
ಕೇಂದ್ರ ಸರಕಾರ ಕನ್ನಡ ಭಾಷೆಗೆ "ಅಭಿಜಾತ ಭಾಷೆ" ಎಂಬ ಗೌರವವನ್ನಿತ್ತು ಆದರಿಸಿತು. ಜುಲೈ 2011 ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿದೆ.
ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು
1. ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ ರವರೆಗೆ,
2. ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ ರವರೆಗೆ ಮತ್ತು
3. ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದ ವರೆಗೆ
ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
{ಈ ನೋಟನ್ನು ಸೂಕ್ಷ್ಮವಾಗಿ ಗುರುತಿಸಿ ಮಾಹಿತಿ ತಿಳಿಯಿರಿ}
ಕನ್ನಡದ ಮೊದಲ ಕನ್ನಡ - ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ - ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ.
ಕುಮುದೇಂದು ಮುನಿ ರಚಿಸಿದ "ಸಿರಿ ಭೂ ವಲಯ" ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ.
"ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಮತ್ತು ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ.
ಮುಖ್ಯ ಲಕ್ಷಣಗಳು
ಪ್ರಾಚೀನತೆ: ಭಾಷೆಯ ಸಾಹಿತ್ಯ ಮತ್ತು ಶಾಸನಗಳು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿರಬೇಕು.ಭಾರತದ ಅಭಿಜಾತ / ಶಾಸ್ತ್ರೀಯ ಭಾಷೆಗಳು
ಸ್ವತಂತ್ರ ಪರಂಪರೆ: ಭಾಷೆಯ ಸಾಹಿತ್ಯವು ಸ್ವತಂತ್ರವಾಗಿ ಬೆಳೆದಿರಬೇಕು ಮತ್ತು ಇತರ ಭಾಷಾ ಸಮುದಾಯಗಳಿಂದ ಎರವಲು ಪಡೆದಿರಬಾರದು.
ಅವಿಚ್ಛಿನ್ನತೆ: ಕಾಲಾಂತರದಲ್ಲಿ ಭಾಷೆಯ ಬಳಕೆಯಲ್ಲಿ ಮತ್ತು ಸಾಹಿತ್ಯಿಕ ಪರಂಪರೆಯಲ್ಲಿ ನಿರಂತರತೆ ಇರಬೇಕು.
ಮೌಲಿಕತೆ: ಭಾಷೆಯು ತನ್ನದೇ ಆದ ವ್ಯಾಕರಣ, ಶೈಲಿ ಮತ್ತು ಸಾಹಿತ್ಯ ಮೀಮಾಂಸೆಯನ್ನು ಹೊಂದಿರಬೇಕು.
ಭಾರತ ಸರ್ಕಾರವು ಈ ಕೆಳಗಿನ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ:
- ತಮಿಳು (2004)
- ಸಂಸ್ಕೃತ (2005)
- ಕನ್ನಡ (2008)
- ತೆಲುಗು (2008)
- ಮಲಯಾಳಂ (2013)
- ಒಡಿಯಾ (2014)
- ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ (2024)
ಅಭಿಜಾತ ಭಾಷೆಗಳ ಸಂರಕ್ಷಣೆ ಮತ್ತು ಉತ್ತೇಜನವು ಆಯಾ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ಮುಖ್ಯವಾಗಿದೆ.
ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾಗುತ್ತದೆ. ಆದ್ದರಿಂದ ಅಭಿಜಾತ ಭಾಷೆಗಳನ್ನು ಉಳಿಸುವ ಕೆಲಸ ನಮ್ಮದಾಗಬೇಕು.
ಕನ್ನಡವನ್ನು ಆಯ್ಕೆ ಮಾಡಿ ..
ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ..
ಕನ್ನಡವನ್ನು ಉಳಿಸಿ, ಬೆಳೆಸಿ, ಬಳಸಿ..
(ಈಗಾಗಲೇ ಬೇಟಿ ನೀಡಿದವರು 4,97,497+)
2) "ನಮ್ಮ ಕನ್ನಡ ನಾಡು" - ಟೆಲಿಗ್ರಾಮ ಗುಂಪು
(ಈಗಾಗಲೇ ಸದಸ್ಯರು ಸಂಖ್ಯೆ 1,234+)
3) ಯೂಟ್ಯೂಬ್ ಚಾನೆಲ್
(ಈಗಾಗಲೇ ಸಬ್ಸ್ಕ್ರೈಬ್ 145+)
****
👍 • | • 🗣 • | • 🤝
ಇಷ್ಟ • | • ಹಂಚು • | • ಬೆಳಸಿ
Like •• Share •• Support
Share your friends and family this link and also subscribe (join)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.