ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಶುಕ್ರವಾರ, ಆಗಸ್ಟ್ 03, 2018
ಬದುಕಿಸುತ್ತೆ / ಸಾಯಿಸುತ್ತೆ
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ ||ವಾ..ವಾ..||
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ ||ವಾ..ವಾ..||
..
ಕಾಲೇಜ್ ಕನ್ಯೆಯ ನಗು ಬದುಕಿರುವವರನ್ನೂ ಸಾಯಿಸುತ್ತೆ
ಮಂಗಳವಾರ, ಜುಲೈ 31, 2018
ಕೆಚ್ಚೆದೆಯ ಕಲಿಗಳ ನಾಡು
ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು
ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು
ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು
ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು – ಇದು ನಮ್ಮ ಕನ್ನಡನಾಡು
ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು
ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು
ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು – ಇದು ನಮ್ಮ ಕನ್ನಡನಾಡು
ಹಗೆಗಾರರನ್ನು ಹತ್ತಿಕ್ಕಿದ, ಒಳಿತಿಗಾಗಿ ಕಾಳಗವ ಮಾಡಿದ ನಾಡು
ಅರಿಮೆಯ ಗೂಡು, ಕಲಿಕೆಯ ಬೀಡು, ಚೆಲುವಿನ ನಾಡು
ಆನೆಗಳ ಬೀಡು, ಹಲಹಕ್ಕಿಗಳ ಗೂಡು, ಹುಲಿಯ ನಾಡು
ಕಲೆಗಳ ತವರೂರು, ಕುಣಿದಾಟ, ಜಾನಪದ ಸೊಗಡುಗಳ ನಾಡು – ಇದು ನಮ್ಮ ಕನ್ನಡನಾಡು
ಅರಿಮೆಯ ಗೂಡು, ಕಲಿಕೆಯ ಬೀಡು, ಚೆಲುವಿನ ನಾಡು
ಆನೆಗಳ ಬೀಡು, ಹಲಹಕ್ಕಿಗಳ ಗೂಡು, ಹುಲಿಯ ನಾಡು
ಕಲೆಗಳ ತವರೂರು, ಕುಣಿದಾಟ, ಜಾನಪದ ಸೊಗಡುಗಳ ನಾಡು – ಇದು ನಮ್ಮ ಕನ್ನಡನಾಡು
ಆಡಳಿತಕ್ಕೆ ಹೆಸರಾಗಿದ್ದ, ಬೇಡಿ ಬಂದವರಿಗೆ ಆಸರೆಯಿತ್ತ ನಾಡು
ರೈತ ಕುಂಬಾರ ಕಮ್ಮಾರ ಬಡಗಿಯಿಂದ ಅರಳಿದ ನಾಡು
ಪಲ್ಲವರು ಚೋಳರು ಬಡಗಣದವರನ್ನು ಹಿಮ್ಮೆಟ್ಟಿಸಿದ ನಾಡು
ನೆಲದ ಚೆಲುವನರಸಿ ಬರುವವರ, ಸುತ್ತಾಡುಗರ ನಲ್ಮೆಯ ನಾಡು – ಇದು ನಮ್ಮ ಕನ್ನಡನಾಡು
ರೈತ ಕುಂಬಾರ ಕಮ್ಮಾರ ಬಡಗಿಯಿಂದ ಅರಳಿದ ನಾಡು
ಪಲ್ಲವರು ಚೋಳರು ಬಡಗಣದವರನ್ನು ಹಿಮ್ಮೆಟ್ಟಿಸಿದ ನಾಡು
ನೆಲದ ಚೆಲುವನರಸಿ ಬರುವವರ, ಸುತ್ತಾಡುಗರ ನಲ್ಮೆಯ ನಾಡು – ಇದು ನಮ್ಮ ಕನ್ನಡನಾಡು
ಇಂದ – ಕಿರಣ್ ಮಲೆನಾಡು
ಮಂಗಳವಾರ, ಜುಲೈ 24, 2018
ಕತ್ತಲು
ದಿನಮಣಿ ದಿನನಿತ್ಯ ದಿಗಂತದಲ್ಲಿ ಅಸ್ತಂಗತನಾದಾಗ ಆವರಿಸುವಂಥದ್ದು
ನಕ್ಷತ್ರ ವೀಕ್ಷಣೆಗೆ ಇದೇ ಬೇಕು
ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು - ಕೆ.ಎಸ್.ನ
ಇರುಳು ಹೊರಳಿದ್ದರ ಫಲ
ಶೃಂಗಾರ ಅರಳುವ ಸಮಯ
ಮರ್ಯಾದೆಯು 'ಮರ್ಯಾದೆ'ಯನ್ನು ಮೀರುವ ಹೊತ್ತು
ಕೆಲವರು ಕರಡಿಗೆ 'ಜಾಮೂನು' ತಿನ್ನಿಸಲು ಹೊರಡುವ ಸಮಯ
ಥಿಯೇಟರ್ನಲ್ಲಿ ಕತ್ತಲಿರುವ ಜಾಗಕ್ಕೆ ವಿಶೇಷ ಬೇಡಿಕೆ
ಬೆಳಕಿನ ಮಹತ್ವ ಹೆಚ್ಚಿದ್ದು ಇದರಿಂದಲೇ
ಅಂಧಕಾರದ ಅಂದ ನೋಡಲು ಕಣ್ಣು ಬೇಕಿಲ್ಲ
ಬೆಳಕಿನ ಅಭಾವ ಕತ್ತಲೆಯೋ ಅಥವಾ ಕತ್ತಲೆಯ ಅಭಾವ ಬೆಳಕೋ...
ಇದನ್ನು ನೋಡುವುದಕ್ಕೆ ಬೆಳಕು ಬೇಡ
ಒಂದರ್ಥದಲ್ಲಿ ಇದು ಸ್ವಯಂ ಪ್ರಕಾಶ
ಕ್ಯಾಮೆರಾ ಫಿಲ್ಮ್ಗಳಲ್ಲಿನ ಫೋಟೋಗಳು ಬೆಳಕಿಗೆ ಬರೋದು ಇದರಲ್ಲಿಯೇ
-ವಿಶ್ವನಾಥ ಸುಂಕಸಾಳ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
