ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಜೂನ್ 20, 2018

ಮಿನುಗು ಮಿನುಗು ಸಣ್ಣ ತಾರೆ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ
ಮೇಲೆ ಮೇಲು ಪ್ರಪಂಚ ತುಂಬಾ ಎತ್ತರದಲಿ
ವಜ್ರದ ಹೊಳಪು ಕಾಣುತಿದೆ ಆಕಾಶದಲಿ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಸೂರ್ಯ ಹೋದ ನಂತರ ಬೆಳಗುವನು
ಅಲ್ಲಿ ಏನೂ ಇಲ್ಲದಾಗ ಅವನು ಹೊಳೆಯುವನು
ಅದರ ನಂತರ ತೋರಿಸುವೆ ನಿನ್ನ ಸಣ್ಣ ಬೆಳಕು ನೀನು
ಮಿನುಗು ಮಿನುಗು ಎಲ್ಲ ರಾತ್ರಿ ನೀನು
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ತುಂಬಾ ಆಳವಾದ ದಟ್ಟ ನೀಲಿ ಆಕಾಶದಲಿ
ನನ್ನ ಪರದೆ ಮೂಲಕ ಆಗಾಗ್ಗೆ ಇಣುಕಿ ನೋಡುವೆ
ನೀನು ಕಣ್ಣು ಮುಚ್ಚುವುದಿಲ್ಲ ಎಂದಿಗೂ
ಬೆಳಗ್ಗೆ ಸೂರ್ಯ ಹುಟ್ಟುವವರೆಗೂ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಅನುವಾದ : by ಹರೀಶ್ ಶೆಟ್ಟಿ, ಶಿರ್ವ (Twinkle, twinkle)

ಶನಿವಾರ, ಜೂನ್ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 8

ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ


     ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.             ಕೃಪೆ : ಕೆ.ಟಿ.ಆರ್

ಭಾನುವಾರ, ಜೂನ್ 03, 2018

ನಮ್ಮೂರು - ನಮ್ಮೋರು

ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು...

.. ..

ಯಾರು ಸ್ನೇಹದಿ ಬರುವರೋ
ಅವರೆ ನಮ್ಮೋರು...
                                            ==> ಶಂಕರನಾಗ್

ಕಲೆ / ಕೊಲೆ

ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ ||ವಾ..ವಾ..||
ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ ||ವಾ..ವಾ..||
..
ಅದೇ ಕಲ್ಲಿನಿಂದ ಶಿಲ್ಪಿಯನ್ನು ಕೆತ್ತಿದರೆ, ಅದು ಕೊಲೆ

1.. ಜಾಹೀರಾತು

2.ಜಾಹೀರಾತು