ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಏಪ್ರಿಲ್ 03, 2016

ಪ್ರತಿಭಾವಂತ / ಪ್ರತಿಭಾ ಅಂತಾ

ಅವನು S.S.L.C. ಯಲ್ಲಿ Rank ತಗೊಂಡ
ಕಾರಣ, ಅವನು ಪ್ರತಿಭಾವಂತ ||ವ್ಹಾ ವ್ಹಾ||


ಅವನು S.S.L.C. ಯಲ್ಲಿ Rank ತಗೊಂಡ
ಕಾರಣ, ಅವನು ಪ್ರತಿಭಾವಂತ ||ವ್ಹಾ ವ್ಹಾ||

ಅವನು P.U.C. ನಲ್ಲಿ ಫೇಲ್ ಆದ
ಕಾರಣ, ಅವಳು ಯಾರೋ ಪ್ರತಿಭಾ ಅಂತಾ...

ಶನಿವಾರ, ಏಪ್ರಿಲ್ 02, 2016

ಸಾಮಾನ್ಯ ಜ್ಞಾನ 16

೧.    π(ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು?
೨.    ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು?
೩.    ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು?
೪.     ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು?
೫.    ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು?
೬.    ಭಾರತದ ರಾಷ್ಟ್ರಗೀತೆ ’ಜನಗಣಮನ’ ವನ್ನು ಪ್ರಥಮ ಬಾರಿಗೆ ರಾಷ್ಟ್ರಗೀತೆಯಾಗಿ ಹಾಡಿದ ವರ್ಷ ಮತ್ತು ಸ್ಥಳ ಯಾವುದು?
೭.    ಯಾವ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ದುಕೊಳ್ಳಲಾಗಿದೆ?
೮.    ಕ್ರಿಸ್ಕೋಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು?
೯.    ತಾಮ್ರವನ್ನು ಅತಿಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೦.    ಭಾರತದಲ್ಲಿ ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಯಿತು?
೧೧.    ಕಿಸಾನ್ ಕ್ರೇಡಿಟ್ ಕಾರ್ಡ್ ಯಾವ ವರ್ಷ ಯಾರಿಗೆ ತರಲಾಯಿತು?
೧೨.    ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೧೩.    ರಕ್ತದ ಒತ್ತಡ ಅಳತೆ ಮಾಡುವ ಸಾಧನ ಯಾವುದು? 
೧೪.    ಕನ್ನಡ ನಟ ಸುದೀಪ್ ನಟಿಸಿದ ಹಿಂದಿ ಚಲನಚಿತ್ರ ’ಪೂಂಕ್’ದ ನಿರ್ದೇಶಕರು ಯಾರು?
೧೫.    ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?
೧೬.    ಭಾರತದಲ್ಲಿ ಹೆಚ್ಚು ಸೀಸ ಉತ್ಪಾದಿಸುವ ರಾಜ್ಯ ಯಾವುದು?
೧೭.    ಹುಣಸೆಹಣ್ಣಿನಲ್ಲಿರುವ ಆಮ್ಲದ ಹೆಸರೇನು?
೧೮.    ಪಂಚಾಯತಿ ಸದಸ್ಯನಾಗಿ ಚುನಾಯಿತನಾಗಲು ಬೇಕಾದ ವಯಸ್ಸು ಎಷ್ಟು?
೧೯.    ಭಾರತದಲ್ಲಿ ವರದಕ್ಷಿಣೆ ವಿರೋಧಿ ಕಾನೂನು ಯಾವಾಗ ಜಾರಿಗೆ ಬಂದಿತು?
೨೦.    ವಿಷ್ಣುವಿನ ಗದೆಗೆ ಏನೆಂದು ಹೆಸರು?
೨೧.    ಬುದ್ಧ ಚರಿತಂ ಗ್ರಂಥದ ಕರ್ತೃ ಯಾರು?
೨೨.    ಕಾನ್ವೆಡರೇಷನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?
೨೩.    ಗಾಂಧೀಜಿಯವರನ್ನು ಬಾಪೂ ಎಂದು ಕರೆದವರು ಯಾರು?
೨೪.    ಟಿ.ಚೌಡಯ್ಯನವರು ಯಾವ ವಾದ್ಯ ಸಂಗೀತಕ್ಕೆ ಹೆಸರಾಗಿದ್ದರು?
೨೫.    ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯನ್ನು ಏನೆಂದು ಕರೆಯುವರು?
೨೬.    ’ರೂಬಲ್’ ಎಂಬುದು ಯಾವ ದೇಶದ ನಾಣ್ಯ?
೨೭.    ಭಾರತದಲ್ಲಿ ಮೊದಲು ಬದಲಿ ಮೂತ್ರಕೋಶದ ಶಸ್ತ್ರ ಚಿಕಿತ್ಸೆ ಯಾವಾಗ ನಡೆಯಿತು?
೨೮.    ಲಿಗ್ನೈಟ್ ಉತ್ಪಾದಿಸುವ ರಾಜ್ಯ ಯಾವುದು?
೨೯.    ಗಂಧದ ಮರ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?



ಶುಕ್ರವಾರ, ಏಪ್ರಿಲ್ 01, 2016

ಮಾರ್ಚ 2016 ರ ಟಾಪ್ - 3 ವೀಕ್ಷಣೆಗಳು

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಮಾರ್ಚ 2016

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಸಂಯುಕ್ತ ಅರಬ್ ಎಮಿರೇಟಸ್

ಬ್ರೌಸರ್‌ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

Internet Explorer

ಆಪರೇಟಿಂಗ್ ಸಿಸ್ಟಮ್‌ಗಳ ವೀಕ್ಷಣೆ ಟಾಪ್ 3 

Windows

Android

Macintosh

ಆಪರೇಟಿಂಗ್ ಸಿಸ್ಟಮ್‌ಗಳ ವರ್ಷನಗಳ ಪ್ರಕಾರ

 Windows 8.1
  Windows 7
Google Web Preview
 ಕಳೆದ ತಿಂಗಳ ಪುಟವೀಕ್ಷಣೆಗಳು
1,862+ (ಒಟ್ಟು 57,486+)
ಕಳೆದ ತಿಂಗಳಲ್ಲಿ  G+ ಒಟ್ಟು ಸದಸ್ಯರು ಸಂಖ್ಯೆ
+ 65
ಇಂದಿಗೆ ಒಟ್ಟು ದೇಶಗಳ ವೀಕ್ಷಣೆಗಳು
+ 82

ಕಾಂಗೊ ನದಿ

ಕಾಂಗೊ ನದಿ ಮಧ್ಯ ಆಫ್ರಿಕಾದ ಪಶ್ಚಿಮ ಪಾರ್ಶ್ವದಲ್ಲಿನ ಅತಿ ಉದ್ದವಾದ ನದಿ. ಸುಮಾರು ೪,೭೦೦ ಕಿ.ಮೀ. ಉದ್ದಕ್ಕೆ ಹರಿಯುವ ಕಾಂಗೊ ನದಿಯು ನೈಲ್ ನದಿಯ ನಂತರ ಆಫ್ರಿಕದ ಎರಡನೆಯ ಅತಿ ದೊಡ್ಡ ನದಿಯಾಗಿದೆ. ಈ ನದಿ ಮತ್ತದರ ಉಪನದಿಗಳು ಜಗತ್ತಿನ ಎರಡನೆಯ ಅತಿ ವಿಸ್ತಾರವಾದ ಮಳೆಕಾಡಿನ ಮೂಲಕ ಹರಿಯುತ್ತವೆ. ಅಲ್ಲದೆ ಪ್ರತಿ ಸೆಕೆಂಡಿಗೆ ೧೪,೭೬,೩೭೬ ಘನ ಅಡಿಗಳಷ್ಟು ನೀರನ್ನು ಸಾಗಿಸುವ ಕಾಂಗೊ ನದಿಯು ಅಮೆಜಾನ್ ನದಿಯ ನಂತರ ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ವಿಷುವದ್ರೇಖೆಯ ಆಸುಪಾಸಿನಲ್ಲಿ ಹರಿಯುವ ಕಾರಣದಿಂದಾಗಿ ಈ ಕಾಂಗೊ ನದಿಯಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಸರಿಸುಮಾರು ಸ್ಥಿರ ಮತ್ತು ಏಕಪ್ರಮಾಣದದ ಹರಿವನ್ನು ಹೊಂದಿದೆ. ನದಿಯ ಸಾಗರಮುಖದಲ್ಲಿ ಸ್ಥಾಪಿತವಾಗಿದ್ದ ಪ್ರಾಚೀನ ಕಾಂಗೊ ಅರಸೊತ್ತಿಗೆಯಿಂದ ನದಿಯು ತನ್ನ ಹೆಸರನ್ನು ಪಡೆದಿದೆ. ನದಿಯ ದಂಡೆಯಲ್ಲಿರುವ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ನದಿಯ ಹೆಸರನ್ನೇ ಇಟ್ಟುಕೊಂಡಿವೆ.
ಪೂರ್ವ ಆಫ್ರಿಕಾದ ಪರ್ವತಪ್ರಾಂತ್ಯ ಮತ್ತು ಎತ್ತರದ ಪ್ರದೇಶವು ಕಾಂಗೊ ನದಿಯ ಉಗಮಸ್ಥಾನ. ಹೊರತಾಗಿ ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಟಾಂಗನ್ಯೀಕಾ ಮತ್ತುಎಮ್ವೇರು ಸರೋವರಗಳಿಂದ ಸಹ ಹರಿದು ಬರುವುದು. ಈ ಸರೋವರಗಳಿಂದ ಹೊರಹೊರಟ ನೀರಿನ ತೊರೆ ಲುವಾಲಾಬಾ ನದಿಯೆಂದು ಹೆಸರಾಗಿ ಮುಂದೆ ಬೊಯೋಮಾ ಜಲಪಾತದ ತಳದಿಂದ ಮುಂದಕ್ಕೆ ಕಾಂಗೊ ನದಿಯೆಂದು ಕರೆಯಿಸಿಕೊಳ್ಳುವುದು. ಜಾಂಬಿಯದ ಚಾಂಬೇಶಿ ನದಿಯು ಕೂಡ ಕಾಂಗೊ ನದಿಯ ಉಪನದಿಯೆಂದು ಪರಿಗಣಿಸಲ್ಪಡುವುದು.
ಬೊಯೋಮಾ ತಡಸಲಿನ ತಳದಿಂದ ಕಾಂಗೊ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವ ಕಾಂಗೊ ನದಿಯು ಆಗ್ನೇಯಕ್ಕೆ ತಿರುಗಿ ಉಬಾಂಗಿ ನದಿಯನ್ನು ಕೂಡುವುದು. ಅಲ್ಲಿಂದ ಮುಂದೆ ಮಲೇಬೋ ಸರಸ್ಸಿನ ಮೂಲಕ ಹಾದು ಗಣನೀಯವಾಗಿ ಕಿರಿದಾಗಿ ತೀವ್ರ ಆಳವಾದ ಕೊಳ್ಳಕ್ಕೆ ಧುಮುಕುವುದು. ಈ ಸ್ಥಾನಗಳೆಲ್ಲವೂ ಒಟ್ಟಾಗಿ ಲಿವಿಂಗ್‍‍ಸ್ಟನ್ ಜಲಪಾತವೆಂದು ಕರೆಯಲ್ಪಡುವುವು. ಕೊನೆಯಲ್ಲಿ ಮುವಾಂಡಾ ಎಂಬ ಸಣ್ಣ ಪಟ್ಟಣದ ಬಳಿ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರವನ್ನು ಸೇರುವುದು.
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ನದಿಯ ಹಾದಿ
ಕಾಂಗೊ ನದಿಯ ಹೆಚ್ಚಿನ ಭಾಗವು ಒಳನಾಡ ನೌಕಾಯಾನಕ್ಕೆ ಅನುವಾಗಿದೆ. ಲಿವಿಂಗ್‍‍ಸ್ಟನ್ ಜಲಪಾತದ ಕಾರಣದಿಂದಾಗಿ ನದಿಯ ಪೂರ್ಣ ಉದ್ದಕ್ಕೆ ನೌಕಾಯಾನ ಅಸಾಧ್ಯ. ಕಿನ್ಶಾಸಾ ಮತ್ತು ಕಿಸಂಗಾನಿಗಳ ನಡುವೆ ನೌಕಾಯಾನ ಅತಿ ಜನಪ್ರಿಯ ಪ್ರಯಾಣ ವ್ಯವಸ್ಥೆಯಾಗಿದೆ. ಈ ಪ್ರದೇಶದ ಮುಖ್ಯ ವಾಣಿಜ್ಯ ಸರಕಾದ ತಾಮ್ರದ ಅದಿರಿನ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಕಾಂಗೊ ನದಿಯ ಮೂಲಕವೇ ನಡೆಯುವುದು. ಉಳಿದಂತೆ ಜಲವಿದ್ಯುತ್ತಿನ ಮೂಲವಾಗಿ ಸಹ ಕಾಂಗೊ ನದಿಯು ಪ್ರಾಮುಖ್ಯ ಪಡೆಯುತ್ತಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡದೆನ್ನಲಾಗಿರುವ ಇಂಗಾ ಜಲವಿದ್ಯುತ್ ಯೋಜನೆಯಿಂದ ಅಂತಿಮವಾಗಿ ೪೦ ಗಿಗಾವ್ಯಾಟ್ ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ.

1.. ಜಾಹೀರಾತು

2.ಜಾಹೀರಾತು