ಭಾನುವಾರ, ಏಪ್ರಿಲ್ 10, 2016

ನುಡಿಮುತ್ತು - 33* ಪುಸ್ತಕಗಳ್ಳನ್ನು ಓದುವುದರ ಮೂಲಕ, ಜಗತ್ತನ್ನು ಅತ್ಯಂತ ಸುಲಭ ವೆಚ್ಚದಲ್ಲಿ ನೋಡಬಹುದು.

 * ಏಷ್ಟೇ ಅಡೆ- ತಡೆಗಳು ಎದುರಾದರು ಸೂರ್ಯ ಉದಯಿಸದೇ ಇರದು. ಅದೇ ರೀತಿ, ಜೀವನದಲ್ಲಿ ಗುರಿ ಸಾಧನೆಗೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ.ಅದಕ್ಕೆ, ಅಂಜಬಾರದು.


* ಇತರರು  ನಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೆವೆಯೋ, ಅಂಥಹವುದನ್ನು ನಾವೂ ಇತರರಿಗೆ ಮಾಡಬೇಕು.


*ಸಂಪತ್ತನ್ನು ಲಕ್ಷಸದವ್ರು ಹಲವರು ಇರಬಹುದು, ಆದರೆ ಸಂಪತ್ತನ್ನು ದಾನ ಮಾಡಬಲ್ಲ ಸಾಮಾರ್ತ್ಯಉಳ್ಳವರು  ಇರುವುದು ಕೆಲವೇ ಮಂದಿ ಮಾತ್ರ.ಅಸೂಯೆ ಹೆಡೆ ಎತ್ತಿದಾಗ ನಮ್ಮ ಪ್ರೀತಿ ಪಾತ್ರರೂ ಕೂಡ ನಮ್ಮ ವೈರಿಗಳಗುತ್ತಾರೆ, ಆದ್ದರಿಂದ ಮತ್ಸರಕ್ಕೆ ಅವಕಾಶ ಕೊಡಕೂಡದು.ಮಾತಾಡಿ  ಕೆಟ್ಟವರು ಅನ್ನಿಸಿ ಕೊಳ್ಳದಕಿಂತ, ಮೌನವಾಗಿದ್ದು ಅರ್ಥವಾಗದೇ ಉಳಿದುಬೀಡೋದು ಒಳ್ಳೆಯದು.ಸುಡು ಬೇಸಿಗೆ ಇದ್ದರೂ, ಮಳೆಯ ಆಗಮನ ನೀರಿಕ್ಷಿಸುವ   ನವಿಲಿನಂತೆ,ಜೀವನದಲ್ಲಿ ತೊಂದರೆಗಳ ಬಳಿಕ ನೆಮ್ಮದಿ ದಿನಗಳು   ಬರದೇಇರವು.....* ನಾವು ಯಾರನ್ನಾದರೂ ಸಂಪೂರ್ಣ ವಾಗಿ ನಂಬಿದರೆ ಎರಡು ಸಾದ್ಯತೆಗಳಿರುತ್ತವೆ. ಒಂದು,ಜೀವಮಾನದಲ್ಲಿ ಮರೆಯಲಾಗದಂತ ಗೆಳೆಯ ಸಿಕ್ಕಾನು, ಇಲ್ಲವೇ ಮರೆಯಲಾಗದಂತ ಪಾಠ ಕಲಸಿಯಾನು. ನಂಬುವ ಮುನ್ನ ತುಸು ಯೋಚನೆ ಮಾಡಬೇಕು.* ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ,ಅದರಿಂದ ನಾವು ಪ್ರತಿಷ್ಠೆ ಯಾ ಮತ್ಸರ ಎರಡರಲ್ಲಿ ಯಾವುದಾದ ಒಂದರ ಭಾದೆಗೆ ಒಳಗಾಗುತೇವೆ.*ಸಹನೆ ಇಂದ ಇರುವುದು ಕಠಿಣ; ಆದರೆ, ಅದು ನೀಡುವ ಅಂತ್ಯ ಫಲ ಶಾಂತಿ ಹಾಗು ಸಮಾದಾನ.

ಕಾಮೆಂಟ್‌ಗಳಿಲ್ಲ: