ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಡಿಸೆಂಬರ್ 03, 2025

ಗದ್ದೆ - ಒದ್ದೆ

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ಆದರೆ

ಗುರುಗಳ ಹೊಡೆತಕ್ಕೆ 
ರಾತ್ರಿ ಹಾಸಿಗೆಯೂ ಆಗ್ತಿತ್ತು "ಒದ್ದೆ".

ಬುಧವಾರ, ನವೆಂಬರ್ 19, 2025

ಐದು ಲಕ್ಷ ವೀಕ್ಷಣೆಗಳು @spn3187

ಮಂಗಳವಾರ, ನವೆಂಬರ್ 18, 2025

ಗೂಗಲನ ಸೂರ್ಯ ಗ್ರಹಣ ಪುಟದ ವಿಚಿತ್ರಗಳು (Google solar eclipse Pages) 62

Google ನಲ್ಲಿ ಹೀಗೆ ಟೈಪ್ ಮಾಡಿ: 

       "solar eclipse" / "ಸೂರ್ಯ ಗ್ರಹಣ" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಸೂರ್ಯ ಗ್ರಹಣ" ಆಗುವುದನ್ನು Google ಪುಟದ ಮೇಲೆ ಕಾಣುತ್ತದೆ. ನೀವು ಪ್ರತಿ ಬಾರಿ Google ಪುಟವನ್ನು ಮರು ಲೋಡ ಮಾಡಿದಾಗ ಆ ಪರದೆಯಲ್ಲಿ ಸೂರ್ಯ ಗ್ರಹಣ ಆಗುವುದನ್ನು ಕಾಣುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಶನಿವಾರ, ನವೆಂಬರ್ 08, 2025

16. cssನ ಅನಿಮೇಷನ್‌ ಅಕ್ಷರ ವಿನ್ಯಾಸಗಳು

ನಮ್ಮ ಕನ್ನಡ ನಾಡು
𝖘𝖕𝖓3187 / 𝕤𝕡𝕟𝟛𝟙𝟠𝟟

ಶನಿವಾರ, ನವೆಂಬರ್ 01, 2025

ಅಭಿಜಾತ ಭಾಷೆ - ಕನ್ನಡ

  ಕೇಂದ್ರ ಸರಕಾರ ಕನ್ನಡ ಭಾಷೆಗೆ "ಅಭಿಜಾತ ಭಾಷೆ" ಎಂಬ ಗೌರವವನ್ನಿತ್ತು ಆದರಿಸಿತು. ಜುಲೈ 2011 ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿದೆ.



    ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು

1. ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ ರವರೆಗೆ,
2. ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ ರವರೆಗೆ ಮತ್ತು
3. ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದ ವರೆಗೆ

    ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
{ಈ ನೋಟನ್ನು ಸೂಕ್ಷ್ಮವಾಗಿ ಗುರುತಿಸಿ ಮಾಹಿತಿ ತಿಳಿಯಿರಿ}
    ಕನ್ನಡದ ಮೊದಲ ಕನ್ನಡ - ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ.
    ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ - ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ.
    ಕುಮುದೇಂದು ಮುನಿ ರಚಿಸಿದ "ಸಿರಿ ಭೂ ವಲಯ" ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ.
   "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಮತ್ತು ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ.

"ಅಭಿಜಾತ ಭಾಷೆ" ಎಂದರೆ ಶ್ರೇಷ್ಠವಾದ ಮತ್ತು ಸುದೀರ್ಘ ಹಾಗೂ ಸಮೃದ್ಧ ಸಾಹಿತ್ಯಿಕ ಪರಂಪರೆಯನ್ನು ಹೊಂದಿರುವ ಪ್ರಾಚೀನ ಭಾಷೆ. ಇದನ್ನು "ಶಾಸ್ತ್ರೀಯ ಭಾಷೆ" ಎಂದೂ ಕರೆಯುತ್ತಾರೆ.

ಮುಖ್ಯ ಲಕ್ಷಣಗಳು
ಪ್ರಾಚೀನತೆ: ಭಾಷೆಯ ಸಾಹಿತ್ಯ ಮತ್ತು ಶಾಸನಗಳು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿರಬೇಕು.
ಸ್ವತಂತ್ರ ಪರಂಪರೆ: ಭಾಷೆಯ ಸಾಹಿತ್ಯವು ಸ್ವತಂತ್ರವಾಗಿ ಬೆಳೆದಿರಬೇಕು ಮತ್ತು ಇತರ ಭಾಷಾ ಸಮುದಾಯಗಳಿಂದ ಎರವಲು ಪಡೆದಿರಬಾರದು.
ಅವಿಚ್ಛಿನ್ನತೆ: ಕಾಲಾಂತರದಲ್ಲಿ ಭಾಷೆಯ ಬಳಕೆಯಲ್ಲಿ ಮತ್ತು ಸಾಹಿತ್ಯಿಕ ಪರಂಪರೆಯಲ್ಲಿ ನಿರಂತರತೆ ಇರಬೇಕು.
ಮೌಲಿಕತೆ: ಭಾಷೆಯು ತನ್ನದೇ ಆದ ವ್ಯಾಕರಣ, ಶೈಲಿ ಮತ್ತು ಸಾಹಿತ್ಯ ಮೀಮಾಂಸೆಯನ್ನು ಹೊಂದಿರಬೇಕು.
ಭಾರತದ ಅಭಿಜಾತ / ಶಾಸ್ತ್ರೀಯ ಭಾಷೆಗಳು
ಭಾರತ ಸರ್ಕಾರವು ಈ ಕೆಳಗಿನ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ: 
  • ತಮಿಳು (2004)
  • ಸಂಸ್ಕೃತ (2005)
  • ಕನ್ನಡ (2008)
  • ತೆಲುಗು (2008)
  • ಮಲಯಾಳಂ (2013)
  • ಒಡಿಯಾ (2014)
  • ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ (2024)
ಅಭಿಜಾತ ಭಾಷೆಗಳ ಸಂರಕ್ಷಣೆ ಮತ್ತು ಉತ್ತೇಜನವು ಆಯಾ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ಮುಖ್ಯವಾಗಿದೆ. 
ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾಗುತ್ತದೆ. ಆದ್ದರಿಂದ ಅಭಿಜಾತ ಭಾಷೆಗಳನ್ನು ಉಳಿಸುವ ಕೆಲಸ ನಮ್ಮದಾಗಬೇಕು.

ಕನ್ನಡವನ್ನು ಆಯ್ಕೆ ಮಾಡಿ ..
ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ..
ಕನ್ನಡವನ್ನು ಉಳಿಸಿ, ಬೆಳೆಸಿ, ಬಳಸಿ..

1) ಕನ್ನಡ ತಾಣ
(ಈಗಾಗಲೇ ಬೇಟಿ ನೀಡಿದವರು 4,97,497+)

2) "ನಮ್ಮ ಕನ್ನಡ ನಾಡು" - ಟೆಲಿಗ್ರಾಮ ಗುಂಪು 
(ಈಗಾಗಲೇ ಸದಸ್ಯರು ಸಂಖ್ಯೆ 1,234+)

3) ಯೂಟ್ಯೂಬ್ ಚಾನೆಲ್
(ಈಗಾಗಲೇ ಸಬ್ಸ್ಕ್ರೈಬ್ 145+)
  
****
👍   • | •    🗣  • | •     🤝
  ಇಷ್ಟ • | • ಹಂಚು • | • ಬೆಳಸಿ  
  Like ••  Share  •• Support

Share your friends and family this link and also subscribe (join) 

ಸೋಮವಾರ, ಅಕ್ಟೋಬರ್ 27, 2025

ವಿನಂತಿ... (ಕವನ)

ಇಲ್ಲಿ ನಾನೂ
ಎನ್ನುವುದು ಗೌಣ.

ನಮ್ಮ ಬರಹಕ್ಕೆ
ನೀಡಿ ಸನ್ಮಾನ.

ಬರಹದೆದೆಯ ಮೇಲೆ
ಏಕೆ ನ/ನಿಮ್ಮ ಗತ್ತು ಗಮ್ಮತ್ತು.

ಒಮ್ಮೆ ಓದಿ ಹಾಕಿರಿ
ತಮ್ಮ ಅಭಿಪ್ರಾಯ.

ಸುಃಖಾ ಸುಮ್ಮನೆ
ಬೇಡ ಹೊಗಳಿಕೆಯ ಶರಾ.

ಇರಲಿ ಬರಹಕ್ಕೊಂದು
ನಿಜವಾದ ಅಭಿಪ್ರಾಯ.

ಓದುಗರು ನೀವು
ಬರೆಯುವವರು ನಾವು.

ಬರಹ ಮುಕುಟಕೆ
ಓದುಗರೇ ಕಳಶಪ್ರಾಯ.....    
                                                    @ಅನಾಮದೇಯ

ಶನಿವಾರ, ಅಕ್ಟೋಬರ್ 18, 2025

ಗೂಗಲ ಮೆಟ್ರೊನೋಮ್ ಪುಟದ ವಿಚಿತ್ರಗಳು (Google merto nome Pages) 61

Google ನಲ್ಲಿ ಹೀಗೆ ಟೈಪ್ ಮಾಡಿ: 

       "merto nome " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಗುಂಡಿ (Play Button) " ಕಾಣುತ್ತದೆ. ನೀವು ಆ ವೃತ್ತಾಕಾರದ ಗುಂಡಿ (Play Button) ಚಿತ್ರವನ್ನು ಮುಟ್ಟಿದಾಗ ನಿಮಗೆ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ ಗೆರೆ ನಿಮ್ಮ ಪರದೆಯಲ್ಲಿ ಕಾಣುತ್ತದೆ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಹೆಚ್ಚಿನ ಅಥವಾ ಕಡಿಮೆ  ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಟಿಕ್ ಟಿಕ್ ಎಂದು ಶಬ್ದ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ... 
(ಕಿವಿ ಮಾತು: ಈ ಶಬ್ದದಿಂದ ವೈದ್ಯರು ನಿಮ್ಮ ಆರೋಗ್ಯವನ್ನು ತಿಳಿಯುತ್ತಾರೆ.)


ಮೆಟ್ರೊನೋಮ್ ಸಕ್ರಮಗೊಳಿಸಬಲ್ಲ ಗತಿಯಲ್ಲಿ, ಪುನರಾವರ್ತಿತ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ, ಯಾಂತ್ರಿಕ ಇಲ್ಲವೆ ವಿದ್ಯುದುಪಕರಣ. ಇದು ಲೋಲಕದಂತೆ ಇದೆ. ಮೆಟ್ರೋನ್ (ಎಂದರೆ ಮಾಪನ) ಮತ್ತು ನೋಮೋಸ್ (ಎಂದರೆ ನಿಯಮ) ಎಂಬ ಗ್ರೀಕ್ ಶಬ್ದಗಳಿಂದ ಕೂಡಿ ಆಗಿರುವ ಸಂಯುಕ್ತಪದ ಮೆಟ್ರೊನೋಮ್. ಇದನ್ನು ಜರ್ಮನಿಯ ಯೋಹಾನ್ ಮ್ಯಾಲ್ಜೆಲ್ ಎಂಬವ ಉಪಜ್ಞಿಸಿದ (1816). ಇದರಲ್ಲಿಯ ಲೋಲಕವನ್ನು ತಿರುಗಣಿಯ ಮೇಲೆ ಅಳವಡಿಸಲಾಗಿದೆ.

ಬುಧವಾರ, ಅಕ್ಟೋಬರ್ 08, 2025

ವಾಟ್ಸಾಪ್ 🆚 ಅರಟ್ಟೈ

                                           vs     
    ಭಾರತದಲ್ಲಿ ವಾಟ್ಸಾಪ್‌ಗಾಗಿ ಹೊಸ ಸ್ಪರ್ಧೆ ಇದೆ. ಅಥವಾ ಕನಿಷ್ಠ ಪಕ್ಷ ಈಗ ಹಾಗೆ ಕಾಣುತ್ತಿದೆ. ಈ ಪ್ರತಿಸ್ಪರ್ಧಿ ಜೋಹೊ ರಚಿಸಿದ ಅರಟ್ಟೈ ಅಪ್ಲಿಕೇಶನ್. ಈ ಅಪ್ಲಿಕೇಶನ್ ಮೊದಲು 2021 ರಲ್ಲಿ ಆಪ್ ಸ್ಟೋರ್‌ಗಳಿಗೆ ಪ್ರವೇಶಿಸಿದರೂ, ಅದು ಈಗ ಭಾರತ ಸರ್ಕಾರದ ಅನುಮೋದನೆಯಿಂದ ಹಾಗೂ ಸಾಮಾಜಿಕ ಮಾಧ್ಯಮದ ಪ್ರಚಾರ ಮತ್ತು ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಎಂಬ ಸ್ಥಾನಮಾನ ಕಾರಣ. ಇದು ಇತ್ತೀಚೆಗೆ ಜನಪ್ರಿಯತೆಯಲ್ಲಿ ಭಾರಿ ಏರಿಕೆ ಕಂಡಿದೆ. ವಾಸ್ತವವಾಗಿ ಬಳಕೆದಾರರ ಸೈನ್-ಅಪ್‌ಗಳು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಟ್ರಾಫಿಕ್‌ನಲ್ಲಿ 100 ಪಟ್ಟು ಏರಿಕೆಯೊಂದಿಗೆ, ಇದು ಮೆಟಾದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ಗೆ ಸವಾಲು ಹಾಕಬಹುದು ಎಂದು ತೋರುತ್ತದೆ. ಜೊಹೊದ ಮೇಡ್ - ಇನ್ - ಇಂಡಿಯಾ Google (Noto Color Emoji 16.0) (ಇದರ ಹಿಂದೆ ಜೊಹೊ ಕಾರ್ಪೊರೇಷನ್‌ನ ಸಂಸ್ಥಾಪಕ ಶ್ರೀಧರ್ ವೆಂಬು ಇದ್ದಾರೆ. ಅವರು ತಮಿಳುನಾಡಿನ ತಂಜಾವೂರಿನವರು. ಜನನ 1968 ಇವರು ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಫೋರ್ಬ್ಸ್ ಪ್ರಕಾರ , ಅವರು 2024 ರ ಹೊತ್ತಿಗೆ $5.85 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ 39 ನೇ ಶ್ರೀಮಂತ ವ್ಯಕ್ತಿ. ಅವರಿಗೆ 2021 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು).

ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ
ಬಹುಸಾಧನ ಬೆಂಬಲ, ಪಾಕೆಟ್ ಮತ್ತು ಜಾಹೀರಾತು ಮುಕ್ತ ಬಳಕೆಯಂತಹ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್‌ಗೆ ಸವಾಲಾಗಿ ವೇಗವಾಗಿ ಹೊರ ಹೊಮ್ಮುತ್ತಿದೆ. ಎರಡು ಮೆಸೇಜಿಂಗ್ ಅಪ್ಲಿಕೇಶನ್ ಪ್ರತಿಸ್ಪರ್ಧಿಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ.

ಚಾನೆಲ್‌ಗಳು ಮತ್ತು ಕಥೆಗಳು: ಅರಟ್ಟೈ & ವಾಟ್ಸಾಪ್: ಕಥೆಗಳು ಮತ್ತು ಪ್ರಸಾರ ಶೈಲಿಯ ಚಾನಲ್‌ಗಳನ್ನು ಒದಗಿಸುತ್ತದೆ. ಸಂದೇಶ ಕಳುಹಿಸುವಿಕೆಯನ್ನು ಸಾಮಾಜಿಕ ಮಾಧ್ಯಮ ಅಂಶಗಳೊಂದಿಗೆ ವಿಲೀನಗೊಳಿಸುತ್ತದೆ.

ಬಹುಸಾಧನ ಪ್ರವೇಶ: ಅರಟ್ಟೈ ಆಂಡ್ರಾಯ್ಡ್ ಟಿವಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಾಧನಗಳಲ್ಲಿ ಪ್ರವೇಶವನ್ನು ನೀಡುತ್ತದೆ, ಇವುಗಳನ್ನು ವಾಟ್ಸಾಪ್ ಪ್ರಸ್ತುತ ಬೆಂಬಲಿಸುವುದಿಲ್ಲ. ಬಳಕೆದಾರರು ತಮ್ಮ ಅರಟ್ಟೈ & ವಾಟ್ಸಾಪ್ ಖಾತೆಯನ್ನು ಏಕಕಾಲದಲ್ಲಿ ಐದು ಸಾಧನಗಳಲ್ಲಿ ಬಳಸಬಹುದು.

ಪ್ರವೇಶ ಸಾಧ್ಯತೆ : ಅರಟ್ಟೈ ಅನ್ನು ಹಗುರವಾಗಿರಲು ಮತ್ತು ಕಡಿಮೆ ಮೆಮೊರಿ ಸ್ಮಾರ್ಟ್‌ಫೋನ್‌ಗಳು ಮತ್ತು ಹಳೆಯ 2G/3G ನೆಟ್‌ವರ್ಕ್‌ಗಳಲ್ಲಿಯೂ ಸಹ ಸರಾಗವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಬಳಕೆದಾರರಿಗೆ ಮತ್ತು ಬಜೆಟ್ ಸಾಧನಗಳನ್ನು ಹೊಂದಿರುವವರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ. ವಾಟ್ಸಾಪ್ ಹೋಲಿಸಿದರೆ, ಹೆಚ್ಚಿನ ಡೇಟಾ ಮತ್ತು ಸಿಸ್ಟಮ್ ಸಂಪನ್ಮೂಲಗಳನ್ನು ಬಳಸುತ್ತದೆ.

ಪಾಕೆಟ್ ವೈಶಿಷ್ಟ್ಯ: ಅರಟ್ಟೈ ಪಾಕೆಟ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಬಳಕೆದಾರರು ವೈಯಕ್ತಿಕ ಸಂಘಟನೆಗಾಗಿ ಫೋಟೋಗಳು, ವೀಡಿಯೊಗಳು, ಟಿಪ್ಪಣಿಗಳು, ಜ್ಞಾಪನೆಗಳು ಮತ್ತು ಇತರ ಫೈಲ್‌ಗಳನ್ನು ಸಂಗ್ರಹಿಸಬಹುದಾದ ಮೀಸಲಾದ ಸ್ವಯಂ ಚಾಟ್ ಸ್ಥಳ. ಇದು ವೀಡಿಯೊ ಸಭೆಗಳನ್ನು ನಿಗದಿಪಡಿಸಲು ಮೀಸಲಾದ "ಸಭೆಗಳು" ಟ್ಯಾಬ್ ಅನ್ನು ಸಹ ಹೊಂದಿದೆ. ವಾಟ್ಸಾಪ್ ಪ್ರಸ್ತುತ ಹೊಂದಿರದ ವೈಶಿಷ್ಟ್ಯ. ಆದಾಗ್ಯೂ, ವಾಟ್ಸಾಪ್ 'ನೀವು' ಚಾಟ್ ವಿಂಡೋವನ್ನು ಒದಗಿಸುತ್ತದೆ. ಅಲ್ಲಿ ಬಳಕೆದಾರರು ತಮ್ಮೊಂದಿಗೆ ಚಾಟ್ ಮಾಡಬಹುದು ಮತ್ತು ಮಾಧ್ಯಮವನ್ನು ಉಳಿಸಬಹುದು.

█▓▒░⯮ ಕೃಪೆ: 🙶 Google 🙷 ░▒▓█

ಶುಕ್ರವಾರ, ಅಕ್ಟೋಬರ್ 03, 2025

ಕಲ್ಲು / ಮನಸ್ಸು

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
||  ವಾವ್ಹಾ   ||
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
 ||  ವಾವ್ಹಾ   ||
ಆದರೆ
ನಿನ್ನ ಒಮ್ಮೆ ನೆನೆದು 
ನನ್ನ ಮನಸ್ಸು ಮೆತ್ತಗಾಯಿತಲ್ಲ...

ಶುಕ್ರವಾರ, ಸೆಪ್ಟೆಂಬರ್ 26, 2025

"ಧೂಳ" ಎಂಬ ಕಣದ ಬೆಲೆ

ಕಾಲ ಕೆಳಗೆ ಇರುವ ಧೂಳನ್ನು ಕೇವಲವಾಗಿ ನೋಡಬೇಡಿ,
ಕಣ್ಣಲ್ಲಿ ಬಿದ್ದಾಗಲೇ ಗೊತ್ತಾಗುವುದು ಧೂಳಿನ ಬೆಲೆ,

ಹಾಗೆಯೇ
 
ಯಾರನ್ನು ಕೇವಲವಾಗಿ, ಕೀಳಾಗಿ ನೋಡಬೇಡಿ,
ಎಲ್ಲರಿಗೂ ಒಂದು ಗೌರವ ಬೆಲೆ ಇದ್ದೇ ಇರುತ್ತದೆ,
ಅದು ಗೊತ್ತಾಗುವುದು ಸಮಯ ಬಂದಾಗಲೇ.

ಗುರುವಾರ, ಸೆಪ್ಟೆಂಬರ್ 18, 2025

ಗೂಗಲ ಇನ್‌ಪುಟ್ ಪರಿಕರಗಳ ಪುಟ (Google input tools Kannada Pages) 60

ಗೂಗಲ್‌ ಇನ್‌ಪುಟ್ ಪರಿಕರಗಳು (Google IME)
ವಿವರಣೆ ಇಂಗ್ಲಿಷ್‌‌ ಮೂಲಕ ಅನುವಾದಿತ - Google IME, Google Input Tools ಎಂದೂ ಕರೆಯಲ್ಪಡುತ್ತದೆ. ಇದು ಕನ್ನಡ, ಹಿಂದಿ, ಗುಜರಾತಿ, ಮಲಯಾಳಂ, ಮರಾಠಿ, ಬೆಂಗಾಲಿ, ಅಂಹರಿಕ್, ಅರೇಬಿಕ್, ಚೈನೀಸ್, ಗ್ರೀಕ್,  ನೇಪಾಳಿ,  ಜಪಾನೀಸ್,  ಪರ್ಷಿಯನ್... ಸೇರಿದಂತೆ 22+ ಭಾಷೆಗಳಿಗೆ Google ನಿಂದ ಇನ್‌ಪುಟ್ ವಿಧಾನ ಸಂಪಾದಕರ ಗುಂಪಾಗಿದೆ. 

ನಮ್ಮ ಕನ್ನಡ ಬಳಸಿದಂತೆ ಬೆಳೆಯುತ್ತದೆ @spn3187

ಬುಧವಾರ, ಸೆಪ್ಟೆಂಬರ್ 10, 2025

15. ಮೂರು ಪೆಟ್ಟಿಗೆಗಳ ಅಂಚುಗಳು (ಭಾಗ 2)

(ಭಾಗ 2)
4.         5.         6.

ಮಂಗಳವಾರ, ಆಗಸ್ಟ್ 19, 2025

ಗೂಗಲ Dice roller ಪುಟದ ವಿಚಿತ್ರಗಳು (Google Dice roller Pages) 59

Google ನಲ್ಲಿ ಹೀಗೆ ಟೈಪ್ ಮಾಡಿ: 
"Dice roller" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " Dice roller" ಕಾಣುತ್ತದೆ. ನೀವು ಆ Dice roller ಚಿತ್ರದ ಕೆಳಗೆ Roll ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Roll ಸಂಖ್ಯೆಯನ್ನು ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಬುಧವಾರ, ಆಗಸ್ಟ್ 13, 2025

ಹೊಸ ವಗ್ಗರಣೆ ಗಾದೆ ಮಾತುಗಳು (ಹಾಸ್ಯಕ್ಕಾಗಿ ಮಾತ್ರ)

೧. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
೨. 
ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ.
೩. 
ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
೪. 
ಮನಸ್ಸೊಳಗೆ ಅನಾಚಾರ, ಮುಖದಲ್ಲಿ ಬೃಂದಾವನ..
೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..
೬. 
ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು.
೭. 
ಕೈ ಕೆಸರಾದರೆ ನಾನೇನು ಮಾಡಲಿ ?
೮. 
ಗೆಳೆಯರ ಜಗಳ ಗುಂಡು(ಸಾರಾಯಿ) ಹಾಕುವ ತನಕ..
೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
೧೧. 
ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ ?
೧೨. 
ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

ಸೂಚನೆ ==> ಇವುಗಳನ್ನು ಓದಿ ನಕ್ಕರೆ ನೀವೆ ಜವಾಬ್ದಾರರು...👦😆

ಭಾನುವಾರ, ಆಗಸ್ಟ್ 03, 2025

ತಿಳಿಯುವುದಿಲ್ಲ / ಇರುವುದಿಲ್ಲ

ಆತ್ಮೀಯರೊಂದಿಗೆ ಸಮಯ
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆತ್ಮೀಯರೊಂದಿಗೆ ಸಮಯ 
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆದರೆ
ಸಮಯದೊಂದಿಗೆ ಆತ್ಮೀಯರ  
ಬಣ್ಣ ಬಯಲಾಗುವುದೇ ಇರುವುದಿಲ್ಲ.

ಶನಿವಾರ, ಜುಲೈ 19, 2025

ಗೂಗಲ spinner / Fidget ಪುಟದ ವಿಚಿತ್ರಗಳು (Google spinner/ Fidget Pages) 58

Google ನಲ್ಲಿ ಹೀಗೆ ಟೈಪ್ ಮಾಡಿ: 
" spinner / Fidget " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಸ್ಪಿನ್ನರ್" ಕಾಣುತ್ತದೆ. ನೀವು ಆ ವೃತ್ತಾಕಾರದ ಸ್ಪಿನ್ನರ್ ಚಿತ್ರದ ಕೆಳಗೆ spin ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಅಂಕಿಗಳನ್ನು ಹೆಚ್ಚಿಸಲು ಬಹುದು ಹಾಗೂ ಕಡಿಮೆಯು ಮಾಡಬಹುದು. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Number ದಿಂದ Fidget ದಿಂದ Number ಗೆ ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಸೋಮವಾರ, ಜುಲೈ 14, 2025

ಪಪ್ಪಾಯಿ ಏಕೆ ತಿನ್ನಬೇಕು…? ಇಲ್ಲಿವೆ ನೋಡಿ ಕೆಲವು ಕಾರಣಗಳು


         ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‍ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ.

1. ಉರಿಯೂತ ನಿವಾರಕ:
ಪಪ್ಪಾಯಿ ಚಿಮೊಪಾಪಿನ್ ಮತ್ತು ಪಾಪಿನ್ ಗಳೆಂಬ ಎರಡು ಪ್ರೋಟೀನ್ ಜೀರ್ಣಕಾರಕ ಕಿಣ್ವಗಳನ್ನು, ವಿಟಮಿನ್ ಎ, ಸಿ ಮತ್ತು ಕ್ಯಾರೋಟಿನ್ ಹೊಂದಿದೆ. ಇವೆಲ್ಲವೂ ಈ ಹಣ್ಣಿಗೆ ರುಮಟಾಯ್ಡ್ ಆಥ್ರೈಟಿಸ್ ವಿರುದ್ಧ ಹೋರಾಟಕ್ಕೆ ಕಸುವು ನೀಡುತ್ತವೆ ಮತ್ತು ಉರಿಯೂತಗಳ ನಿವಾರಣೆಗೂ ಸಹಕಾರಿಯಾಗಿದೆ.

2. ಕರುಳಿನ ರಕ್ಷಕ:
ಪಪ್ಪಾಯಿ ಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ.

3. ವಾಕರಿಕೆ ನಿವಾರಕ: 
ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ.

4. ಒತ್ತಡ ಶಾಮಕ:
ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‍ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ.

5. ಋತುಚರ್ಯೆ ಸುಗಮ:
ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ, ಹುಣಸೆಹಣ್ಣು ಮತ್ತು ಉಪ್ಪನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯಿರಿ. ಈ ಮಿಶ್ರಣ ರುಚಿಕರವಾಗಿಲ್ಲದಿದ್ದರೂ ಋತುದೋಷ ಶಮನಗೊಳಿಸಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

6. ಕ್ಯಾನ್ಸರ್ ವಿರುದ್ಧ ಸೆಣಸು:
ಪಪ್ಪಾಯಿಯಲ್ಲಿರುವ ಜೀವಸತ್ವ ಪಾಪಿನ್ ಮೇಲೆ ಅಧ್ಯಯನ ನಡೆಯುತ್ತಿದೆ. ಈ ಜೀವಸತ್ವವು ಕ್ಯಾನ್ಸರ್ ರೋಗಿಗಳಲ್ಲಿ ಕಿಮೋ ಥೆರಪಿ ಚಿಕಿತ್ಸೆಯ ಬಳಿಕ ತಲೆದೋರುವ ತೊಂದರೆಗಳ ಉಪಶಾಮಕವಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ಕಸುವು ಲಭಿಸುತ್ತದೆ.

7. ರಕ್ತ ಪರಿಚಲನೆಗೆ ಪೂರಕ :
ಜನನ ನಿಯಂತ್ರಣ ಗುಳಿಗೆ ಸೇವಿಸುವವರು, ಧೂಮಪಾನಿಗಳು ಮುಂತಾದವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಪಪ್ಪಾಯಿ ಸೇವನೆಯು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

       ಈ ಹಣ್ಣು ಪಾದಗಳ ಬಿರುಕನ್ನೂ ನಿವಾರಿಸುತ್ತದೆ ಎಂಬ ಪ್ರತೀತಿ ಇದೆ. ಪಪ್ಪಾಯಿಯನ್ನು ಚೆನ್ನಾಗಿ ಕಿವುಚಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಈ ದ್ರಾವಣದಲ್ಲಿ ಪಾದಗಳನ್ನು ಉಜ್ಜಿದರೆ ಸೀಳುಪಾದ ಗುಣವಾಗುತ್ತದೆ.

ಬುಧವಾರ, ಜುಲೈ 09, 2025

14. ಮೂರು ಪೆಟ್ಟಿಗೆಗಳ ಅಂಚುಗಳು ( ಭಾಗ 1)

(ಭಾಗ 1)
1.     2.     3.

ಭಾನುವಾರ, ಜೂನ್ 15, 2025

ಅ-ಅಃ (ತುಂಟ ಪುಟ್ಟನ ಪ್ರಶ್ನೆಗಳು)

ರಸನು ನೆಯ ಏರಿದ್ದೇಕೆ?
ಲಿಯೂ ಗಲೇ ಓಡಿದ್ದೇಕೆ?
ಡವು ರಿಗೆ ಹೊರಟದ್ದೇಕೆ?
ಷಿಯು ತ್ತಲೋ ತಿರುಗಿದ್ದೇಕೆ?
ಡಿಯು ವರ ಕಡಿದದ್ದೇಕೆ?
ಡನೆಯೆ ತಿಯ ಹಿಡಿದದ್ದೇಕೆ?
ತಣ ಅಂ ಅಂದದ್ದೇಕೆ?
ಅಃ ಅಹಹಾ ಅಂ ನಕ್ಕಿದ್ದೇಕೆ?
ಹೇಳೋ ಣ್ಣ, ಬೇಗನೇ ಹೇಳೋ..

ಪಿಯು ಜೂರ ತಿಂದಿದ್ದೇಕೆ?
ಣಗಣ ಘಂಟೆ ಬಾರಿಸಿತೇಕೆ?

ಚಂದಿರ ಛತ್ರಿ ತರಲಿಲ್ಲೇಕೆ?
ಲಜ ರಿಯೆಡೆ ಹೋಗಿದ್ದೇಕೆ?

ಗರು ಕ್ಕನ ಗುದ್ದಿದ್ದೇಕೆ?
ಮರು ಢಮ ಕುಣಿದ್ದೇಕೆ?

ಮಟೆಯ ಥರ ನಡುಗಿದ್ದೇಕೆ?
ಮಡಿಯು ಬ್ ಧಬ್ ಬಡಿದದ್ದೇಕೆ?
ಳ್ಳಿಯು 
ರಮನ ಕರೆದದ್ದೇಕೆ?
ಲವನು ಡಿಸಲು ಹುಡುಕಿದ್ದೇಕೆ?
ರ್ಜರಿ ರವನು ಹತ್ತಿದ್ದೇಕೆ?

ಮಳನ ಮಿಸಲು ಹೋದದ್ದೇಕೆ?
ಲಂಕಿಣಿ ವಧಿಸದೇ ಶಪಿಸಿದ್ದೇಕೆ?
ಡ್ಭುಜ ಮತಟ್ಟು ಮಾಡಿದ್ದೇಕೆ?
ದ್ದಿಗೆ ಪ್ಪಳದ ಭೋಜನವೇಕೆ?
ಕ್ಷಮೆಯದು ಜ್ಞಾನಿಗೆ ಇರಲೇಬೇಕೆ?

ಹೇಳೋ ಅಣ್ಣ, ಬೇಗನೇ ಹೇಳೋ..
ಕ್ಷರ ಮಾಲೆಗೆ ಪ್ರಶ್ನೆಯ ಹಾರ
ಜಾ ಪುಟ್ಟನಿಗೆ ಬೇಕೇ ಉತ್ತರ?


- ಶ್ರೀ ಬೇಂದ್ರೆ ಮಂಜುನಾಥ, ಹಾಸನ 
(02/11/2013, ವಿಜಯವಾಣಿ)

ಮಂಗಳವಾರ, ಜೂನ್ 03, 2025

ಭೂಪ / ಪಾಪ (ಕನ್ನಡದ ಮತ್ತೊಂದು ಶಾಯರಿ)

ಹಾಲು ಕುಡಿದು ಬೆಳೆದ ಭೂಪ ||  ವಾವ್ಹಾ   ||
ಹಾಲು ಕುಡಿದು ಬೆಳೆದ ಭೂಪ || ವಾವ್ಹಾ ||
ಆದರೆ
ಸರಾಯಿ ಕುಡಿದು ಸತ್ತ "ಪಾಪ".

ಭಾನುವಾರ, ಮೇ 25, 2025

ಇವುಗಳೆರಡು ನಮ್ಮೊಟ್ಟಿಗೆ ಇರಲಿ @spn3187

ಕನಸು - ನನಸುಗಳೆರಡು
ನಮ್ಮೊಟ್ಟಿಗೆ ಇರಲಿ

ಪ್ರೀತಿ - ಪ್ರೇಮಗಳೆರಡೂ
ನಮ್ಮೊಟ್ಟಿಗೆ ಇರಲಿ 

ಸುಖ - ಸಂತೋಷಗಳೆರಡು 
ನಮ್ಮೊಟ್ಟಿಗೆ ಇರಲಿ

ಪ್ರೀತಿ - ಸ್ನೇಹಗಳೆರಡು 
ನಮ್ಮೊಟ್ಟಿಗೆ ಇರಲಿ

ಬಂಧು - ಬಂಧವರೆಲ್ಲರೂ
ನಮ್ಮೊಟ್ಟಿಗೆ ಇರಲಿ

ಕಷ್ಟ - ಸುಖಗಳೆರಡು
ನಮ್ಮೊಟ್ಟಿಗೆ ಇರಲಿ

ನೋವು - ನಲಿವುಗಳೆರಡು 
ನಮ್ಮೊಟ್ಟಿಗೆ ಇರಲಿ

ಭರವಸೆ - ಆತ್ಮವಿಶ್ವಾಸಗಳೆರಡು 
ನಮ್ಮೊಟ್ಟಿಗೆ ಇರಲಿ

ಅವಳಿ - ಜವಳಿಗಳೊಂದಿಗೆ ಸಮರಸದ ಬದುಕು 
ನಮ್ಮೊಟ್ಟಿಗೆ ಇರಲಿ...... 

                                                          @- ಉಮಾ ಪ್ರಕಾಶ

ಸೋಮವಾರ, ಮೇ 19, 2025

ಗೂಗಲ ಉಪಗ್ರಹಗ ಅಪ್ಪಳಿಸುವಿಕೆ ಪರೀಕ್ಷೆ ಪುಟದ ವಿಚಿತ್ರಗಳು (Google dart mission Pages) 57

Google ನಲ್ಲಿ ಹೀಗೆ ಟೈಪ್ ಮಾಡಿ: 
"dart mission" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಡಾರ್ಟ್ ಮಿಷನ್" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಾಹ್ಯಾಕಾಶ ನೌಕೆಯು ಬರುತ್ತಿರುವುದನ್ನು ಕಾಣುತ್ತದೆ. ಅದು ನಿಮ್ಮ Google ಪುಟಕ್ಕೆ ಬಂದು ಬಡಿಯುತ್ತದೆ. ಆಗ ನಿಮ್ಮ ಪರದೆ ಚಲಿಸುತ್ತಾ ಸ್ವಲ್ಪ ವಕ್ರವಾಗುತ್ತದೆ. ನಂತರ ನಿಮ್ಮ ಪುಟ ವಕ್ರವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಉದ್ದೇಶ: ಡಾರ್ಟ್ ಮಿಷನ್ ಎಂದರೆ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART). ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆಯುವ ಮೂಲಕ ಬಾಹ್ಯಾಕಾಶ ನೌಕೆಯ ದಿಕ್ಕನ್ನು ಬದಲಾಯಿಸುವುದು ಇದರ ಉದ್ದೇಶವಾಗಿದೆ. ನಾಸಾದ ಈ ಮಿಷನ್ ಯಶಸ್ವಿಯಾದರೆ, ಭವಿಷ್ಯದಲ್ಲಿ ಭೂಮಿಯ ಕಡೆಗೆ ಬರುವ ಅಪಾಯಕಾರಿ ಕ್ಷುದ್ರಗ್ರಹಗಳು ನಿಲ್ಲುತ್ತವೆ. ಅಥವಾ ಅವರ ದಿಕ್ಕನ್ನು ಬದಲಾಯಿಸಲಾಗುತ್ತದೆ. )
█▓▒▒░░░⮊⯮ ಕೃಪೆ: 🙶Google🙷 ⮈░░░▒▒▓█

ಗುರುವಾರ, ಮೇ 08, 2025

13. CSSನ ಸುಂದರ ಪೆಟ್ಟಿಗೆ ಮತ್ತು ಅಕ್ಷರಗಳು

ನೀವು ಇಲ್ಲಿಯೇ ನೋಡುತ್ತಿರುವಿರಾ ?
ಇದು ಕೇವಲ  Cascading Style Sheets (CSS)ನಿಂದ ಸಾದ್ಯ 

I didn’t know you could do gradient borders like this. Hover over this element to see the gradient animate .

ಮಂಗಳವಾರ, ಏಪ್ರಿಲ್ 22, 2025

ಗೂಗಲ ತಿರುಗುವ ಚಕ್ರ (ಸ್ಪಿನ್ನರ್) ಪುಟದ ವಿಚಿತ್ರಗಳು (Google fidget spinner Pages) 56


Google ನಲ್ಲಿ ಹೀಗೆ ಟೈಪ್ ಮಾಡಿ: 
"fidget spinner" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ತ್ರಿಕೋನದ ಸ್ಪಿನ್ನರ್" ಕಾಣುತ್ತದೆ. ನೀವು ಆ ತ್ರಿಕೋನದ ಸ್ಪಿನ್ನರ್ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█

ಗುರುವಾರ, ಏಪ್ರಿಲ್ 03, 2025

ಆಸರೆ / ಆ ಆಸರೆ (ಕನ್ನಡದ ಮತ್ತೊಂದು ಶಾಯರಿ)

ಮಾತು ಬಿಟ್ಟಾಗ ಮೌನವೇ ಆಸರೆ ||  ವಾವ್ಹಾ   ||
ಮಾತು ಬಿಟ್ಟಾಗ ಮೌನವೇ ಆಸರೆ || ವಾವ್ಹಾ ||
ಆದರೆ
ಮನಸ್ಸು ಕೆಟ್ಟಾಗ ನೆನಪುಗಳೇ "ಆ ಆಸರೆ".

ಶುಕ್ರವಾರ, ಮಾರ್ಚ್ 28, 2025

ಗಣಕಯಂತ್ರ (ಕಂಪ್ಯೂಟರ್)



         ಲ್ಯಾಟಿನ್ ಪದಗಳಾದ 'computus' ಹಾಗೂ 'computare' ಗಳನ್ನು 'ಕಂಪ್ಯೂಟರ್(Computer)' ಹೆಸರಿನ ಮೂಲ ಎಂದು ಗುರುತಿಸಲಾಗಿದೆ . ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಗಣಕಯಂತ್ರ(ಕಂಪ್ಯೂಟರ್) ಎನ್ನುವರು. 

    ಯಾಂತ್ರಿಕ ಕಂಪ್ಯೂಟರ್ಗಳ ಆವಿಷ್ಕಾರಕ್ಕೆ ಮೊದಲು ಲೆಕ್ಕಾಚಾರ ಮಾಡುವ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರ್ಗಳೆಂದು ಕರೆಯಲಾಗುತ್ತಿತ್ತು. ಯಂತ್ರಗಳ ನೆರವಿನಿಂದ ಲೆಕ್ಕಾಚಾರ ಮಾಡುವುದು ಸಾಧ್ಯವಾದ ನಂತರ ಅಂತಹ ಯಂತ್ರಗಳನ್ನು ಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸ ಬೆಳೆಯಿತು.

1.. ಜಾಹೀರಾತು

2.ಜಾಹೀರಾತು