ನವಮಾಸಗಳು ಅಮ್ಮನ ಗರ್ಭದಲಿ… ಸುತ್ತಲೂ ರಕ್ತಮಾಂಸವು ಜಿನುಗುತಿರಲೂ… ಉಂಡುಂಡು ಹೊಟ್ಟೆ ಉಬ್ಬರಿಸುವ ತನಕ.. ಆಗಾಗ ಅವಳ ಹೊಟ್ಟೆಗೆ ಒದೆಯುತ, ತೆವಳಾಡುತ ಯೋನಿಯಾಚೆಗಿನ ಬದುಕು ಗೊತ್ತಿಲ್ಲದ ಕತ್ತಲು..! ಬೀಜವಾಗಿ, ಕುಡಿಯಾಗಿ, ಚಿಗುರಾಗಿ ಬೆಳೆದು ಗರ್ಭದೊಳಗಿನ ಸ್ವರ್ಗವನು ಹಸನ ಮಾಡಿ, ಅಮ್ಮನಿಗೆ ಭಾರವಾಗಿ ಇಡೀ ಮನೆಯಲ್ಲಿ ನಾನೊಬ್ಬನೇ..! ಬುದ್ದಿಲದ್ದಿಗಳ ಹೇರಿಕೆ ಇಲ್ಲದ ಹಾಳೆಯಲಿ ಅಮ್ಮನು ಕೊಟ್ಟ ನಾಳದಲಿ ಬದುಕುತಾ, ಚಿಂತಿಸುತಾ.. ಸುಖವಾಗಿದ್ದೆ, ಹೆತ್ತವರ ಕನಸಾಗಿದ್ದೆ, ಎಲ್ಲರ ಪರಮಾತ್ಮನಾಗಿದ್ದೆ. ಅಂದು ಅಮ್ಮನ ಹೊಟ್ಟೆಯಲಿ ನಾನೊಬ್ಬನೇ..! ಅಸೂಹೆ ಪಟ್ಟಿರಬೇಕು ನನ್ನ ನಗುವ, ಸುಖವ ನೋಡಿ. ಒಲ್ಲದ ಮನಸ್ಸಿನಲಿ ಹೊರಗೆಳೆದು ಹಾಕಿ, ಅಮ್ಮನ ಗರ್ಭವನು ಖಾಲಿಮಾಡಿ, ಕಾಣದ ಪ್ರಪಂಚದಲಿ ಒಲ್ಲದ ಮನಸ್ಸಿನಿಂದ ಕಣ್ಣುಬಿಟ್ಟು ನೋಡುತ್ತಿದ್ದೆ… ಇಲ್ಲಿಯವರೆಗೆ ನಾನೆಲ್ಲಿದ್ದೆ ಅಂತ ಚಿಂತಿಸುತ್ತಿದ್ದೆ.
Posted By ಶ್ರೀಧರ ಬನವಾಸಿ (ಫಕೀರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.