೆ ಎಂಬುದನ್ನು ನೋಡಿಕೊಂಡು ಆ ಬಣ್ಣಗಳ ಜೊತೆ ವ್ಯವಹರಿಸುವವರೂ ಇದ್ದಾರೆ. ಇತ್ತೀಚೆಗೆ ಬಹಳ ಜನರು ಪ್ರತಿದಿನ ಆಯಾ ದಿನದ ಪ್ರಕಾರ, ಆಯಾ ಗ್ರಹಕ್ಕೆ ಪ್ರಿಯವಾದ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ.
ಸೋಮವಾರ- ಹಾಲಿನ ಬಣ್ಣ,
ಮಂಗಳವಾರ-ಕೆಂಪು,
ಬುಧವಾರ-ಹಸಿರು,
ಗುರುವಾರ-ಹಳದಿ,
ಶುಕ್ರವಾರ-ಬಿಳಿ,
ಶನಿವಾರ-ನೀಲಿ
        ಹೀಗೆ ಆಯಾ ದಿನಗಳಿಗೆ ತಕ್ಕಂತೆ ಬಣ್ಣದ ಉಡುಪು ಧರಿಸಿದರೆ ನಮ್ಮೆಲ್ಲ ಕೆಲಸಗಳಲ್ಲಿ ಗೆಲುವು ಕಾಣುತ್ತೇವೆಂಬ ನಂಬಿಕೆ ಇವರದು.
ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಕರೆದರೆ, ಕೆಲವರ ಮನೆಯ ಸಂಪ್ರದಾಯದ ಪ್ರಕಾರ ಬಿಳಿ ಸೀರೆಯನ್ನು ಗಂಡ ಬದುಕಿರುವಾಗ ಉಡಬಾರದು, ಗಂಡ ಸತ್ತ ನಂತರ ವಿಧವೆಯರು ಉಡಬೇಕು ಎಂದು ನಿಶ್ಚಯಿಸಿದ್ದಾರೆ. ಹಾಗೆಯೇ ಶುಭ ಸಮಾರಂಭಗಳಲ್ಲೂ ಬಣ್ಣಗಳ ಶಾಸ್ತ್ರ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಗರ್ಭಿಣಿಯರಿಗೆ ಸೀಮಂತ ಮಾಡುವಾಗ ಹಸಿರು ಸೀರೆಯನ್ನೇ ಉಡಿಸಬೇಕು, ಹಸಿರು ಬಳೆಗಳನ್ನೇ ತೊಡಿಸಬೇಕು, ಕೆಂಪು ಕುಂಕುಮವನ್ನೇ ಹಣೆಗಿಟ್ಟುಕೊಳ್ಳಬೇಕು, ಸೀರೆಗೆ ಮ್ಯಾಚಿಂಗ್‌ ಅಂತ ಹಸಿರು ಬಣ್ಣದ ಹಣೆಬೊಟ್ಟು ಇಟ್ಟುಕೊಳ್ಳಬಾರದು ಹೀಗೆ ನಾನಾ ಶಾಸ್ತ್ರಗಳನ್ನು ಹೇಳುತ್ತಾರೆ. ಮದುವೆಯ ಶಾಸ್ತ್ರದಲ್ಲಂತೂ ಒಬ್ಬೊಬ್ಬರ ಸಂಪ್ರದಾಯದ ಬಣ್ಣಗಳೂ ಬೇರೆ ಬೇರೆ. ಒಬ್ಬರ ಮನೆಯಲ್ಲಿ ಮದುವೆ ಹುಡುಗಿ ಧಾರೆಯ ಸಮಯದಲ್ಲಿ ಬಿಳೀ ಸೀರೆಯನ್ನೇ ಉಡಬೇಕು ಎಂದು ಹೇಳಿದರೆ, ಇನ್ನೊಬ್ಬರ ಮನೆಯಲ್ಲಿ ಕೆಂಪು ಸೀರೆಯನ್ನೇ ಧಾರೆಗೆ ಉಡಬೇಕು ಎನ್ನುತ್ತಾರೆ. ಮತ್ತೂಬ್ಬರು ಹಳದಿ-ಕೆಂಪು ಮಿ]ತ ಸೀರೆ ಉಟ್ಟು, ಮೇಲೆ ಹೊದಿಕೆ ಸೀರೆ ಹಸಿರು ಬಣ್ಣದ್ದಾಗಿರಬೇಕು ಎನ್ನುತ್ತಾರೆ. ಮದುವೆಗೂ ಮುನ್ನ ಕೆಲ ಮನೆಗಳಲ್ಲಿ ಬಣ್ಣದ ಸಲುವಾಗಿಯೇ ಜಗಳಗಳಾಗುವುದೂ ಇದೆ!
ಕೆಲವರಿಗೆ ಕೆಲವು ಬಣ್ಣಗಳು ಫೇವರಿಟ್‌ ಆದರೆ, ಮತ್ತೆ ಕೆಲವರು ಒಂದಷ್ಟು ಬಣ್ಣಗಳನ್ನು ದ್ವೇಷಿಸುವುದೂ ಉಂಟು. ಬಣ್ಣದ ಇಷ್ಟಾನಿಷ್ಟಗಳು ಅವರವರ ಕಣ್ಣಿಗೆ ಬಿಟ್ಟಿದ್ದು. ನಮಗಿಷ್ಟ ಆಗುವ ಬಣ್ಣ ಬೇರೆಯವರಿಗೂ ಇಷ್ಟ ಆಗಬೇಕು ಅಂತೇನೂ ಇಲ್ಲ.
ಸಿಗ್ನಲ್‌ ಲೈಟ್‌ನಲ್ಲಿ ಕೆಂಪು ಬಣ್ಣ ಬಂದರೆ ನಿಂತುಕೊಳ್ಳಬೇಕು, ಹಸಿರು ಬಣ್ಣ ಬಂದರೆ ಮುನ್ನಡೆಯ ಬೇಕು ಎಂದು ಟ್ರಾಫಿಕ್‌ ನಿಯಮವಿದೆ. ಇದನ್ನೇ ಬಹಳ ವಿಷಯಗಳಿಗೆ "ರೆಡ್‌ ಸಿಗ್ನಲ್‌' "ಗ್ರೀನ್‌ ಸಿಗ್ನಲ್‌' ಎಂದು ಬಳಸುತ್ತಿರುತ್ತೇವೆ. ಕೆಂಪು ತೋರಿಸಿದರೆ ನಿಷೇಧವೆಂದೂ, ಹಸಿರು ತೋರಿಸಿದರೆ ಒಪ್ಪಿಗೆಯೆಂದೂ ಅಲಿಖೀತ ನಿಯಮ. ಆದರೆ ಪ್ರೀತಿಯ ಸಂಕೇತ ಕೆಂಪು. ನಿಮ್ಮ ಪ್ರೀತಿಯ ಹುಡುಗಿ ಪ್ರೇಮಿಗಳ ದಿನದಂದು ಕೆಂಪು ಉಡುಪು ಧರಿಸಿ ಬಂದರೆ ಪ್ರೀತಿಗೆ ಓಕೆ ಸಿಗ್ನಲ್‌ ಕೊಟ್ಟಂತೆ. ನಾನು ನಿನ್ನ ಪ್ರೀತಿಸ್ತೀನಿ ಅಂತ ಪ್ರೊಪೋಸ್‌ ಮಾಡುವಾಗಲೂ ಕೆಂಪು ಬಣ್ಣದ ಗುಲಾಬಿಯನ್ನೇ ಕೊಡುವುದು. ಫ್ರೆಂಡ್‌ಶಿಪ್‌ಗೆ ಹಳದಿ ಬಣ್ಣದ ಉಡುಪು ಧರಿಸಿದರೆ, ಸೋದರತ್ವಕ್ಕೆ ಗುಲಾಬಿ ಬಣ್ಣ.
ಬದುಕಿನ ಬಣ್ಣ ಯಾವುದು?
ಬಣ್ಣಗಳು ಎಲ್ಲೆಲ್ಲೂ ಆವರಿಸಿಕೊಂಡಿವೆ. ನಮ್ಮ ದೇಶವನ್ನು ಪ್ರತಿನಿಧಿಸುವ ಧ್ವಜದಲ್ಲಿ ಕೇಸರಿ-ಬಿಳಿ-ಹಸಿರು ಪಟ್ಟಿಗಳಿವೆ ಮತ್ತು ನೀಲಿ ಬಣ್ಣದ ಚಕ್ರವಿದೆ. ನಾವು ಯಾವುದೇ ದೇಶಕ್ಕೆ ಹೋದರೂ ನಮ್ಮ ದೇಶದ ಬಾವುಟದ ಬಣ್ಣ ನೋಡಿದ ತಕ್ಷಣ ಮನದೊಳಗೆ ಅವ್ಯಕ್ತ ಆನಂದವಾಗುತ್ತದೆ.
ಬಣ್ಣ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಪೀಠಗಳಲ್ಲಿ ವೇದಾಧ್ಯಯನ ಮಾಡುತ್ತಿರುವ ಮಕ್ಕಳಿಗೆ ಕೇಸರಿ ಬಣ್ಣದ ಉಡುಪು ಧರಿಸಲು ಗುರುಗಳು ಅನುಮತಿ ನೀಡುವುದಿಲ್ಲ. ಅವರು ಬಿಳಿ ಬಟ್ಟೆಯನ್ನೇ ಧರಿಸಬೇಕು. ಮಂತ್ರೋಪದೇಶವಾಗಿ ದೀಕ್ಷೆ ತೆಗೆದುಕೊಂಡ ನಂತರವಷ್ಟೇ ಕೇಸರಿ ಬಣ್ಣದ ಉಡುಪು ಧರಿಸಲು ಅನುಮತಿ ನೀಡುವುದು.
ಬಣ್ಣಗಳಿಗೆ ಒಬ್ಬೊಬ್ಬರೂ ಒಂದೊಂದು ಅರ್ಥ ಹೇಳಿಯಾರು. ಆದರೆ ಬದುಕಿನ ಬಣ್ಣ ಯಾವುದು? ಏಳು ಬಣ್ಣಗಳು ಸೇರಿ ಬಿಳಿ ಬಣ್ಣವಾಗುವ ಪ್ರಕ್ರಿಯೆಯಲ್ಲಿ ಅಡಗಿರುವ ಸಂದೇಶವೇನು? ಇದು ನಮ್ಮ ಬದುಕನ್ನು ರೂಪಿಸುವ ಅಂಶ.
ಸೃಷ್ಟಿಯಲ್ಲಿ ಏಳು ಬಣ್ಣಗಳಿರುವಂತೆ ಪ್ರತಿಯೊಬ್ಬರ ಬದುಕಿನಲ್ಲೂ ಬೇರೆ ಬೇರೆ ಬಣ್ಣಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವಂತೆ ವಿಭಿನ್ನ ಏರಿಳಿತಗಳಿರುತ್ತವೆ. ಒಂದೊಂದು ಬಣ್ಣವೂ ಹೇಗೆ ಸಂಪೂರ್ಣ ಭಿನ್ನವಾದ ನೋಟ ಹೊಂದಿದೆಯೋ ಹಾಗೆ ಪ್ರತಿಯೊಬ್ಬರ ಬದುಕಿನಲ್ಲೂ ಒಳ್ಳೆಯದು, ಕೆಟ್ಟದ್ದು, ಅತೃಪ್ತಿ ಹುಟ್ಟಿಸುವುದು, ಖುಷಿ ನೀಡುವುದು, ತಟಸ್ಥ ಭಾವನೆ ಹುಟ್ಟಿಸುವುದು, ದುಃಖ ತರುವಂಥದ್ದು, ಲಾಭ ನೀಡುವಂಥದ್ದು, ನಷ್ಟ ಮಾಡುವಂಥದ್ದು ಹೀಗೆ ನಾನಾ ನಮೂನೆಯ ಘಟನೆಗಳು ನೋಡಲು ಸಿಗುತ್ತವೆ. ಎಲ್ಲ ಬಣ್ಣಗಳು ಸೇರಿ ಬಿಳಿಯಾಗುವಂತೆ ಬದುಕಿನ ಈ ಎಲ್ಲ ವೈವಿಧ್ಯಗಳೂ ಸೇರಿದರೆ ಮಾತ್ರ ನಾವು ರೂಪುಗೊಳ್ಳುತ್ತೇವೆ. ಕಪ್ಪು ಇಷ್ಟವಿಲ್ಲವೆಂದು ಆ ಬಣ್ಣವನ್ನು ನಮ್ಮ ಬದುಕಿನಿಂದಲೇ ದೂರವಿಡಲು ಸಾಧ್ಯವಿಲ್ಲ. ರಾತ್ರಿಯಾದ ತಕ್ಷಣ ನಮ್ಮ ಕಣ್ಣಿಗೆ ಕಪ್ಪು ಕಂಡೇ ಕಾಣಿಸುತ್ತದೆ. ಹಳದಿ ಇಷ್ಟವಿಲ್ಲವೆಂದರೂ ಜಾಂಡೀಸ್‌ ಆದಾಗ ನಮ್ಮ ಬಣ್ಣವೇ ಹಳದಿಯಾಗುತ್ತದೆ ಮತ್ತು ಲೋಕವೆಲ್ಲ ಹಳದಿಯಾಗಿ ಕಾಣಿಸುತ್ತದೆ. ಬೂದು ಬಣ್ಣ ಇಷ್ಟವಿಲ್ಲವಿದ್ದರೂ ಆ ಬಣ್ಣದ ಮೋಡಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಅಂತೆಯೇ ಬದುಕಿನಲ್ಲೂ ನಮಗೆ ಯಾವುದಾದರೂ ಒಂದು ಅಥವಾ ಎರಡು ಮಾದರಿಯ ಅನುಭವಗಳನ್ನು ಸಂಪೂರ್ಣ ದೂರವಿಡಲು ಸಾಧ್ಯವಿಲ್ಲ. ಎಲ್ಲ ಅನುಭವಗಳನ್ನೂ ಅನುಭವಿಸಬೇಕು. ಅವು ಕಪ್ಪಾಗಿದ್ದರೂ ಸರಿ, ಕೆಂಪಾಗಿದ್ದರೂ ಸರಿ, ಅನುಭವಿಸಲೇಬೇಕು. ಬದುಕಿನಲ್ಲಿ ಬೇಸರವೇ ಇರಬಾರದು ಎಂದು ಬಯಸಿದರೆ ಅದು ಈಡೇರುವುದಿಲ್ಲ. ಖುಷಿ ಮಾತ್ರ ಇರಬೇಕು ಎಂದು ಆಶಿಸಿದರೆ ಅದೂ ಸಾಧ್ಯವಿಲ್ಲ.
ಏಕೆಂದರೆ ಬದುಕಿಗೆ ನಾನಾ ಬಣ್ಣಗಳಿವೆ. ಅವು ಇದ್ದರೆ ಮಾತ್ರ ಅದು ಬದುಕು.
ರೂಪಾ ಅಯ್ಯರ್‌

ಭಾನುವಾರ, ಏಪ್ರಿಲ್ 02, 2017

ಕನ್ನಡದ ____ ? ಭಾಗ 1

ಕನ್ನಡದ 'ಮುದ್ದು'               ಮುದ್ದಣ್ಣ 

ಕನ್ನಡದ 'ಆಚಾರ್'             ನರಸಿಂಹಚಾರ್   
ಕನ್ನಡದ 'ಪುಟ್ಟು'                ಎಂ.ಎಸ್. ಪುಟ್ಟಣ್ಣ 
ಕನ್ನಡದ 'ಶ್ರೀ'                    ಬಿ.ಎಂ.ಶ್ರೀಕಂಠಯ್ಯ   
ಕನ್ನಡದ 'ಗುಂಡು'               ಗುಂಡಪ್ಪ 
ಕನ್ನಡದ 'ಕೈಲಾಸ'             ಕೈಲಾಸಂ 
ಕನ್ನಡದ 'ದತ್ತ'                   ಅಂಬಿಕಾತನಯದತ್ತ 
ಕನ್ನಡದ 'ಆಸ್ತಿ'                   ಮಾಸ್ತಿ 
ಕನ್ನಡದ 'ಕಾಂತ'                ಶಿವರಾಮ ಕಾರಂತ 
ಕನ್ನಡದ 'ಕಂಪು'                 ಕುವೆಂಪು 
ಕನ್ನಡದ 'ರತ್ನ'                   ರಾಜರತ್ನಂ 
ಕನ್ನಡದ 'ಪುರಾಣಿಕ'            ಸಿದ್ದಯ್ಯ ಪುರಾಣಿಕ 
ಕನ್ನಡದ 'ಭಟ್ಟ'                   ಪರಮೇಶ್ವರ ಭಟ್ಟ 
ಕನ್ನಡದ 'ಸವ್ಯಸಾಚಿ'           ಬೀಚಿ 
ಕನ್ನಡದ 'ಸ್ವಾಮಿ'               ಕೆ.ಎಸ್.ನರಸಿಂಹಸ್ವಾಮಿ  
ಕನ್ನಡದ 'ವೇಣಿ'                 ತ್ರಿವೇಣಿ 
ಕನ್ನಡದ 'ಚಂದಿರ'              ಎಂ.ಕೆ.ಇಂದಿರಾ 
ಕನ್ನಡದ 'ಅಡಿಗ'                ಗೋಪಾಲಕೃಷ್ಣ ಅಡಿಗ 
ಕನ್ನಡದ 'ಅನುಪಮ'           ಅನುಪಮ ನಿರಂಜನ 
ಕನ್ನಡದ 'ಗಿರೀಶ'               ಗಿರೀಶ್ ಕಾರ್ನಾಡ್  
ಕನ್ನಡದ 'ಮಿತ್ರ'                ಅ.ರಾ.ಮಿತ್ರ 
ಕನ್ನಡದ 'ಮಣಿ'                 ಕಟ್ಟೀಮನಿ 


                                                                            ಕೃಪೆ : ಎನ್ ಕುಮಾರ

ಶನಿವಾರ, ಏಪ್ರಿಲ್ 01, 2017

ಘಟಪ್ರಭಾ ನದಿ

ಘಟಪ್ರಭಾ ಕೃಷ್ಣಾ ನದಿಯ ಉಪನದಿ.

ಉಗಮ

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿಮೀ ವಿಸ್ತಾರವಾಗಿದೆ.

ಉಪನದಿಗಳು

ಹಿರಣ್ಯಕೇಶಿ ಹಾಗು ತಾಮ್ರಪಣಱ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಆಣೆಕಟ್ಟುಗಳು

ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿಮೀವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಮುಂದಿನ ಯೋಜನೆ

ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.
ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವದು.

ಜಲಪಾತ

ಗೋಕಾಕ ಪಟ್ಟಣದಿಂದ ೧೦ ಕಿಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.

ಇಂಗ್ಲಿಷ್ ಚಿತ್ರಗಳ ಹೆಸರನ್ನ ಕನ್ನಡಕ್ಕೆ ಅನುವಾದ (English to Kannada)

ನಗ್ಸುದು ನಮ್ಮ ಕೆಲ್ಸಾ, ನಗುದು ಬಿಡುದು ನಿಮ್ಮ ಕೆಲ್ಸಾ......
HOLLOW MAN                     ತೂತ್ ಮನಷಾ

DIE ANOTHER DAY          ಇನ್ನೊಂದ್ ದಿನಾ ಶಟದ್ ಹೊಗ್ಲೆ
GONE WITH THE WIND      ಘಾಳ್ಯಾಗ್ ಗೆವ್ವ್ ಅಂತ ಹೋತು
SUPERMAN                           ಅಗದೀ ಮಸ್ತ್ ಮನಷ್ಯಾ
SCORPION KING                  ಚೋಳ ರಾಜ್ಯಾ
THE MUMMY                       ಅವ್ವಾ……
THE MUMMY RETURNS    ಅವ್ವಾ ವಾಪಸ್ ಬಂದ್ಲು
MISSION IMPOSSIBLE       ಆಗಂಗಿಲ್ಲ
IRON MAN                            ಇಸ್ತ್ರೀ ಮನಷ್ಯಾ
THE GOD FATHER              ದೇವರ ಪಪ್ಪಾ
LORD OF RING                               ದೇವ್ರ ಉಂಗ್ರಾ
MR BEAN                                                    ಶ್ರೀ ಹುರುಳಿಕಾಯಿ
                                              ಕೃಪೆ : ಕನ್ನಡ ಲೋಕದಿಂದ

1.. ಜಾಹೀರಾತು

2.ಜಾಹೀರಾತು