fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಏಪ್ರಿಲ್ 26, 2016

ಆನಂದ ಸಿದ್ಧೇಶ್ವರ + ಆನಂದಯ್ಯ

ಆನಂದ ಸಿದ್ಧೇಶ್ವರ

ಅಂಕಿತ ನಾಮ: ಆನಂದ ಸಿದ್ದೇಶ್ವರ
ಕಾಲ:
ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: 

ಆನಂದಯ್ಯ

 

ಭಾನುವಾರ, ಏಪ್ರಿಲ್ 24, 2016

ಹೆಂಡತಿ



  • ·         ಗಂಡನ 'ಪ್ರಾಣಪ್ರಿಯೆ' ಇದು ಬಹುವ್ರೀಹಿ ಸಮಾಸ. (ಗಂಡನ ಪ್ರಾಣವು ಯಾರಿಗೆ ಪ್ರಿಯವೋ ಅವಳು)

  • ·         ಹೆಂಡತಿ-ಪ್ರಾಣ ಹಿಂಡುತಿ ಎಂಬುದು ಕವಿವಾಣಿ

  • ·         ಇವಳಿರುವುದರಿಂದಲೇ ಗಂಡನ ಬುದ್ಧಿಗೆ ಸ್ವಲ್ಪವಾದರೂ ಕೆಲಸ ಸಿಗುತ್ತಿರುವುದು

  • ·         ಮನೆ ಬೆಳಗುವವಳು (ಲೈಟ್ ಆಫ್ಮಾಡುವುದೇ ಇಲ್ಲ)

  • ·         ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಿಮಗದು ಕೋಟಿ ರೂಪಾಯಿ. ಇಬ್ಬರಿದ್ದರೆ ನೀವು ಒಬ್ಬ ಬಡಪಾಯಿ

  • ·         ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... ಹೊರಗಡೆ ಹೋದರೆ ಗಂಡನಿಗೆ ಶಾಪಿಂಗ್ ಭಯ

  • ·         ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... ಹೊರಗಡೆ ಹೋದ ಗಂಡನಿಗೆ ಸ್ವಲ್ಪ ಸ್ವಾತಂತ್ರ್ಯ

  • ·         ಇವಳು ನಿಮ್ಮ ಬೆನ್ನಿಗಿದ್ದರೆ ನೀವು ಒಬ್ಬ ಸಿಪಾಯಿ

  • ·         ಇವಳ ಬೆನ್ನಿಗೆ ನೀವಿದ್ದರೆ ನಿಮಗವಳು ನಿರಪಾಯಿ

  • ·         ನಿಮ್ಮ ಅರೆಬರೆತನವನ್ನೆಲ್ಲ ಸಹಿಸಿಕೊಂಡು ತನ್ನ ಅರ್ಧ ಜೀವನವನ್ನೇ ಧಾರೆಯೆರೆದು ಪೂರ್ಣಳಾಗಿಸುವ ಅಧಾಂರ್ಗಿ

  • ·         ನಿಮ್ಮೆಲ್ಲ ವಿಜಯಗಳ ಹಿಂದಿರವ- ಭಾರ್ಯ

  • ·         ಜೀವನದ ಸಾಥಿ ಸತಿ

  • ·         ಇವಳು ಸರಿಯಿದ್ದರೆ ಗೃಹಿಣೀ ಗೃಹಮುಚ್ಯತೆ, ಅನ್ಯಥಾ ಗೃಹ ಮುಚ್ಚುತ್ತೆ
-ವಿಶ್ವನಾಥ ಸುಂಕಸಾಳ

ಶುಕ್ರವಾರ, ಏಪ್ರಿಲ್ 22, 2016

ಅಮ್ಮನ ಬುತ್ತಿ ಬೇರಿನಲ್ಲಿ...



ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..

                                                            
ನೂತನ್ ಎಸ್ .ಬಿ

ಗುರುವಾರ, ಏಪ್ರಿಲ್ 14, 2016

ಬಸವಣ್ಣ ದೇವಾಲಯ

       ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.
ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.
ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.
ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.
ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.
* ಬಸವ ಸ್ಮಾರಕ 
 * ಬಸವಣ್ಣ ದೇವಾಲಯ 


     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಭಾನುವಾರ, ಏಪ್ರಿಲ್ 10, 2016

ನುಡಿಮುತ್ತು - 33



* ಪುಸ್ತಕಗಳ್ಳನ್ನು ಓದುವುದರ ಮೂಲಕ, ಜಗತ್ತನ್ನು ಅತ್ಯಂತ ಸುಲಭ ವೆಚ್ಚದಲ್ಲಿ ನೋಡಬಹುದು.

 * ಏಷ್ಟೇ ಅಡೆ- ತಡೆಗಳು ಎದುರಾದರು ಸೂರ್ಯ ಉದಯಿಸದೇ ಇರದು. ಅದೇ ರೀತಿ, ಜೀವನದಲ್ಲಿ ಗುರಿ ಸಾಧನೆಗೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ.ಅದಕ್ಕೆ, ಅಂಜಬಾರದು.


* ಇತರರು  ನಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೆವೆಯೋ, ಅಂಥಹವುದನ್ನು ನಾವೂ ಇತರರಿಗೆ ಮಾಡಬೇಕು.


*ಸಂಪತ್ತನ್ನು ಲಕ್ಷಸದವ್ರು ಹಲವರು ಇರಬಹುದು, ಆದರೆ ಸಂಪತ್ತನ್ನು ದಾನ ಮಾಡಬಲ್ಲ ಸಾಮಾರ್ತ್ಯಉಳ್ಳವರು  ಇರುವುದು ಕೆಲವೇ ಮಂದಿ ಮಾತ್ರ.



ಅಸೂಯೆ ಹೆಡೆ ಎತ್ತಿದಾಗ ನಮ್ಮ ಪ್ರೀತಿ ಪಾತ್ರರೂ ಕೂಡ ನಮ್ಮ ವೈರಿಗಳಗುತ್ತಾರೆ, ಆದ್ದರಿಂದ ಮತ್ಸರಕ್ಕೆ ಅವಕಾಶ ಕೊಡಕೂಡದು.



ಮಾತಾಡಿ  ಕೆಟ್ಟವರು ಅನ್ನಿಸಿ ಕೊಳ್ಳದಕಿಂತ, ಮೌನವಾಗಿದ್ದು ಅರ್ಥವಾಗದೇ ಉಳಿದುಬೀಡೋದು ಒಳ್ಳೆಯದು.



ಸುಡು ಬೇಸಿಗೆ ಇದ್ದರೂ, ಮಳೆಯ ಆಗಮನ ನೀರಿಕ್ಷಿಸುವ   ನವಿಲಿನಂತೆ,ಜೀವನದಲ್ಲಿ ತೊಂದರೆಗಳ ಬಳಿಕ ನೆಮ್ಮದಿ ದಿನಗಳು   ಬರದೇಇರವು.....



* ನಾವು ಯಾರನ್ನಾದರೂ ಸಂಪೂರ್ಣ ವಾಗಿ ನಂಬಿದರೆ ಎರಡು ಸಾದ್ಯತೆಗಳಿರುತ್ತವೆ. ಒಂದು,ಜೀವಮಾನದಲ್ಲಿ ಮರೆಯಲಾಗದಂತ ಗೆಳೆಯ ಸಿಕ್ಕಾನು, ಇಲ್ಲವೇ ಮರೆಯಲಾಗದಂತ ಪಾಠ ಕಲಸಿಯಾನು. ನಂಬುವ ಮುನ್ನ ತುಸು ಯೋಚನೆ ಮಾಡಬೇಕು.



* ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ,ಅದರಿಂದ ನಾವು ಪ್ರತಿಷ್ಠೆ ಯಾ ಮತ್ಸರ ಎರಡರಲ್ಲಿ ಯಾವುದಾದ ಒಂದರ ಭಾದೆಗೆ ಒಳಗಾಗುತೇವೆ.



*ಸಹನೆ ಇಂದ ಇರುವುದು ಕಠಿಣ; ಆದರೆ, ಅದು ನೀಡುವ ಅಂತ್ಯ ಫಲ ಶಾಂತಿ ಹಾಗು ಸಮಾದಾನ.

1.. ಜಾಹೀರಾತು

2.ಜಾಹೀರಾತು