fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ನವೆಂಬರ್ 08, 2020

ಕನ್ನಡ ಇತಿಹಾಸ (6/11)

ಕೃಪೆ: ಕನ್ನಡದ ವಿಕಿಪೀಡಿಯ

ಸ್ವರಗಳು
· ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು
ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ. 
ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು. 

ಸ್ವರಗಳಲ್ಲಿ ನಾಲ್ಕು ವಿಧ 
· ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ 

· ದೀರ್ಘಸ್ವರ/ಉದ್ದಸ್ವರ : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ 

· ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ. 
· ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ 


ಯೋಗವಾಹಗಳು 
ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ. 

1. ಅನುಸ್ವಾರ/ಬಿಂದು (ಅಂ) ಮತ್ತು 
2. ವಿಸರ್ಗ (ಅಃ) 
3. ಉಪಾಧ್ಮಾನೀಯ ‍: ೲ 
4. ಜಿಹ್ಹಾಮೂಲೀಯ : ೱ 

ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರಪ್ರದೇಶ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ
 (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು.
ಉದಾ: 
· ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು ) 
· ಅಞ್ಚೆ = ಅಂಚೆ 
· ತಙ್ಗಿ = ತಂಗಿ 
· ಗಣ್ಟೆ = ಗಂಟೆ 
· ಅನ್ದ = ಅಂದ 
· ಅಮ್ಬ = ಅಂಬ
 
· ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ 

· ಅಚ್ಚ-ಕನ್ನಡ (ಹೊರನುಡಿಗಳ ಪದಗಳನ್ನು ಬಿಟ್ಟ ಕನ್ನಡ) ದಲ್ಲಿ ವಿಸರ್ಗವಿರುವ ಪದವಿಲ್ಲ.

1 ಕಾಮೆಂಟ್‌:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು