ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ನವೆಂಬರ್ 09, 2017

ರಾಮಯಾಣದ ಸ್ವಾರಸ್ಯ ಸಂಗತಿಗಳು 1

ರಾವಣನ ಸಾವಿಗೆ ಪಾರ್ವತಿ ಕಾರಣ
       ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.                ಕೃಪೆ : ಕೆ.ಟಿ.ಆರ್

ಶುಕ್ರವಾರ, ನವೆಂಬರ್ 03, 2017

ವಾಟ್ಸ್ಯಾಪ್ (whatsapp) ಸಂದೇಶಗಳು


ಕುಂಬಾರನು ಮಾಡಿದ ಹಣತೆಗೆ,
..
ಗಾಣಿಗ ತಯಾರಿಸಿದ ಎಣ್ಣೆ ಹಾಕಿ,
..
ರೈತ ಬೆಳೆದ ಹತ್ತಿಯ ಬತ್ತಿಗೆ ಜ್ಯೋತಿ ಮುಟ್ಟಿಸಲು,
..
ಕುಲವಿಲ್ಲದ ಬೆಳಕು ನೋಡಾ
....
.... 
ನಮ್ಮ ಬಾಳಿನಲ್ಲಿ ಜ್ಞಾನದ ಜ್ಯೋತಿಯನ್ನು
..
ಈ ದೀಪಾವಳಿ ಹೊತ್ತಿಸಲಿ ಎಂದು ಹಾರೈಸುತ್ತೇನೆ...
*******************************************
ತಾಳ್ಮೆಗೂ ಒಂದು ಕೊನೆ ಇರುತ್ತೆ ಒಬ್ಬ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾ ಇದ್ದರೂ
..
ಆ ವ್ಯಕ್ತಿ ನಮ್ಮನ್ನು ಕ್ಷಮಿಸುತ್ತಾ ಇರುತ್ತಾನೆ ಎಂದು ಮತ್ತೆ ಮತ್ತೆ ನೋವು ಕೊಡ್ತಾ ಇರೋದು
..
ಶತ ಮೂರ್ಖರ ಲಕ್ಷಣ..
..
ಕ್ಷಮಿಸುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ
..
Www.spn3187.blogspot.in
..
ಹಿಂಸಿಸುವ ವ್ಯಕ್ತಿ ಕ್ಷಣ ಕ್ಷಣವು ಪಾಪದ ಕೊಡ ತುಂಬಿಸುತ್ತಾ ಸಾಗುತ್ತಾನೆ...
*******************************************
ಚಿರತೆ ವೇಗಕ್ಕೂ,
*
ಹುಲಿಯ ನೋಟಕ್ಕೂ
*
ಹೆದರದವ ಕೆಲವೊಮ್ಮೆ
*
ಬೆಕ್ಕಿನ ಅಡ್ಡಲಾಗುವಿಕೆಗೆ ಹೆದರುತ್ತಾನೆ
*
ನೀ ನಂಬಿದಂತೆ ಜೀವನ ಅಷ್ಟೇ
*******************************************
ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿಯನ್ನು ಕಂಡುಕೊಳ್ಳಬಹುದು
ಆದರೆ...
ಬಾಯಿ ತಪ್ಪಿದರೆ ಆಡಿದ ಮಾತು ಯಾವತ್ತೂ ಹಿಂತಿರುಗಿ ಬರುವುದಿಲ್ಲ.
*******************************************
ನಾಳೆಗಳ ನಂಬಿ ನಡೆಯುವವನಿಗೆ
ನಿನ್ನೆಗಳ ಚಿಂತೆ ಇರೋದಿಲ್ಲ..
.
ನಿನ್ನೆಗಳ ಚಿಂತೆಯಲ್ಲಿರುವವನಿಗೆ
ನಾಳೆಗಳ ಅವಕಾಸವೇ ಇರುವದಿಲ್ಲ..
..
Www.spn3187.blogspot.in
..
ಆಗುವುದೆಲ್ಲ ಒಳ್ಳೆಯಕ್ಕೆ
..
ಮನ ಮಾತಾದಾಗ
***************************************

ಬುಧವಾರ, ನವೆಂಬರ್ 01, 2017

ದಕ್ಷಿಣ ಭಾರತದ ನದಿಗಳು

  • ಮಹಾ ನದಿ
ಉಗಮ:ಚತ್ತೀಸಗಢ್ ರಾಜ್ಯದ ಜಗದಲ್ಪುರ ಜಿಲ್ಲೆಯ ಸಿವಾಹ. ಉಪನದಿಗಳು: ಟೆಲ್,ಹಾಸ್ಪೊ,ಶಿಯೋನಾಥ್. ಮಹಾನದಿಯನ್ನು ಒರಿಸ್ಸಾದ ಕಣ್ಣೀರು ಎಂದು ಕರೆಯುವರು. ಒರಿಸ್ಸಾದ ಸಾಂಬಲಾಪುರದ ಬಳಿ ಮಹಾನದಿಗೆ ಅಣೆಕಟ್ಟು ಕಟ್ಟಲಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಕಾವೇರಿ ನದಿ
ಉಗಮ: ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ತಲಕಾವೇರಿ. ಉಪನದಿಗಳು: ಹೇಮಾವತಿ,ಅಕಾ೯ವತಿ, ಕಬಿನಿ,ಸುವಣಾ೯ವತಿ,ಶಿಂಷಾ. ಜಲಪಾತಗಳು: ಶಿವನ ಸಮುದ್ರ, ಹೊಗೇನಕಲ್ ಜಲಪಾತ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಕೃಷ್ಣಾ ನದಿ
ಉಗಮ: ಮಹಾರಾಷ್ಟ್ರದ ಮಹಾಬಲೇಶ್ವರ ಉಪನದಿಗಳು: ಮಲಪ್ರಭಾ, ಘಟಪ್ರಭಾ, ಭೀಮಾ, ತುಂಗಭದ್ರಾ, ಮುಸಿ,ಕೊಯ್ನಾ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ನಮ೯ದಾ ನದಿ
ಉಗಮ: ಚತ್ತೀಸಗಢದ ಅಮರಕಂಟಕ. ಉಪ ನದಿಗಳು: ಬರ್ನರ್, ಶಕ್ಕರ್, ಹಿರಾನ್, ತಾವಾ. ಜಲಪಾತಗಳು: ದಧಿ೯, ದುವಂಧರ್, ಕಪಿಲ‍ಧಾರಾ ಇದು ಅರಬ್ಬೀ ಸಮುದ್ರವನ್ನು ಸೇರುತ್ತದೆ.

1.. ಜಾಹೀರಾತು

2.ಜಾಹೀರಾತು