fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ನವೆಂಬರ್ 05, 2020

ಕನ್ನಡ ಇತಿಹಾಸ (4/11)

ಕೃಪೆ: ಕನ್ನಡದ ವಿಕಿಪೀಡಿಯ

ಸಂಜ್ಞಾ ಪ್ರಕರಣ : 

ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ. ೪ 

ಕವಿಗಳ್ ಸ್ವರದಿಂ ವರ್ಗದಿ 
ನವರ್ಗದಿಂ ಯೋಗವಾಹದಿಂ ದೇಶಿಯಳು 
ದ್ಭವಮಪ್ಪ ವರ್ಣದಿಂ ಪಂ 
ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ 

ಸೂತ್ರ ವಿವರಣೆ:ಕವಿಗಳು ಸ್ವರದಿಂದ, ವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ.


ಕನ್ನಡದ ಶುದ್ಧಾಕ್ಷರಗಳ ವಿಧಗಳು 

ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ. 


ಕನ್ನಡ ವರ್ಣಮಾಲೆ      
ಕನ್ನಡ ವರ್ಣಮಾಲೆಯಲ್ಲಿ ೪೯+1 ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಕನ್ನಡ ಅಕ್ಷರಮಾಲೆ
ಸ್ವರಗಳು
=13+1=14
ಯೋಗವಾಹಗಳು
= 2
ವ್ಯಂಜನಗಳು
= 25
ಅವರ್ಗೀಯ ವ್ಯಂಜನಗಳು
= 9

1. ಸ್ವರಗಳು - 13+1=14

2. ವ್ಯಂಜನಗಳು -25+9=34

3. ಯೋಗವಾಹಗಳು-02
14+34+02=50
ೠ - ಎಂಬ ಅಕ್ಷರವನ್ನು ಕಡಿಮೆ ಮಾಡಿ ಒಟ್ಟು - 49 ಅಕ್ಷರಗಳೆಂದು ಹೇಳುತ್ತಾರೆ.

ೠ - ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.

ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು