fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಮಾರ್ಚ್ 14, 2016

ಕೊಲ್ಲೂರು ಮೂಕಾಂಬಿಕೆ

* ಟಿ.ಎಂ.ಸತೀಶ್
Mookambike, ಕೊಲ್ಲೂರು ಮೂಕಾಂಬಿಕಾದೇವಿ, shankaracharya pratisthapita mookambike, ಶಂಕರಾಚಾರ್ಯ ಪ್ರತಿಷ್ಠಾಪಿತ ಮೂಕಾಂಬಿಕೆ. ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ourtemples.in, kannadaratna.com
ಪ್ರಶಾಂತವಾಗಿ ಹರಿಯುವ ಸೌಪರ್ಣಿಕಾ ನದಿಯ ತೀರದಲ್ಲಿರುವ ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಪಡೆದರೆ ಬಾಳು ಧನ್ಯ ಎಂಬುದು ಹಲವು ವರ್ಷಗಳಿಂದ ಮೂಡಿಬಂದಿರುವ ನಂಬಿಕೆ.


ಕೊಡಚಾದ್ರಿ ಪರ್ವತದ ಸುಂದರ ನೋಟದಟ್ಟವಾದ ಕಾನನದ ನಡುವೆ ನಿಸರ್ಗದ ರಮಣೀಯ ಸುಂದರ ಪರಿಸರದ ಕೊಲ್ಲೂರಿನಲ್ಲಿ ನೆಲೆಸಿಹ ಮೂಕಾಂಬಿಕೆ, ದುಷ್ಟಶಿಕ್ಷಣೆ ಶಿಷ್ಟರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ.
ಚತುರ್ಭುಜಳಾಗಿ ಶಂಖ, ಚಕ್ರ, ಅಭಯ ಮತ್ತು ವರದ ಮುದ್ರೆಯಲ್ಲಿ ಪದ್ಮಾಸನಾರೂಢಳಾಗಿರುವ ಪಂಚಲೋಹದ ಸುಂದರ ಪ್ರತಿಮೆಯ ರೂಪದಲ್ಲಿರುವ ತಾಯಿಯನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎಂದು ಹಿರೀಕರು ಹೇಳುತ್ತಾರೆ.
ಈ ದೇವಿಯ ಪ್ರತಿಷ್ಠಾಪಿಸುವ ಮುನ್ನ ಇಲ್ಲಿ ಜ್ಯೋತಿರ್ಲಿಂಗವಿತ್ತು. ಕೋಲ ಮಹರ್ಷಿಗಳು ತಪವನ್ನಾಚರಿಸುತ್ತಿದ್ದ ಈ ಸ್ಥಳದಲ್ಲಿ ಈ ಲಿಂಗ ಉದ್ಭವಿಸಿತಂತೆ. ಇಂದೂ ದೇವಾಲಯದ ಮೂರ್ತಿಯ ಎದುರು ಇರುವ ನೆಲ ಅಂತಸ್ತಿನ ಅನತಿ ದೂರದಲ್ಲಿ ಈ ಪುರಾತನ ಜೋತಿರ್ಲಿಂಗ ದರ್ಶನ ಮಾಡಬಹುದು.
Mookambike, ಕೊಲ್ಲೂರು ಮೂಕಾಂಬಿಕಾದೇವಿ, shankaracharya pratisthapita mookambike, ಶಂಕರಾಚಾರ್ಯ ಪ್ರತಿಷ್ಠಾಪಿತ ಮೂಕಾಂಬಿಕೆ. ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ourtemples.in, kannadaratna.com
ಈ ಜ್ಯೋತಿರ್ಲಿಂಗವು ಎರಡು ಅಸಮಾನ ಭಾಗವಾಗಿ ಬಂಗಾರದ ರೇಖೆಯಿಂದ ವಿಭಜಿಸಲ್ಪಟ್ಟಿದೆ. ಈ ರೇಖೆಯು ಸೂರ್ಯ ಕಿರಣದಲ್ಲಿ ಗೋಚರಿಸುತ್ತದೆ. ಭಕ್ತರಿಗೆ ಕನ್ನಡಿಯ ಸಹಾಯದಿಂದ ರೇಖೆಯ ದರ್ಶನ ಮಾಡಿಸಲಾಗುತ್ತದೆ. ಈ ದೇವಾಲಯದ ಬಗ್ಗೆ ಸ್ಕಂದ ಪುರಾಣದಲ್ಲಿ ಕೂಡ ಉಲ್ಲೇಖವಿದೆ. ಇದು ದೇಗುಲದ ಪ್ರಾಚೀನತೆಯನ್ನು ಸೂಚಿಸುತ್ತದೆ.


ಪೂಜಾ ಕೈಂಕರ್ಯ: ಇಲ್ಲಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೇ ಪೂಜಾಕೈಂಕರ್ಯಗಳು ಪ್ರಾರಂಭವಾಗುತ್ತವೆ. ಇದಕ್ಕೆ ಉದಯಕಾಲದ ಪೂಜೆ ಎನ್ನುತ್ತಾರೆ. ಮಧ್ಯಾಹ್ನದ ಪೂಜೆಯ ಬಳಿಕ ರಾತ್ರಿ ಏಳು ಗಂಟೆಗೆ ಪ್ರದೋಷ ಪೂಜೆಯೂ ಜರುಗುತ್ತದೆ. ಈ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಗಣಿತ. ಕನ್ನಡಿಗರಿಗಿಂತ ಈ ದೇಗುಲಕ್ಕೆ ತಮಿಳುನಾಡು ಹಾಗೂ ಕೇರಳದಿಂದಲೇ ಹೆಚ್ಚು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಹಾಗೂ ಶುಕ್ರವಾರಗಳಂದು ಇಲ್ಲಿ ಸಹಸ್ರಾರು ಜನ ದೇವಿಯ ದರ್ಶನ ಪಡೆಯುತ್ತಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿಆರ್ ದೇವಿಗೆ ಒಂದು ಕಿಲೋಗ್ರಾಂ ತೂಕದ ಚಿನ್ನದ ಖಡ್ಗ ಅರ್ಪಿಸಿದ್ದಾರೆ. ಪ್ರಖ್ಯಾತ ಗಾಯಕ ಏಸುದಾಸ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬದ ದಿನ ಇಲ್ಲಿಗೆ ಬಂದು ತಾಯಿಗೆ ಸಂಗೀತಾರಾಧನೆ ಮಾಡುತ್ತಾರೆ. ಈ ದೇಗುಲದ ಪೂಜಾ ವಿಗಳಲ್ಲಿ ಸಲಾಂ ಪೂಜೆ ಕೂಡ ನಡೆಯುತ್ತದೆ. ದೇವಿಯ ಭಕ್ತರಾಗಿದ್ದ ಟಿಪ್ಪೂಸುಲ್ತಾನರ ಸ್ಮರಣಾರ್ಥ ಈ ಪೂಜೆ ನಡೆಯುತ್ತದೆ.
ಐತಿಹ್ಯ : ಹಿಂದೆ ಈ ಕ್ಷೇತ್ರ ಮಹಾರಣ್ಯಪುರ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಕೋಲ ಮಹರ್ಷಿಗಳು ಲೋಕಕಲ್ಯಾಣಾರ್ಥ ತಪವನ್ನಾಚರಿಸಿದರು. ಇವರ ಭಕ್ತಿಗೆ ಒಲಿದ ಶಿವನು ಅದೇ ಸ್ಥಳದಲ್ಲಿ ಪರಾಶಕ್ತಿಯನ್ನು ಪೂಜಿಸುವಂತೆ ಆಣತಿ ಇತ್ತನು. ಕೋಲ ಮಹರ್ಷಿಗಳು ತಪವನ್ನಾಚರಿಸಿದ ಭೂಮಿ ಕಾಲಾನಂತರದಲ್ಲಿ ಕೋಳಪುರಂ ಆಗಿ ಈಗ ಕೊಲ್ಲೂರಾಗಿದೆ. ಈ ಸ್ಥಳದಲ್ಲಿ ಮೂಕಾಂಬಿಕೆಯೂ ನೆಲೆಸಿದ್ದಾಳೆ. ಮೂಕಾಂಬಿಕೆಯ ಅವತಾರದ ಬಗ್ಗೆ ಒಂದು ಕಥೆ ಇದೆ.
ಅತ್ಯಂತ ದುಷ್ಟನಾಗಿದ್ದ ಕಮ್ಮಾಸುರ ಅಥವಾ ಕಾಮಾಸುರ ಎಂಬ ದೈತ್ಯ ಶಿವನಿಂದ ವರಪಡೆದು ತ್ರಿಭುವನವನ್ನೇ ತನ್ನ ಅನ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ದೇವಾದಿ ದೇವತೆಗಳ ಪ್ರಾರ್ಥನೆಗೆ ಒಲಿದ ಆದಿಪರಾಶಕ್ತಿಯು, ಶಿವ ಪ್ರತ್ಯಕ್ಷನಾಗಿ
Mookambike, ಕೊಲ್ಲೂರು ಮೂಕಾಂಬಿಕಾದೇವಿ, shankaracharya pratisthapita mookambike, ಶಂಕರಾಚಾರ್ಯ ಪ್ರತಿಷ್ಠಾಪಿತ ಮೂಕಾಂಬಿಕೆ. ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ourtemples.in, kannadaratna.com
ಕಾಮಾಸುರನಿಗೆ ವರನೀಡುವ ಸಮಯದಲ್ಲಿ ಅವನ ನಾಲಿಗೆಯ ಮೇಲೆ ಕುಳಿತು ಮಾತೇ ಹೊರಡದಂತೆ ಮಾಡಿ ಕಾಮಾಸುರನನ್ನು ಮೂಕನನ್ನಾಗಿಸಿದಳು.
ಅಸುರರ ಗುರುಗಳಾದ ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಮತ್ತೆ ಕಾಮಾಸುರನಿಗೆ ಮಾತು ಬರುವಂತೆ ಮಾಡಿದರು. ಆದರೆ, ಒಮ್ಮೆ ಮೂಕನಾಗಿದ್ದ ಕಾಮಾಸುರ ಮೂಕಾಸುರ ಎಂದೇ ಖ್ಯಾತನಾದ. ಮತ್ತೆ ಬ್ರಹ್ಮನಿಂದ ವರಪಡೆದು, ಬಲಿಷ್ಠನಾಗಿ ದೇವನುದೇವತೆಗಳನ್ನೂ - ಋಷಿ-ಮುನಿಗಳನ್ನೂ ನರರನ್ನೂ ಕಾಡತೊಡಗಿದೆ. ಈತನ ಪಾಪದ ಕೊಡ ತುಂಬಿದಾಗ ದೇವಿಯು ಸಿಂಹವಾಹಿನಿಯಾಗಿ ಆ ದೈತ್ಯನ ಸಂಹರಿಸಿದಳು. ಮೂಕಾಸುರನ ಕೊಂದ ದೇವಿ ಮೂಕಾಂಬಿಕೆ ಎಂದೇ ಹೆಸರಾದಳು.
ಹಬ್ಬ ಉತ್ಸವ : ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕೊಲ್ಲೂರಿನಲ್ಲಿ ರಥೋತ್ಸವ ಜರುಗುತ್ತದೆ. ಉತ್ತರಾ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9ದಿನದ ಕಾರ್ಯಕ್ರಮಗಳು ಮೂಲಾನಕ್ಷತ್ರದವರೆಗೆ ನಡೆಯುತ್ತವೆ. ಜ್ಯೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ ವಿಶೇಷ ಪೂಜೆಗಳು ಜರುಗುತ್ತವೆ.
ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮಾ, ರಥೋತ್ಸವ, ಪುರ್ಣಕುಂಭಾ ಅಭಿಷೇಕ ಮೊದಲಾದವು ಜರುಗುತ್ತವೆ. ನವೆಂಬರ್ - ಡಿಸೆಂಬರ್ ತಿಂಗಳಿನಲ್ಲಿ ವನಭೋಜನ ಎಂಬ ವಿಶಿಷ್ಟ ಆಚರಣೆಯೂ ನಡೆಯುತ್ತದೆ. ಇದಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವೂ ನಡೆಯುತ್ತದೆ.
ಪ್ರಯಾಣ : ಜಗನ್ಮಾತೃಕೆಯಾದ ಮೂಕಾಂಬಿಕೆಯು ನೆಲೆಸಿಹ ಈ ಪುಣ್ಯಭೂಮಿ ಮಂಗಳೂರಿನಿಂದ ಕೇವಲ 14೦ ಕಿ.ಮೀಟರ್ ದೂರದಲ್ಲಿದೆ. ಮಂಗಳೂರಿನಿಂದಿಲ್ಲಿಗೆ ಉಡುಪಿ, ಕುಂದಾಪುರ ಮಾರ್ಗದಲ್ಲಿ ಮೂರೂವರೆ ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ ಕೊಲ್ಲೂರಿಗೆ ನೇರ ಬಸ್ ಸೌಕರ್ಯವೂ ಉಂಟು. ಮಂಗಳೂರಿನವರೆಗೆ ವಿಮಾನ ಹಾಗೂ ರೈಲು ಸೌಕರ್ಯವೂ ಇದೆ.
ವಸತಿ ಸೌಕರ್ಯ : ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಅತಿಥಿಗೃಹ ನಿರ್ಮಿಸಿದೆ, ಸೌಪರ್ಣಿಕಾ ಅತಿಥಿಗೃಹ ಸಂಕೀರ್ಣ, ಗೊಯಂಕಾ ಅತಿಥಿಗೃಹ, ಶೃಂಗೇರಿಯ ಶಂಕರಕೃಪಾ ಅತಿಥಿಗೃಹ,
shankaracharya pratisthapita mookambike, ಶಂಕರಾಚಾರ್ಯ ಪ್ರತಿಷ್ಠಾಪಿತ ಮೂಕಾಂಬಿಕೆ. ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ourtemples.in, kannadaratna.com
ಶ್ರೀರಾಮಕೃಷ್ಣಾಶ್ರಮದ ಅತಿಥಿಗೃಹ, ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಬಂಗಲೆ ಹಾಗೂ ಹಲವಾರು ವಸತಿಗೃಹಗಳೂ ಇಲ್ಲಿವೆ.
ಇಲ್ಲಿಂದ ಕುಂದಾಪರ ಬಳಿಯ ಆನೇಗುಡ್ಡೆ ಗಣೇಶನ ದರ್ಶನ ಮಾಡಿ, ಅಲ್ಲಿಂದ ಕೋಟೇಶ್ವರದಲ್ಲಿ ಶಿವನನ್ನು ಕಂಡು, ಶ್ರೀಕೃಷ್ಣನ ಆಡುಂಬೋಲ ಉಡುಪಿಯಲ್ಲಿ ಕಡಗೋಲು ಕೃಷ್ಣನ ಕಂಡು ಮಲ್ಪೆ, ಸೇಂಟ್‌ಮೇರಿ ದ್ವೀಪಗಳಿಗೂ ಹೋಗಿಬರಬಹುದು.
ಕೊಲ್ಲೂರಿನ ಬಗ್ಗೆ ಹೆಚ್ಚಿನ ವಿವರಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು, ಕರ್ನಾಟಕ - 576220 ಇವರನ್ನು ಸಂಪರ್ಕಿಸಬಹುದು.

     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು