fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜನವರಿ 14, 2015

ಬಾದಾಮಿ ಚಾಳುಕ್ಯರ ನಾಡಿನ ಶಿಲಾ ವೈಭವ

ಕರ್ನಾಟಕ ಶಿಲ್ಪಕಲಾ ಇತಿಹಾಸ ಬೆಳೆದುಬಂದ ಬಗೆ ಅರಿಯಲು ಬಾದಾಮಿಗೆ ಬರಬೇಕು..
*ಟಿ.ಎಂ.ಸತೀಶ್ Badami Cave temple ಕನ್ನಡರತ್ನ.ಕಾಂ, kannadaratna.com,
    ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರದರಸರು, ಮೈಸೂರು ಒಡೆಯರು, ರಾಷ್ಟ್ರಕೂಟರಾಳಿದ ಕರುನಾಡು ಕಲೆಗಳ ಬೀಡು. ಬಹುತೇಕ ಎಲ್ಲ ಅರಸು ಮನೆತನದವರೂ ತಮ್ಮ ತಮ್ಮ ರಾಜ್ಯದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಿ ತಾವು ಕಲೋಪಾಸಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ಫಲವಾಗಿಯೇ ಇಂದಿಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ.
    ಕರುನಾಡ ಶಿಲ್ಪಕಲಾವೈಭವಕ್ಕೆ ಚಾಲುಕ್ಯರ ಕೊಡುಗೆ ಅಪಾರ. ಹೊಯ್ಸಳರ ಬೇಲೂರು -ಹಳೇಬೀಡಿನಂತೆಯೇ ವಾಸ್ತು ವೈಭವ, ಕಲಾಶ್ರೀಮಂತಿಕೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿ, ಸನಿಹದಲ್ಲೇ ಇರುವ ಬನಶಂಕರಿ, ಐಹೊಳೆ, ಪಟ್ಟದಕಲ್ಲುಗಳ ದೇವಾಲಯದಲ್ಲಿಯೂ ಕಾಣಬಹುದು.
ಬಾದಾಮಿ
      ಬಾದಾಮಿ ಇತಿಹಾಸ ಪ್ರಸಿದ್ಧವಾದ ಪ್ರಾಚೀನ ಸ್ಥಳ. ಇದಕ್ಕೆ ವಾತಾಪಿ ಎಂಬ ಹೆಸರಿತ್ತು. 6ನೇ ಶತಮಾನದಿಂದ 8ನೇ ಶತಮಾನದ ಅವಧಿಯಲ್ಲಿ ಕರುನಾಡನ್ನಾಳಿದ ಹೆಮ್ಮೆಯ ಕಲ್ಯಾಣದ ಚಾಲುಕ್ಯರು ಈ ಊರನ್ನು ಅಭಿವೃದ್ಧಿಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರು ಇಲ್ಲಿ ಹೆಬ್ಬಂಡೆಗಳನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿ ಇರುವ ಚಿತ್ರಕಲೆಗಳು ಬಾದಾಮಿ ಚಾಲುಕ್ಯರ ಕಲಾರಾಧನೆ ಹಾಗೂ ಸೌಂದರ್ಯ ಪ್ರeಗೆ ಹಿಡಿದ ಕೈಗನ್ನಡಿಯಾಗಿ ಇಂದು ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿದೆ. ಎರಡು ಬೃಹತ್ ಪರ್ವತಗಳ ಕಡಿದಾದ ಕಣಿವೆ ಪ್ರದೇಶದಲ್ಲಿರುವ ಗುಹಾಂತರ್ಗತ ದೇಗುಲಗಳು ಕೆಂಪು ಶಿಲೆಗಳಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ. ಆದರೆ ಈ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಮೆಟ್ಟಿಲುಗಳೇರಿ ಮೇಲೆ ಹೋಗುಬೇಕು ಅಷ್ಟೇ.
Badami Cave Temple ಕನ್ನಡರತ್ನ.ಕಾಂ, kannadaratna.com, ಇತಿಹಾಸ
    ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ಕಟ್ಟಿ, ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೊದಲೇ ಇದು ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೂಗೋಳಕಾರ ಟಾಲೆಮಿ ಉಲ್ಲೇಖದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಸರೋವರದ ಉತ್ತರ ಭಾಗದಲ್ಲಿ ಕಿ.ಪೂ. ೩ನೇ ಶತಮಾನಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ಕಟ್ಟಡ ಅವಶೇಷಗಳು ದೊರೆತಿವೆ.
  
         ಬಾಗಲಕೋಟೆಯಿಂದ 35 ಕಿ.ಮೀ. ದೂರದಲ್ಲಿರುವ ಬಾದಾಮಿಯ ಮಾಲಗಿತ್ತಿ ದೇವಾಲಯ, ಶಿವಾಲಯ ಹಾಗೂ ಮೇಣಬಸದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಎರಡು ಬಳಪದ ಕಲ್ಲಿನ ಬೆಟ್ಟಗಳ ನಡುವಿನ ಕಂದಕಗಳ ನಡುವೆ ಇರುವ ಬಾದಾಮಿಯಲ್ಲಿ ಶೈವ ಗುಹಾಲಯ, ವೈಷ್ಣವ ಗುಹಾಲಯ, ವಿಷ್ಣುಗುಹೆ ಹಾಗೂ ಜೈನಗುಹೆಗಳು ತುಂಬಾ ಪ್ರಸಿದ್ಧವಾಗಿವೆ. ವಿವಿಧ ನೃತ್ಯಭಂಗಿಯಲ್ಲಿರುವ ಶಿಲ್ಪಕಲಾ ಕೆತ್ತನೆಗಳು ಮನಸೆಳೆಯುತ್ತವೆ. ಮೇಣಬಸದಿಯಲ್ಲಿ ನಾಲ್ಕು ಲಯಣಗಳಿದ್ದು, ಒಂದನೆ ಲಯಣದಲ್ಲಿರುವ ಅರ್ಧನಾರೀಶ್ವರ, ಚಾವಣಿಯ ಗಂಧರ್ವ ದಂಪತಿ, ಎರಡನೇ ಲಯಣದ ಚಾವಣಿಯ ಅಲಂಕರಣ, ಮೂರನೇ ಲಯಣದ ಶೇಷಶಾಯಿ ವಿಷ್ಣು ಪ್ರಮುಖವಾದ ಶಿಲ್ಪಗಳು. ಶೇಷಶಾಯಿ ವಿಷ್ಣುವನ್ನು ಪಾರ್ಶ್ವನಾಥನ ವಿಗ್ರಹ ಎಂದೂ ಸಂಶೋಧಕರು ಹೇಳುತ್ತಾರೆ. ಕಲ್ಲನ್ನು ಕೊರೆದು ನಿರ್ಮಿಸಿದ ಬೃಹತ್ ಶಿವಲಿಂಗ... ಹೀಗೆ ಹಲವು ಮನೋಹರ ಕೆತ್ತನೆಗಳು ಈ ಗುಹಾಲಯಗಳಲ್ಲಿವೆ. ವೈಷ್ಣವ ಲಯಣದ ಮಧ್ಯೆ ನೈಸರ್ಗಿಕ ಗುಹೆಯೂ ಇದೆ. ಇಲ್ಲಿ ಬೋಸತ್ವ, ಪದ್ಮಪಾಣಿಯ ಉಬ್ಬುಶಿಲ್ಪಗಳಿವೆ. ಮೂರನೇ ಲಯಣದಲ್ಲಿ ವಿಷ್ಣು, ಭೂವರಹ, ನರಸಿಂಹ, ಹರಿಹರ, ಬ್ರಹ್ಮ, ವಿಷ್ಣು, ಶಿವ, ಸಮುದ್ರ ಮಥನ, ಕೃಷ್ಣಲೀಲೆ ಮೊದಲಾದ ಚಿತ್ರ ಪಟ್ಟಿಕೆಗಳು ಪುರಾಣದ ಕಥೆಗಳನ್ನೇ ಹೇಳುತ್ತಾ ನಿಂತಿವೆ.
             ಸಾಲು ಭಂಜಿಕೆಗಳಿಂದ ರಮಣೀಯವಾಗಿರುವ ದೇವಾಲಯಗಳ 3ನೇ ಗುಹೆಯಲ್ಲಿರುವ ವಹಾವಿಷ್ಣುವಿನ ವಿಗ್ರಹ ಅತ್ಯಂತ ಮನೋಹರವಾದ ಬೃಹತ್ ಶಿಲ್ಪವಾದರೆ, ಮೊದಲ ಗುಹೆಯಲ್ಲಿರುವ 18 ಬಾಹುಗಳ ನಟರಾಜ ಶಿಲ್ಪ ನಯನ ಮನೋಹರವಾಗಿದೆ.
Bhuthanatha Temple ಕನ್ನಡರತ್ನ.ಕಾಂ, kannadaratna.com,      ಭೂತನಾಥನ ಕೆರೆ, ನದಿತಟದಲ್ಲಿರುವ ಶಿವ, ವಿಷ್ಣು ದೇವಾಲಯ, ಭೂತನಾಥನ ದೇವಾಲಯಗಳು ರುದ್ರ ರಮಣೀಯವಾಗಿವೆ. ಬದಾಮಿಯ ಉತ್ತರ ಬೆಟ್ಟದಲ್ಲಿ ಬಾವನ್ ಬಂಡೆ ಕೋಟೆ ಹಾಗೂ ದಕ್ಷಿಣದಲ್ಲಿ ರಣಮಂಡಲ ಕೋಟೆ ಇದೆ. ರಾಷ್ಟ್ರಕೂಟರು, ವಿಜಯನಗರದರಸರು ಮತ್ತು ಟಿಪ್ಪೂಸುಲ್ತಾನರ ಕಾಲದಲ್ಲಿ ಈ ಕೋಟೆ ವಿಸ್ತರಿಸಿದ ಎನ್ನುತ್ತದೆ ಇತಿಹಾಸ.
   ಕಲೋಪಾಸಕರಿಗೆ ರಮಣೀಯ ತಾಣವಾಗಿ, ಶಾಸನಾಧ್ಯಯನಿಗಳಿಗೆ ಆಕರವಾಗಿ, ಆಸ್ತಿಕರಿಗೆ ಪುಣ್ಯಕ್ಷೇತ್ರವಾಗಿರುವ ಬಾದಾಮಿ ಕರುನಾಡ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಬೆಂಗಳೂರಿನಿಂದ ಬಾದಾಮಿಗೆ 420 ಕಿಲೋ ಮೀಟರ್. 
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು