ಶನಿವಾರ, ಸೆಪ್ಟೆಂಬರ್ 24, 2016

ನೆಪ

·   ನೆನಪಾಗದ್ದಕ್ಕೆ ನಾವು ಕೊಡುವ ಕಾರಣ
·   ಇದಕ್ಕಾಗಿ ತುಂಬ ಹುಡುಕಬೇಕಾಗಿಲ್ಲ
·   ರಜೆ ಚೀಟಿಯ ಪ್ರಮುಖ ವಸ್ತು
·   ತಪ್ಪು ಮಾಡಿ ತಪ್ಪಿಸಿಕೊಳ್ಳಲು ಇರುವ ಶಾರ್ಟ್ಕಟ್
·  ಸಮಯಕ್ಕೆ ಸರಿಯಾಗಿ ನೆಪ ಹುಡುಕಬಲ್ಲವನೇ ನಿಜವಾದ ಜಾಣನೆನಿಸುತ್ತಾನೆ
·    ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕೊಡುವ ಜವಾಬು
·    ಲೇಟಾಗಿ ಬಂದ ಗಂಡನ ಪ್ರಲಾಪಗಳು
·    ಆಡಿದ ಸುಳ್ಳಿನ ಸುಳಿಯಲಿ, ಸಿಲುಕದಿರಲು ಬಳಸುವ ಆಧಾರ
·    ಸೋಮವಾರಕ್ಕೆ ಕೆಲಸವನ್ನು ಮುಂದೂಡಲು ಸೋಮಾರಿಕೊಡುವ ಕಾರಣ
·    ಇದು ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು
· ನಮ್ಮ ಬುದ್ಧಿ ಅತ್ಯಂತ ಹೆಚ್ಚು ಕೆಲಸ ಮಾಡುವುದು ಇದನ್ನು ಹುಡುಕುವುದಕ್ಕಾಗಿಯೇ
-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: