fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ನವೆಂಬರ್ 07, 2020

ಕನ್ನಡ ಇತಿಹಾಸ (5/11)

ಕೃಪೆ: ಕನ್ನಡದ ವಿಕಿಪೀಡಿಯ

ಸ್ವರ 
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.14-1=13
· ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು. 

ಸ್ವರಗಳ ವಿಧ 
ಸ್ವರಗಳಲ್ಲಿ 2 ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು


ಹೃಸ್ವ ಸ್ವರ 
ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ,ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು. 

ದೀರ್ಘ ಸ್ವರ 
ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು. 


ವ್ಯಂಜನಗಳು
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ 

1. ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು) 
2. ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ) 

ವರ್ಗೀಯ ವ್ಯಂಜನಗಳು
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ, 

1. ಕ-ವರ್ಗ, = ಕ, ಖ, ಗ, ಘ, ಙ.

2. ಚ-ವರ್ಗ, = ಚ, ಛ, ಜ, ಝ, ಞ.

3. ಟ-ವರ್ಗ ,= ಟ, ಠ, ಡ, ಢ, ಣ.

4. ತ-ವರ್ಗ, = ತ, ಥ, ದ, ಧ, ನ.

5. ಪ-ವರ್ಗ,= ಪ, ಫ, ಬ, ಭ, ಮ.

ಅವರ್ಗೀಯ ವ್ಯಂಜನಗಳು
ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ.ಅವು ಯಾವುವೆಂದರೆ

-ಯ,ರ,ಲ,ವ,ಶ,ಷ,ಸ,ಹ,ಳ.

ಕನ್ನಡ ಒತ್ತಕ್ಷರಗಳು 
ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ: 

1. ಕ್ಕ ಖ್ಖ ಗ್ಗ ಘ್ಘ ಙ್ಙ

2. ಚ್ಚ ಛ್ಛ ಜ್ಜ ಝ್ಝ ಞ್ಞ

3. ಟ್ಟ ಠ್ಠ ಡ್ಡ ಢ್ಢ ಣ್ಣ

4. ತ್ತ ಥ್ಥ ದ್ದ ಧ್ಧ ನ್ನ

5. ಪ್ಪ ಫ್ಫ ಬ್ಬ ಭ್ಭ ಮ್ಮ

6. ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

ಯೋಗವಾಹಗಳು 
ಸ್ವತಂತ್ರವಲ್ಲದ- ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ. 

· ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು (ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು. 
· ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು