ಗುರುವಾರ, ಮೇ 21, 2015

ಈರುಳ್ಳಿ ಚಟ್ನಿ

 
ಪ್ರಮಾಣ: 4-5 ಜನರಿಗೆ ಬಡಿಸಬಹುದು. 
ತಯಾರಿಕೆಗೆ ತಗುಲುವ ಸಮಯ : 10 ನಿಮಿಷಗಳು 
ಅಡುಗೆಗೆ ತಗುಲುವ ಸಮಯ: 10 ನಿಮಿಷಗಳು
 
ನಿಮಗೆ ಬೇಕಾದ ಪದಾರ್ಥಗಳು 
*ಈರುಳ್ಳಿಗಳು - 3 (ಕತ್ತರಿಸಿದಂತಹುದು) 
*ಕೆಂಪು ಒಣ ಮೆಣಸಿನಕಾಯಿಗಳು- 7-8 
*ಹುರಿದ ಕಡಲೆ ಹಿಟ್ಟು - 1 ಟೇ.ಚಮಚ
 *ಹುಣಸೆ ತಿರುಳು - 1 ಟೀ.ಚಮಚ 
*ಉಪ್ಪು ರುಚಿಗೆ ತಕ್ಕಷ್ಟು 
*ಬೆಲ್ಲ - 1 ಟೀ. ಚಮಚ 
*ಎಣ್ಣೆ - 1 ಟೀ. ಚಮಚ
  ಮಾಡುವ ವಿಧಾನ 
 1. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಮೆಣಸಿನ ಕಾಯಿಗಳನ್ನು ಸ್ವಲ್ಪ ಸಮಯ ಉರಿಯಿರಿ. 
2. ನಂತರ ಅದಕ್ಕೆ ಈರುಳ್ಳಿ ಚೂರುಗಳನ್ನು ಹಾಕಿ, ಹೊಂಬಣ್ಣಕ್ಕೆ ಬರುವವರೆಗೆ ಉರಿಯಿರಿ. 
3. ಇದಕ್ಕೆ ಹುರಿದ ಕಡಲೆ ಹಿಟ್ಟು, ಉಪ್ಪು, ಹುಣಸೆ ತಿರುಳು ಮತ್ತು ಬೆಲ್ಲವನ್ನು ಹಾಕಿ. 4-5 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿಯಿರಿ. ಬೆಲ್ಲವು ಸಂಪೂರ್ಣವಾಗಿ ಕರಗಬೇಕು ಎಂಬುದನ್ನು ಗಮನದಲ್ಲಿಡಿ. ಬಾಯಿಯಲ್ಲಿ ನೀರೂರಿಸುವ ರುಚಿಯಾದ ಈರುಳ್ಳಿ ಚಟ್ನಿ 
 4. ಈಗ ಹುರಿಯನ್ನು ಆರಿಸಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ. 
5. ಈಗ ಮಿಶ್ರಣವನ್ನು ದಪ್ಪನಾದ ಪೇಸ್ಟ್‌ನಂತೆ ಕಲೆಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ. 
6. ಈಗ ಈ ಖಾರವಾದ ಚಟ್ನಿಯನ್ನು ದೋಸೆ ಅಥವಾ ಇಡ್ಲಿಗಳ ಜೊತೆಯಲ್ಲಿ ಬಡಿಸಿ. 
          ಇದು ಇಡ್ಲಿ ಮತ್ತು ದೋಸೆಗಳ ಜೊತೆಯಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಪೋಷಕಾಂಶಗಳ ಪ್ರಮಾಣ ಈರುಳ್ಳಿ ಚಟ್ನಿಯಲ್ಲಿ ಕ್ಯಾಲೊರಿಗಳ ಪ್ರಮಾಣ ಕಡಿಮೆಯಿರುತ್ತದೆ. ಈರುಳ್ಳಿಗಳಲ್ಲಿ ವಿಟಮಿನ್ ಸಿ ಪ್ರಮಾಣ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ರೋಮಿಯಂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. 
ಸಲಹೆ 
ನಿಮಗೆ ಹುಣಸೆ ತಿರುಳು ಇಷ್ಟವಾಗದಿದ್ದಲ್ಲಿ, ನಿಂಬೆ ರಸವನ್ನು ಇದಕ್ಕಾಗಿ ಬಳಸಬಹುದು.

ಕಾಮೆಂಟ್‌ಗಳಿಲ್ಲ: