fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಭಾನುವಾರ, ಮೇ 31, 2015
ಗುರುವಾರ, ಮೇ 28, 2015
ಉಪಕಾರ
ಪರರ ಉಪಕಾರಕ್ಕೆ ಉಳ್ಳವರೇ ಹಿಂದೆ ತುಳಿಯುವಾಗ.
ಬೀಸುವ
ಗಾಳಿ,
ಸುರಿಯುವ ಮಳೆ,
ಬೆಳಕು
ಮೂಡಿಸುವ ಸೂರ್ಯ
ಇವರ್ಯಾಕೆ ಉಪಕಾರ ಮಾಡಬೇಕು ?
ಬುಧವಾರ, ಮೇ 27, 2015
ಮಂಗಳವಾರ, ಮೇ 26, 2015
ಅನುಗಲೇಶ್ವರ + ಅಪ್ಪಿದೇವಯ್ಯ
ಅಂಕಿತ ನಾಮ: ಅನುಗಲೇಶ್ವರ
ಕಾಲ:
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ:
ಅಪ್ಪಿದೇವಯ್ಯ
ಅಂಕಿತ ನಾಮ:
ಈಶ್ವರೀಯ ವರದ ಮಹಾಲಿಂಗ
ಕಾಲ: 1650
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ: 1650. ಈತನ 1 ವಚನ ದೊರೆತಿದೆ. ಗುರು, ಲಿಂಗ, ಜಂಗಮ, ಪಾದೋದಕ ಎಂಬ ಪರಿಕಲ್ಪನೆಗಳ ವಿಮರ್ಶೆ ಇದೆ.
ಕಾಲ: 1650
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ: 1650. ಈತನ 1 ವಚನ ದೊರೆತಿದೆ. ಗುರು, ಲಿಂಗ, ಜಂಗಮ, ಪಾದೋದಕ ಎಂಬ ಪರಿಕಲ್ಪನೆಗಳ ವಿಮರ್ಶೆ ಇದೆ.
ಎಲೆ ದೇವಾ ಏತಕ್ಕೆ ನುಡಿಯೆ? ಎನ್ನೊಳು ಮುನಿಸೆ?
ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ
ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲದೆ?
ನೀ ಮಾಡುವ ಮಾಟ ಅನೇಕ ಕುಟಿಲ.
ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ.
ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ.
ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೆ?
ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು.
ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು.
ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ,
ಎನ್ನ ಪ್ರಕೃತಿಯ ಪರಿಹರಿಸಯ್ಯಾ.
ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ
ಎನಗೆ ನಿನಗೆಂಬುದ ನೀನರಿಯಾ?
ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ.
ಎಲೆ ಸ್ವಾಮಿ, ಆನು ಮಾಡಿದುದೇನು ನಿನಗೆ?
ಮಾರನ ಕೊಂದ ಮಲತ್ರಯದೂರನೆ,
ಅನಾಗತಸಂಸಿದ್ಧ ಭೋಗಮಯನೆ,
ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ,
ಸರ್ವಾಂತರ್ಗತ ವಿಮಲಾಂತರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ,
ಭಕ್ತ ಚಿತ್ತದ ಸಾಕಾರದ ಪುಂಜನೆ,
ಭಕ್ತವತ್ಸಲನೆ, ಭಕ್ತದೇಹಿಕದೇವನೆ,
ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ.
ಶಂಭು ಮಾರೇಶ್ವರಾ.

ಸೋಮವಾರ, ಮೇ 25, 2015
ಭಾನುವಾರ, ಮೇ 24, 2015
ಶನಿವಾರ, ಮೇ 23, 2015
ವರಕವಿ ದ.ರಾ.ಬೇಂದ್ರೆ
Ø ಸಾಹಿತ್ಯ
o ವಿಮರ್ಶೆ
ಜನನ
|
೧೮೯೬
ಜನವರಿ ೩೧ ಧಾರವಾಡ
|
ಮರಣ
|
೧೯೮೧
ಅಕ್ಟೋಬರ ೨೬ ಮುಂಬಯಿ
|
ಕಾವ್ಯನಾಮ
|
ಅಂಬಿಕಾತನಯದತ್ತ
|
ವೃತ್ತಿ
|
ವರಕವಿ, ಶಿಕ್ಷಕರು
|
ರಾಷ್ಟ್ರೀಯತೆ
|
ಭಾರತೀಯ
|
ಕಾಲ
|
(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
|
ಪ್ರಕಾರ/ಶೈಲಿ
|
ಕಥೆ,
ಕವನ,
ವಿಮರ್ಶೆ, ಅನುವಾದ
|
ವಿಷಯ
|
ಕರ್ನಾಟಕ, ಜನಪದ,
ಶ್ರಾವಣ, ಜೀವನ,
ಧಾರವಾಡ
|
ಜೀವನ
ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು.
ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ.
ಬೇಂದ್ರೆ ಮನೆತನದ ಮೂಲ ಹೆಸರು
ಠೋಸರ. ವೈದಿಕ ವೃತ್ತಿಯ ಕುಟುಂಬ.
ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ
ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ
ಬಂದು ನೆಲೆಸಿದರು. ದ.ರಾ.ಬೇಂದ್ರೆ
ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು.
೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ
ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು.
ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು
ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ
ಡಿ.ಎ.ವಿ ಕಾಲೇಜಿನಲ್ಲಿ
ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ
ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ
ಸಂಕಲನ "ಕೃಷ್ಣ ಕುಮಾರಿ"-ಯು
ಆಗಲೇ ಪ್ರಕಟಿಸಲ್ಪಟ್ಟಿತ್ತು.
- ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
- ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.
ಸಾಹಿತ್ಯ
ಬೇಂದ್ರೆ ಸ್ಮಾರಕ, ಧಾರವಾಡ
ಸಾಹಿತ್ಯ
ರಚನೆ ಅವರ ಮೊದಲ ಒಲವು.
ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ
"ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.
ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ
ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ
", "ಸೂರ್ಯಪಾನ",
"ನಾದಲೀಲೆ",
"ನಾಕುತಂತಿ"
ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ
ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು,
ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ
ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ
"ಗೆಳೆಯರ ಗುಂಪು"
ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ
ಇಂಬು ನೀಡಿತು.
- ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
- ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
- ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
- ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
- ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.
ಕವನ ಸಂಕಲನ
(ಪ್ರಥಮ
ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬
ಸಂಪುಟಗಳು
- ೧೯೨೨: ಕೃಷ್ಣಾಕುಮಾರಿ;
- ೧೯೩೨: ಗರಿ;
- ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
- ೧೯೩೭: ಸಖೀಗೀತ;
- ೧೯೩೮: ಉಯ್ಯಾಲೆ;
- ೧೯೩೮: ನಾದಲೀಲೆ;
- ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ
- ೧೯೪೬: ಹಾಡುಪಾಡು;
- ೧೯೫೧: ಗಂಗಾವತರಣ;
- ೧೯೫೬: ಸೂರ್ಯಪಾನ;
- ೧೯೫೬: ಹೃದಯಸಮುದ್ರ;
- ೧೯೫೬: ಮುಕ್ತಕಂಠ;
- ೧೯೫೭: ಚೈತ್ಯಾಲಯ;
- ೧೯೫೭: ಜೀವಲಹರಿ;
- ೧೯೫೭: ಅರಳು ಮರಳು;
- ೧೯೫೮: ನಮನ;
- ೧೯೫೯: ಸಂಚಯ;
- ೧೯೬೦: ಉತ್ತರಾಯಣ;
- ೧೯೬೧: ಮುಗಿಲಮಲ್ಲಿಗೆ;
- ೧೯೬೨: ಯಕ್ಷ ಯಕ್ಷಿ;
- ೧೯೬೬: ಮರ್ಯಾದೆ;
- ೧೯೬೮: ಶ್ರೀಮಾತಾ;
- ೧೯೬೯: ಬಾ ಹತ್ತರ;
- ೧೯೭೦: ಇದು ನಭೋವಾಣಿ;
- ೧೯೭೨: ವಿನಯ;
- ೧೯೭೩: ಮತ್ತೆ ಶ್ರಾವಣಾ ಬಂತು;
- ೧೯೭೭: ಒಲವೇ ನಮ್ಮ ಬದುಕು;
- ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
- ೧೯೮೨: ಪರಾಕಿ;
- ೧೯೮೨: ಕಾವ್ಯವೈಖರಿ;
- ೧೯೮೩: ತಾ ಲೆಕ್ಕಣಕಿ ತಾ ದೌತಿ;
- ೧೯೮೩: ಬಾಲಬೋಧೆ;
- ೧೯೮೬: ಚೈತನ್ಯದ ಪೂಜೆ;
- ೧೯೮೭: ಪ್ರತಿಬಿಂಬಗಳು;
ಬೇಂದ್ರೆಯವರ
ಒಂದು ಅಮರಪ್ರೇಮಗೀತೆ
ಡಾ.ಪಿ.ಬಿ.ಶ್ರೀನಿವಾಸ್:
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಸುಶೀಲಾ:
ಸೂರ್ಯನ ಬಿoಬಕೆ ಚಂದ್ರನ ಬಿಂಬಾವೂ ರಮ್ಮಿಸಿ ನಗೆಯಲಿ ಮೀಸುತಿದೆ
ಡಾ.ಪಿ.ಬಿ.ಶ್ರೀನಿವಾಸ್:
ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಪಿ.ಸುಶೀಲಾ:
ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಡಾ.ಪಿ.ಬಿ.ಶ್ರೀನಿವಾಸ್:
ತುoಬುತ ತುಳುಕುತ ತೀ ಡುತ ತನ್ನೊಳು ತಾನೇ ಸವಿಯನು ಸವಿಯುತಿದೆ
ಇಬ್ಬರೂ :
ತಾನೇ ಸವಿಯನು ಸವಿಯುತಿದೆ
ಪಿ.ಸುಶೀಲಾ:
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಸುಶೀಲಾ:
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಡಾ.ಪಿ.ಬಿ.ಶ್ರೀನಿವಾಸ್:
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಪಿ.ಸುಶೀಲಾ:
ಮಿತ್ರನ ಮೈತ್ರಿಯ ಹೊಸಗೆಮ ಕೆದರಿದೆ ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ :
ಮರುಕದ ಧಾರೆಯ ಮಸೆಯಿಸಿತು
ಡಾ.ಪಿ.ಬಿ.ಶ್ರೀನಿವಾಸ್:
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಡಾ.ಪಿ.ಬಿ.ಶ್ರೀನಿವಾಸ್:
ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಪಿ.ಸುಶೀಲಾ:
ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಡಾ.ಪಿ.ಬಿ.ಶ್ರೀನಿವಾಸ್:
ಬಿದಿಗೆಯ ತುಂಬಾ ಧರದಲಿ ಇಂದಿಗೂ ಮಿಲನದ ಚಿಹ್ನವು ತೋರದಿದೆ
ಇಬ್ಬರೂ :
ಮಿಲನದ ಚಿಹ್ನವು ತೋರದಿದೆ

ವಿಮರ್ಶೆ
೧೯೪೦: ಸಾಹಿತ್ಯಸಂಶೋಧನೆ;
ಸಾಯೋ
ಆಟ (ನಾಟಕ)
೧೯೬೨: ಕಾವ್ಯೋದ್ಯೋಗ;
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
ಸಾಧನಕೇರಿಯ ಅನರ್ಘ್ಯ
ರತ್ನ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...