ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಏಪ್ರಿಲ್ 27, 2019

ಬರಲಿದೆ 20 ಮುಖಬೆಲೆ ಹೊಸ ನೋಟು


ಭಾರತೀಯ ರಿರ್ಸವ್ಬ್ಯಾಂಕ್ (ಆರ್ಬಿಐ) ಗಾಂಧಿ ಸರಣಿಯ ಹೊಸ ರೂ 20  ಮುಖಬೆಲೆ ನೋಟುಗಳನ್ನು  ಹೊರತರುವುದಾಗಿ ಹೇಳಿದೆ. ನೋಟುಗಳು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ಅವರ ಸಹಿಯನ್ನು ಒಳಗೊಂಡಿರಲಿದೆ.
ಹಸಿರು ಮಿಶ್ರಿತ ಹಳದಿ ಬಣ್ಣದ ರೂ 20 ಮುಖಬೆಲೆಯ ಹೊಸ ನೋಟಿನ ಹಿಂಬದಿಯಲ್ಲಿ ಎಲ್ಲೋರಾ ಗುಹೆಯ ಚಿತ್ರವಿದ್ದುಇದು ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಚಾಲ್ತಿಯಲ್ಲಿರುವ ಹಿಂದಿನ ಎಲ್ಲಾ ಸರಣಿಯ ರೂ 20 ನೋಟುಗಳು ಬಳಕೆಯಲ್ಲಿರಲಿವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
·         ಹೊಸ ನೋಟುಗಳು ಭಿನ್ನ ವಿನ್ಯಾಸ ಹಾಗೂ ಗೆರೆಗಳನ್ನು ಒಳಗೊಂಡಿದೆ

·         ನೋಟು 63ಮಿ.ಮೀ x 129ಮಿ.ಮೀ ಅಳತೆಯಲ್ಲಿರಲಿದೆ ಎಂದು ವಿವರಿಸಿದೆ

·         ಬಲ ಭಾಗದಲ್ಲಿ ಅಶೋಕ ಕಂಭದ ಲಾಂಛನ ಬಳಸಲಾಗಿದ್ದು ರೂ 20 ಎಂದು ಕಾಣುವಂತೆ ವಾಟರ್ಮಾರ್ಕ್ ಹೊಂದಿರಲಿದೆ.

·         ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರಸಣ್ಣ ಅಕ್ಷರಗಳಲ್ಲಿ ಆರ್ಬಿಐ, ಭಾರತ್‌, ಇಂಡಿಯಾ, 20, ಆರ್ಬಿಐ ಗವರ್ನರ್ಸಹಿ,..

·         ಹಲವು ಗುರುತುಗಳನ್ನು ಒಳಗೊಂಡಿದೆ

ಶುಕ್ರವಾರ, ಏಪ್ರಿಲ್ 26, 2019

ಉಪ್ಪರಗುಡಿಯ ಸೋಮಿದೇವಯ್ಯ

ವಚನಕಾರ
ಉಪ್ಪರಗುಡಿಯ ಸೋಮಿದೇವಯ್ಯ 
ಅಂಕಿತ ನಾಮ
ಗಾರುಡೇಶ್ವರಲಿಂಗ
ಕಾಲ
1160 
ದೊರಕಿರುವ ವಚನಗಳು
11 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ
-
ಹುಟ್ಟಿದ ಸ್ಥಳ
-
ಪರಿಚಯ
ಕಾಲ ಸು. 1160. 11 ವಚನಗಳು ದೊರೆತಿವೆ. ಕಾಯ ಮತ್ತು ಆತ್ಮ, ಕ್ರಿಯೆ ಮತ್ತು ಜ್ಞಾನ ಇವುಗಳ ಸಂಬಂಧವನ್ನು ವಿವೇಚಿಸಿದ್ದಾನೆ.

ಸೋಮವಾರ, ಏಪ್ರಿಲ್ 22, 2019

ಬದುಕಿಗೆ ದಾರಿದೀಪ ಆದವಳು - ಅಮ್ಮ

ಬದುಕಿಗೆ ದಾರಿದೀಪ ಆದವಳು
ಕಂಬನಿ ಇಟ್ಟಾಗ ಕಣ್ಣೀರ ಒರೆಸಿದವಳು
ಕಷ್ಟ ಬಂದಾಗ ಹೆಗಲಿಗೆ ಹೆಗಲಾದವಳು
ಸೋತಾಗ ಸಂತ್ವಾನ ಹೇಳಿದವಳು ||

ತಪ್ಪು ಮಾಡಿದಾಗ ತಿದ್ದಿ ಹೇಳಿದವಳು
ತಪ್ಪು ಹೆಜ್ಜೆ ಇಟ್ಟಾಗ ಕೈ ಹಿಡಿದು ನಡೆಸಿದವಳು
ಕೆಲಸ ಸಿಕ್ಕಾಗ ಹೆಮ್ಮೆ ಪಟ್ಟವಳು 
ಜೀವನಕ್ಕೆ ಹೊಸ ಹುರುಪು ತಂದವಳು ||

ನೊಂದಾಗ ಮನದಲ್ಲೇ ಮರುಗಿದವಳು 
ಪ್ರತಿ ಹೆಜ್ಜೆಗೆ ಸ್ಫೂರ್ತಿಯಾದವಳು
ಕನಸಿನ ಗೋಪುರಕ್ಕೆ ಜೀವಗಂಗೆ ಇವಳು 
ಸಾರ್ಥಕ ಬದುಕಿನ ನಿಧರ್ಶನ ಇವಳು ||

ಇವಳೇ ಮಮತಾಮಯಿ ''ಅಮ್ಮ''
ಕೃಪೆ - ಜ್ಯೋತಿ ಭಟ್

1.. ಜಾಹೀರಾತು

2.ಜಾಹೀರಾತು