ಗುರುವಾರ, ಜನವರಿ 22, 2015

ನನ್ನಮ್ಮನನ್ನಮ್ಮನಮ್ಮ ನೀ ನನ್ನಮ್ಮನಮ್ಮ

ನೀನಂದ್ರೆ ನಂಗೆ, ಬಲು ಹೆಮ್ಮೆಯಮ್ಮಆಗಿದ್ರು ಸುಸ್ತು

ಕೇಳಿದ್ದಕೊಟ್ಟು

ಹೇಳ್ತೀ ನಿ ಅಸ್ಟೂಕು ಅಯ್ತಾಯ್ತು ಅಸ್ತು||ನನ್ನಮ್ಮ||ಇದ್ದರೂ ಇಸ್ಟೇ

ಮಾಡದೆ ಸಿಟ್ಟು

ತಿನ್ಸ್ತಿನಿ ಹೊಟ್ಟೆ ಗೆರಡೋತ್ತು ತುತ್ತು||ನನ್ನಮ್ಮ||ಇದ್ದಾಸೆ ಅಸ್ಟು

ಮರೆಮಾಚಿ ವಸ್ಟು

ನಗ್ತಿ ನೀ ನಂಗೆ ಕಚ್ಗುಳಿ ಯಿಟ್ಟು||ನನ್ನಮ್ಮ||ಕಸ್ಟಾವ ಕಟ್ಟಿ

ರೊಟ್ಟಿಯ ತಟ್ಟಿ

ಕೊಡ್ತಿ ನೀ ಬೆನ್ತಟ್ಟಿ ಕೈಯಾಗ ತಟ್ಟಿ||ನನ್ನಮ್ಮ||ನಿಂಗ್ಸೇರುತಿದ್ರು

ತಂಗುಳ್ನ ತಿಂದ್ರು

ಬಡ್ಸತಿ ನಿ ನಂಗ್ಮಾಡಿ ಬಿಸಿ ಬಿಸಿದೆನ್ರು||ನನ್ನಮ್ಮ||

ಮನ್ಯಾಗಿನ್ ಸಾಮಾನು

ಎಲ್ಲೊ ಒಗೆದಿದ್ರು

ಹುಡ್ಕ್ಯಾಡ್ಕೊಂಡ್ ತರ್ತಿ ನೀ ನಾ ಕೇಳದಿದ್ರು||ನನ್ನಮ್ಮ||
                                                                                                                        ಕೃಪೆ : Prashant Bhate

ಕಾಮೆಂಟ್‌ಗಳಿಲ್ಲ: