ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಏಪ್ರಿಲ್ 03, 2018

ಆಳ ನೋಡು / ಚಿತ್ರ ನೋಡು (ಕನ್ನಡದ ಮತ್ತೊಂದು ಶಾಯರಿ)

ಪ್ರೀತಿಸುವ ಮೊದಲು ಪ್ರೀತಿಯ ಆಳ ನೋಡು ||ವ್ಹಾ ವ್ಹಾ||

ಪ್ರೀತಿಸುವ ಮೊದಲು ಪ್ರೀತಿಯ ಆಳ ನೋಡು ||ವ್ಹಾ ವ್ಹಾ||
..
ನಂಬಿಕೆ ಬರದಿದ್ರೆ, ಮುಂಗಾರು ಮಳೆ ಚಿತ್ರ ನೋಡು..

ಸ್ನೇಹ

''ಕನಸನ್ನ ಕದೇಯೋಕಾಗಲ್ಲ "
..
''ನೆನಪನ್ನ ಬಚ್ಚಿಡೋಕೆ ಆಗಲ್ಲ ''
..
''ಹೇಳಿ ಕೇಳಿ ಸ್ನೇಹ ಹುಟ್ಟೋಲ್ಲ '
..
"ನಂಬಿಕೆ ಅನ್ನೋ ಆಯಸ್ಸು ಮುಗಿಯೋವರೆಗೂ ಸ್ನೇಹಕ್ಕೆ ಸಾವಿಲ್ಲ .

ಶನಿವಾರ, ಮಾರ್ಚ್ 31, 2018

ಕನ್ನಡವೇ ಎಮ್ಮಯ ಸೊಲ್ ನುಡಿಯು

ಕನ್ನಡ ಕನ್ನಡ ಪೇಳುವೆನು
ಕನ್ನಡವೇ ಎನ್ನಯ ಸೊಲ್ ನುಡಿಯು
ಕನ್ನಡವೇ ಎಮ್ಮಯ ಪಡೆನುಡಿಯು

ಕನ್ನಡ ಕನ್ನಡವೆಂದೊಡೆ
ಪುರಜನ ಹಿಗ್ಗುವರು
ಕನ್ನಡಮ್ಮನ ಸೇವೆಗಯ್ವೊಲ್
ಶಿರಬಾಗಿ ನಡೆವರು

ನೊಸಲಲಿ ತೀಡಿದ ಬರಹವು ಕನ್ನಡ
ಜಿಹ್ವೆಯು ನುಲಿಯುವ ಸಿರಿಗನ್ನಡ
ನಯನದ ಕಾಂತಿಯು ಕನ್ನಡ
ಕರಣದ ಇಂಪದು ಸವಿಗನ್ನಡ

ಜ್ನಾನದೀವಿಗೆ ಕನ್ನಡ
ಕರುನಾಡ ಜ್ಯೋತಿಯು ಕನ್ನಡ
ಸಾತ್ವಿಕ ಜಗದೊಳು
ತನುಮನವೂ ಕನ್ನಡ

ಇತಿಹಾಸ ಶಾಸನದಿ
ಹಲ್ಮಿಡಿಯ ವೈಬವ
ಕಾವೇರಿಯಿಂದಲಿ ಗೋದಾವರಿಯೆಡೆಗೆ
ಪಸರಿಸಿದ್ದ ಕನ್ನಡ
ಹಂಪಿಯ ರತದಲಿ ಮೆರೆದ ಕನ್ನಡ
ಬೇಲೂರ ಶಿಲ್ಪದಿ ತೀಡಿದ ಕನ್ನಡ

ರತ್ನಾತ್ರಯರಲಿ ನಲಿದಾಡಿದ ಕನ್ನಡ
ಕುಮಾರವ್ಯಾಸನು ಕುಣಿದಾಡಿಸಿದ ಕನ್ನಡ
ರಾಜವಂಶದಿ ಪೌರುಶವ ಹುಟ್ಟಿಸಿದ ಕನ್ನಡ
ಶತ್ರುಗಳ ರುಂಡವ ಅಟ್ಟಾಡಿಸಿದ ಕನ್ನಡ

ಕನ್ನಡವೇ ಎಮ್ಮಯ ಸೊಲ್ ನುಡಿಯು
ಕನ್ನಡ ಎಂಬುದೆ ಎಮ್ಮಯ ದಿವ್ಯಮಂತ್ರವು 

ಇಂದ : ಕೌಸಲ್ಯ

1.. ಜಾಹೀರಾತು

2.ಜಾಹೀರಾತು