fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜನವರಿ 11, 2015

ಸಲಹೆಗಳಲ್ಲ ಇದು ಬದುಕು

1) ಒಪ್ಪಿಗೆ ಎನ್ನುವುದನ್ನು ಕೊಡುವಾಗಲೇ ಯೋಚಿಸಬೇಕು. ಒಪ್ಪಿದ ನಂತರವೂ ಯೋಚಿಸುವುದು ನಿಲುವಿಲ್ಲದ್ದರ ಲಕ್ಷಣ

2) ಸೃಷ್ಟಿಯಲ್ಲಿ ಒಳ್ಳೆಯದು, ಕೆಟ್ಟದ್ದು ಎಂದಿಲ್ಲ. ಆದರೆ, ಹಾಗೆ ನಿರ್ಧರಿಸಬಲ್ಲ ಸ್ವಭಾವ ಇದೆ. ಅದನ್ನು ಹೇಗೆ ಪಳಗಿಸುತ್ತೀರೆಂಬುದು ಮುಖ್ಯ.

3) ಎಲ್ಲ ಸಂಗತಿಗಳೂ ತರ್ಕವನ್ನೇ ಅನ್ವಯಿಸಹೊರಟರೆ ಬುದ್ಧಿಗೆ ರಂಜನೆ ಸಿಗಬಹುದು. ಆದರೆ, ಮನಸ್ಸು ಆನಂದ ಕಳೆದುಕೊಳ್ಳುತ್ತದೆ.

4) ಸ್ವಾರ್ಥವೇ ಜಗತ್ತಿನ ಪ್ರವರ್ತಕ ಎಂಬ ಸತ್ಯವನ್ನು ಒಪ್ಪಿಕೊಳ್ಳುವ ತನಕ ಪರಾರ್ಥ ಎಂಬುದು ಅಪಾರ್ಥಗೊಂಡಿದೆ ಎಂತಲೇ ಅರ್ಥ.

5) ಬೇಯದೇ ಅಕ್ಕಿ ಅನ್ನವಾಗದು, ಮಾಗದೇ ಫಲ ಸಿಹಿ ಎನಿಸದು. ಬೇಯುವುದು ಮತ್ತು ಮಾಗುವುದು ಇವರೆರಡರಲ್ಲೇ ಇದೆ ಜೀವನ.

6) ಗಳಿಸುವುದು ಮುಖ್ಯ. ಉಳಿಸುವುದು ಅತಿಮುಖ್ಯ. ಗಳಿಕೆ ಮತ್ತು ಉಳಿಕೆಯ ಸಾರ್ಥಕ್ಯ ಮಾತ್ರ ನೀಡಿಕೆಯಲ್ಲೇ.

7) ಉತ್ತರ ಯೋಚನೆಗಳು ವ್ಯಕ್ತಿಯನ್ನು ರೂಪಿಸುತ್ತವೆ. ಉತ್ತಮ ವ್ಯಕ್ತಿಗಳು ಉತ್ತಮ ಯೋಚನೆಗಳನ್ನೇ ರೂಪಿಸುತ್ತಾರೆ.

8) ತಿಳಿವಳಿಕೆಯ ಅಳಲನ್ನು ಅಳೆಯುವ ಅಳತೆಗೋಲು ಯಾವುದೆಂದರೆ, ಸಂದರ್ಭಗಳಿಗೆ ಆತನ ಪ್ರತಿಕ್ರಿಯೆಯೇ ಆಗಿರುತ್ತದೆ.

9) ನಿಷ್ಠೆ ಎಂಬುದು ಸಾಪೇಕ್ಷವಲ್ಲ. ಅದು ಯಾವುದೋ ಅಪೇಕ್ಷೆಯ ಹೊರತಾಗಿಯೂ ಒಡಮೂಡುವ ನಿರಪೇಕ್ಷ ಭಾವ.

10) ಶ್ರದ್ಧೆ, ಶ್ರಮ ಇವೆರಡೂ ಇತರರು ಕಾಪಿ ಮಾಡಲಾಗದ ಸಂಗತಿ.

11) ಕೃತಜ್ಞತೆ ಎಂಬುದು ಉಪಕಾರವನ್ನು ತೀರಿಸುವ ಸಾಧನವಂತೂ ಅಲ್ಲ. ಬದಲಿಗೆ ಅದಕ್ಕೆ ಕೊಡುವ ಗೌರವ ಅಷ್ಟೇ.

12) ಪ್ರವಾಹದ ದಿಕ್ಕಿನಲ್ಲಿ ಸಾಗಲು ಹೆಚ್ಚೇನೂ ಶ್ರಮ ಬೇಕಿಲ್ಲ. ಪ್ರವಾಹದ ಅಭಿಮುಖ ಈಜುವುದಕ್ಕೆ ಬಲ, ಸ್ಥೈರ್ಯ, ಇಚ್ಛಾಶಕ್ತಿ ಬೇಕು.

13) ಪ್ರಾಮಾಣಿಕತೆ ಎಂದರೆ ಅದರ ಅನಿವಾರ್ಯ ಇಲ್ಲ ಎನಿಸುವಂಥ ಸಂದರ್ಭದಲ್ಲೂ ಅದನ್ನು ತೊರೆಯದಿರುವುದು.

14) ಹೋಲಿಕೆಗೆ ಎರಡು ಸಮಾನ ವಸ್ತುಗಳು ಬೇಕು. ಆದರೆ ಎರಡು ಮತ್ತು ಸಮಾನ ಇವೆರಡೂ ಶಬ್ದಗಳೂ ನಿಜದಲ್ಲಿ ಒಟ್ಟಿಗೇ ಇರಲು ಸಾಧ್ಯವಿಲ್ಲ. ಹಾಗಾಗಿ ಹೋಲಿಕೆ ಎಂಬುದು ಅರ್ಥರಹಿತ.

15) ವಾಸ್ತವ ವಸ್ತುನಿಷ್ಠವಾದದ್ದೇ ಹೊರತೂ ವ್ಯಕ್ತಿನಿಷ್ಠ ಅಲ್ಲ. ಹಾಗಾಗಿ ವಾಸ್ತವ ಯಾವತ್ತೂ ಒಂದೇ. ಮೀರುವುದನ್ನೇ ಗುರಿಯಾಗಿಟ್ಟುಕೊಂಡರೆ ಎಲ್ಲ ಗುರಿ ದಾಟಬಹುದು. ಸ್ವತಃ ಮೀರುವಿಕೆಯನ್ನೂ.
                                                         - ವಿಶ್ವನಾಥ ಸುಂಕಸಾಳ, ಕನ್ನಡಪ್ರಭ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು