fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಮೇ 22, 2015

ಅಮ್ಮ ನೀನು ನಮಗಾಗಿ

ಚಿತ್ರ             : ಕೆರಳಿದ ಸಿಂಹ
ಹಾಡು          : ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಹಾಡಿದವರು  : ಡಾ।। ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ಸಾಹಿತ್ಯ       : ಚಿ. ಉದಯಶಂಕರ್
ಸಂಗೀತ       : ಸತ್ಯಂ


ಈ ಹಾಡನ್ನ ಇಲ್ಲಿ ನೋಡಿ: 
 https://www.youtube.com/watch?v=lwhGFiL5EXI

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ... -||ಅಮ್ಮ ನೀನು ನಮಗಾಗಿ..||-

ಬಾಡದ ತಾವರೆ ಹೂವಿನ ಹಾಗೆ... ಎಂದಿಗೂ ಆರದ ಜ್ಯೋತಿಯ ಹಾಗೆ...
ಗೋಪುರವೇರಿದ ಕಲಶದ ಹಾಗೆ... ಆ ಧೃವ ತಾರೆಯೇ ನಾಚುವ ಹಾಗೆ...
ಜೊತೆಯಲಿ ಎಂದೆಂದೂ ನೀನಿರಬೇಕು... ಬೇರೆ ಏನು ಬೇಡೆವು ನಾವು... -||ಅಮ್ಮ ನೀನು ನಮಗಾಗಿ..||-

ಸಂಜೆಯ ಗಾಳಿಯ ತಂಪಿನ ಹಾಗೆ... ಮಲ್ಲಿಗೆ ಹೂವಿನ ಕಂಪಿನ ಹಾಗೆ...
ಜೀವವ ತುಂಬುವ ಉಸಿರಿನ ಹಾಗೆ... ನಮ್ಮನು ಸೇರಿ ಎಂದಿಗೂ ಹೀಗೆ...
ನಗುತಲಿ ಒಂದಾಗಿ ನೀನಿರಬೇಕು... ನಿನ್ನ ನೆರಳಲಿ ನಾವಿರಬೇಕು... -||ಅಮ್ಮ ನೀನು ನಮಗಾಗಿ..||-

ಸಾವಿರ ನದಿಗಳು ಸೇರಿದರೇನು.. ಸಾಗರಕೆ ಸಮನಾಗುವುದೇನು...
ಶತಕೋಟಿ ದೇವರು ಹರಸಿದರೇನು... ಅಮ್ಮನ ಹರಕೆಗೆ ಸರಿಸಾಟಿಯೇ..ಎ...ನು...
ತಾಯಿಗೆ ಆನಂದ ತಂದರೆ ಸಾಕು.. ಬೇರೆ ಪೂಜೆ ಏತಕೆ ಬೇಕು... -||ಅಮ್ಮ ನೀನು ನಮಗಾಗಿ..||-
                                                                                                                         ಕೃಪೆ

1 ಕಾಮೆಂಟ್‌:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು