fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ನವೆಂಬರ್ 04, 2020

ಕನ್ನಡ ಇತಿಹಾಸ (3/11)

ಕೃಪೆ: ಕನ್ನಡದ ವಿಕಿಪೀಡಿಯ

10-12ನೆಯ ಶತಮಾನ 

· ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ. 

· ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ. 

· ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ. 

· ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ. 

· ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ. 

· 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ. 

ಪರಿಣಾಮ 

· ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು. 

· ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ. 

ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು. 

· 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು. 

· ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ. 

· ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು. ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ.
ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು