ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ನವೆಂಬರ್ 03, 2015

ಪರೀಕ್ಷೆಯ ಸಂದರ್ಭದಲ್ಲಿ ಪಾಲಕರ ಪಾತ್ರ

ತಮ್ಮ ಮಕ್ಕಳಲ್ಲಿರುವ ದೋಷಗಳನ್ನು ನಾಶಗೊಳಿಸಿ ಸದ್ಗುಣಗಳನ್ನು ತರಲು ಸಹಾಯ ಮಾಡುವರೇ ನಿಜವಾದ ಪಾಲಕರಾಗಿದ್ದಾರೆ. ಪಾಲಕರು ಅಂತರ್ಮುಖರಾಗಿ 'ನಾವು ಮಕ್ಕಳಿಗೆ ನಿಜವಾದ ಶಿಕ್ಷಣವನ್ನು ನೀಡುತ್ತಿದ್ದೇವೆಯೇ?' ಎಂಬುದನ್ನು ಆಲೋಚಿಸಬೇಕು. ತಮ್ಮ ಮಕ್ಕಳನ್ನು ಜೀವನದಲ್ಲಿ ಸದ್ಗುಣಿಯನ್ನಾಗಿ ಮಾಡುವುದು ಪಾಲಕರ ಧರ್ಮವಾಗಿದೆ. ನಾವು ಭೂತಕಾಲದ ವಿಚಾರದಲ್ಲಿ ಮಗ್ನರಾಗಿರುವುದರಿಂದ ನಮ್ಮ ಹಾಗೂ ಮಕ್ಕಳೊಂದಿಗೆ ಉತ್ತಮ ಸಂವಾದ ಆಗಲು ಸಾಧ್ಯವಾಗುವುದಿಲ್ಲ. ‘ನಿನಗೆ ಏನೂ ಬರುವುದಿಲ್ಲ, ನೀನು ಯಾವುದಕ್ಕೂ ಉಪಯೋಗವಿಲ್ಲ’ ಎಂಬ ನಕಾರಾತ್ಮಕ ಮಾತುಗಳಿಂದ ಮಕ್ಕಳ ಮನಸ್ಸಿನ ಮೇಲೆ ಗಾಯವಾಗುತ್ತದೆ. ಒಂದು ವೇಳೆ ದೇಹದ ಮೇಲೆ ಮಾಡಿದ ಗಾಯವು ಗುಣವಾದರೂ ಮನಸ್ಸಿನ ಗಾಯವನ್ನು ಗುಣಪಡಿಸಲು ನಮ್ಮಿಂದ ಸಾಧ್ಯವಿಲ್ಲ. ಆದುದರಿಂದ ಮಾತನಾಡುವಾಗ ಸಕಾರಾತ್ಮಕವಾಗಿ ಮಾತನಾಡಬೇಕು.

ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಅತೀವ ಭಯ, ಆತಂಕಗಳು ಮನೆಮಾಡುವುದು ಸಹಜಇಂತಹ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ನೀನು ಹೆಚ್ಚು ಅಂಕಗಳಿಸಬೇಕು/gÁåAPï ಪಡೆಯಲೇಬೇಕೆನ್ನುವ ವಿನಾಕಾರಣ ಒತ್ತಡವನ್ನ ಹಾಕುವ ಬದಲಿಗೆ ಮಕ್ಕಳಿಗೆ ಆತ್ಮವಿಶ್ವಾಸ, ಧೈರ್ಯತುಂಬಿ, ಅವರನ್ನು ಪ್ರೋತ್ಸಾಹಿಸುವುದು ಅತ್ಯಾಗತ್ಯವಾಗಿದೆ. ಅವರೊಂದಿಗೆ ಸ್ವಲ್ಪ ಕಾಲವನ್ನು ವ್ಯಯಿಸಿ ಸುಲಭವಾಗಿ ಅರ್ಥವಾಗುವಂತೆ ವಿಷಯಗಳನ್ನು ತಿಳಿಸಬೇಕು. ಕಷ್ಟವಾದ ಪಠ್ಯಗಳು ವಿಷಯಗಳನ್ನು ಹೇಗೆ ಗ್ರಹಿಸಬೇಕೆನ್ನುವುದನ್ನು ತಿಳಿಸಲು ತಜ್ಞರು ವಿದ್ವಾಂಸರು ಪರಿಣಿತರೊಂದಿಗೆ ಮಕ್ಕಳನ್ನು ಭೇಟಿಮಾಡಿಸಿ, ಅವರ ಸಂದೇಶಗಳನ್ನು ನಿವಾರಿಸಬೇಕು. ಮೂಲಕ ಮಕ್ಕಳ ಗೆಲ್ಲುವಿನಲ್ಲಿ ತಾವು ಸಹ ಭಾಗಿಯಾಗಬೇಕಾಗಿರುವುದು ಇಂದಿನ ಅಗತ್ಯ.
                                                                                                            -ಕೆ.ಟಿ.ಆರ್.

ಸೋಮವಾರ, ನವೆಂಬರ್ 02, 2015

ಅಕ್ಟೋಬರ್ ಪ್ರಶ್ನೆ 12

೧.    ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು?
೨.    ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು?
೩.    ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು?
೪.    ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ?
೫.    ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು?
೬.    ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
೭.    ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?
೮.    ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ?
೯.    ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು?
೧೦.    ದಿ ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನು ಬರೆದವರು ಯಾರು?
೧೧.    ಜಗತ್ತಿನ ಪ್ರಥಮ ರೈಲು ಆಸ್ಪತ್ರೆ – ಲೈಫ್ ಲೈನ್ ಏಕ್ಸ್‌ಪ್ರೆಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
೧೨.    ಒಲಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣದಲ್ಲಿರುತ್ತವೆ?
೧೩.    ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು?
೧೪.    ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
೧೫.    ಸಿಖ್ ಮತವನ್ನು ಸ್ಥಾಪಿಸಿದವರು ಯಾರು?
೧೬.    ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು?
೧೭.    ಚಿರಾಪುಂಜಿ ಯಾವ ರಾಜ್ಯದಲ್ಲಿದೆ?
೧೮.    ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು?
೧೯.    ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
೨೦.    ಗೂಡು ಕಟ್ಟು ಒಂದೇ ಒಂದು ಜಾತಿಯ ಹಾವು ಯಾವುದು?
೨೧.    ಇಂಡಿಯನ್ ಏರ್‌ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು?
೨೨.    ಚದುರಂಗ ಆಟ ಉಗಮವಾದ ದೇಶ ಯಾವುದು?
೨೩.    ಪಿನ್‌ಕೋಡ್‌ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ?
೨೪.    ಗುಜರಾತಿನ ಸಾಂಪ್ರಾದಾಯಿಕ ನೃತ್ಯ ಯಾವುದು?
೨೫.    ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ?
೨೬.    ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು?
೨೭.    ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ?
೨೮.    ಗಂಗಾನದಿಯ ಉಗಮ ಯಾವುದು?
೨೯.    ಬೇಗಮ್ ಅಖ್ತರ್ ಯಾವುದಕ್ಕೆ ಪ್ರಸಿದ್ಧರು?




ಉತ್ತರಗಳು
ಕೃಪೆ :   ಮಹಾಂತೇಶ್ ಯರಗಟ್ಟಿ

ಭಾನುವಾರ, ನವೆಂಬರ್ 01, 2015

ಅಮೆಜಾನ್ ನದಿ

ಅಮೆಜಾನ್ ನದಿ ( ಪೋರ್ಚುಗೀಸ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ರಿಯೊ ಅಮೆಝೊನಾಸ್) ದಕ್ಷಿಣ ಅಮೆರಿಕದ ಪ್ರಮುಖ ನದಿ. ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಜಲರಾಶಿಯನ್ನು ಹೊಂದಿದೆ. ಅಲ್ಲದೆ ಒಂದು ವಾದದ ಪ್ರಕಾರ ಅಮೆಜಾನ್ ನದಿಯು ಪ್ರಪಂಚದ ಅತಿ ಉದ್ದವಾದ ನದಿ ಕೂಡ. ಆಫ್ರಿಕಾದ ನೈಲ್ ನದಿಮತ್ತು ಅಮೆಜಾನ್ ನದಿಗಳ ನಡುವೆ ಈ ಸ್ಥಾನಕ್ಕಾಗಿ ನಡೆದಿರುವ ಪೈಪೋಟಿ ಶಾಶ್ವತವಾಗಿ ಇತ್ಯರ್ಥವಾಗಿಲ್ಲ. ಅಮೆಜಾನ್ ನದಿಯು ಈ ಭೂಮಿಯ ಮೇಲಿರುವ ಒಟ್ಟೂ ಸಿಹಿನೀರಿನಲ್ಲಿ ೨೦% ರಷ್ಟನ್ನು ಹೊಂದಿದೆ. ಈ ಒಂದು ಮಹಾನದಿಯಲ್ಲಿ ಪ್ರವಹಿಸುವ ನೀರಿನ ಪ್ರಮಾಣವು ನಂತರದ ೮ ಮಹಾನದಿಗಳ ಒಟ್ಟು ನೀರಿನ ಪ್ರಮಾಣಕ್ಕಿಂತ ಅಧಿಕವೆಂದಾದಾಗ ಇದರ ಅಗಾಧತೆಯ ಅರಿವಾಗುವುದು. ಅಮೆಜಾನ್ ನದಿಯು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಲಾನಯನ ಪ್ರದೇಶವನ್ನುಹೊಂದಿದೆ. ಕೆಲವೊಮ್ಮೆ ಈ ನದಿಗೆ "ಸಿಹಿ ಸಮುದ್ರ" ಎಂಬ ಹೆಸರನ್ನು ಸಹ ಬಳಸುವರು.

ಜಲಾನಯನ ಪ್ರದೇಶ

ಅಮೆಜಾನ್ ನದಿಯ ಜಲಾನಯನ ಪ್ರದೇಶವು ಸುಮಾರು ೬,೯೧೫,೦೦೦ ಚ.ಕಿ.ಮೀ. ವಿಸ್ತಾರವಾಗಿದೆ. ಇದು ದಕ್ಷಿಣ ಅಮೆರಿಕ ಖಂಡದ ೪೦%ರಷ್ಟು ಭೂಭಾಗ. ಅಮೆಜಾನ್ ನದಿಯ ಅತಿ ದೂರದ ಉಗಮಸ್ಥಾನ ಶಾಂತಸಾಗರದ ಸಮೀಪವೇ ಇರುವ ಆಂಡೆಸ್ ಪರ್ವತಶ್ರೇಣಿ. ಇಲ್ಲಿಂದ ಮುಂದೆ ಅಮೆಜಾನ್ ನದಿಯುಅಟ್ಲಾಂಟಿಕ್ ಸಾಗರದವರೆಗೆ ಪ್ರವಹಿಸುತ್ತದೆ.
ಅಮೆಜಾನ್ ನದಿಯು ಒಣಬೇಸಗೆ ಕಾಲದಲ್ಲಿ ಸುಮಾರು ೧,೧೦,೦೦ ಚ.ಕಿ.ಮೀ.ಯಷ್ಟು ಭೂಪ್ರದೇಶವನ್ನು ಆವರಿಸಿಕೊಂಡರೆ ಮಳೆಗಾಲದಲ್ಲಿ ಪ್ರವಾಹವುಂಟಾದಾಗ ಇದರ ಮೂರರಷ್ಟು ಅಂದರೆ ಸುಮಾರು ೩,೫೦,೦೦ ಚ.ಕಿ.ಮೀ. ಪ್ರದೇಶವನ್ನು ಆವರಿಸುವುದು. ಬೇಸಗೆಯಲ್ಲಿ ನದಿಯ ಅತ್ಯಂತ ಹೆಚ್ಚಿನ ಅಗಲ ೧೧ ಕಿ.ಮೀ. ಗಳಾದರೆ ಮಳೆಗಾಲದಲ್ಲಿ ಈ ಮಹಾನದಿಯು ೪೫ ಕಿ.ಮೀ.ನಷ್ಟು ಅಗಲವಾಗಿ ಹರಿಯುವುದು.
ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರಕ್ಕೆ ಸಾಗಿಸುವ ಸಿಹಿನೀರಿನ ಪ್ರಮಾಣ ಊಹಾತೀತ. ಮಳೆಗಾಲದಲ್ಲಿ ಈ ನದಿಯು ಪ್ರತಿ ಸೆಕೆಂಡಿಗೆ ೩,೦೦,೦೦೦ ಘನ ಮೀಟರುಗಳಷ್ಟು ಸಿಹಿನೀರನ್ನು ಸಾಗರಕ್ಕೆ ಸೇರಿಸುವುದು. ಸಾಗರದ ಮುಖದಲ್ಲಿ ಈ ನದಿಯ ನೀರಿನ ರಭಸ ಹಾಗೂ ಒತ್ತಡ ಎಷ್ಟಿದೆಯೆಂದರೆ ಸಾಗರತೀರದಿಂದ ಹಲವಾರು ಕಿ.ಮೀ. ಗಳ ದೂರದವರೆಗೂ ಸಾಗರದ ನೀರು ಸಿಹಿಯಾಗಿಯೇ ಇರುತ್ತದೆ. ಮಳೆಗಾಲದಲ್ಲಿ ಅಮೆಜಾನ್ ನದಿಯು ಸಾಗರದ ಉಪ್ಪುನೀರನ್ನೇ ಸುಮಾರು ೧೦೦ ಕಿ.ಮೀ.ಗಳಷ್ಟು ಹಿಮ್ಮೆಟ್ಟಿಸುತ್ತದೆ.

ಪೆರುವಿನ ನೆವಾಡೋ ಮಿಸ್ಮಿಯ ಅರೆಕಿಪಾದ ಅಪಾಚೆಟಾ ಪರ್ವತದಿಂದ ಅಮೆಜಾನ್ ನದಿಯ ಉಗಮ

ನದಿಯ ಮೂಲಗಳು

ಅಮೆಜಾನ್ ನದಿಯು ಇತಿಹಾಸದಲ್ಲಿ ತನ್ನ ಪಾತ್ರವನ್ನು ಹಲವು ಬಾರಿ ಬದಲಿಸಿಕೊಂಡಿದೆ. ಸೆನೋಝೋಯಿಕ್ ಯುಗದಲ್ಲಿ ಆಂಡೆಸ್ ಪರ್ವತಶ್ರೇಣಿಯು ರೂಪುಗೊಳ್ಳುವ ಮುನ್ನ ಈ ನದಿಯು ಪಶ್ಚಿಮಾಭಿಮುಖವಾಗಿ ಹರಿಯುತ್ತಿತ್ತು.
ಇಂದು ಮೇಲಿನ ಅಮೆಜಾನ್ ನದಿಯು ಪೆರುವಿನಲ್ಲಿನ ಹಲವು ದೊಡ್ಡ ನದಿಗಳ ಸರಣಿಯನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾದವು :ಮೊರೋನಾ,ಪಾಸ್ತಾಝಾ,ನುಕುರೇ,ಉರಿಟುಯಾಕು,ಚಾಂಬ್ರಿಯಾ,ಟೈಗ್ರ್,ನಾನೇ,ನಾಪೋ,ಹುವಾಲ್ಲಾಗಾಮತ್ತು ಉಕಯಾಲಿಮರನಾನ್ ನದಿಯು ಆಂಡೆಸ್ ಶ್ರೇಣಿಯ ನೆವಾಡೋ ಡಿ ಯಾರುಪಾ ಪ್ರದೇಶದಹಿಮನದಿಯೊಂದರಲ್ಲಿ ಉಗಮಿಸಿ ಮುಂದೆ ೧೬೦೦ ಕಿ.ಮೀ. ಗಳವರೆಗೆ ಪೆರುವಿನ ಉನ್ನತಪ್ರದೇಶದ ಕಾಡು,ಕೊಳ್ಳಗಳಲ್ಲಿ ಹರಿದು ನೌಟಾ ಎಂಬಲ್ಲಿ ಉಕಯಾಲಿ ನದಿಯನ್ನು ಕೂಡಿಕೊಂಡು ಅಮೆಜಾನ್ ಮಹಾನದಿಯನ್ನು ರೂಪಿಸುತ್ತದೆ. ಅಮೆಜಾನ್ ನದಿಯ ಅತಿ ದೂರದ ಮೂಲವನ್ನು ೧೯೯೬ರಲ್ಲಿ ಪೆರುವಿನ ಆಂಡೆಸ್ ಪರ್ವತಶ್ರೇಣಿಯಲ್ಲಿನ ನೆವಾಡೋ ಮಿಸ್ಮಿ ಎಂಬ ಪರ್ವತಶಿಖರದಿಂದ ಇಳಿಯುವ ಹಿಮನೀರಿನ ಧಾರೆಯೆಂದು ಗುರುತಿಸಲಾಯಿತು. ಇದು ಪೆರುವಿನ ರಾಜಧಾನಿ ಲಿಮಾದಿಂದ ಸುಮಾರು ೭೦೦ ಕಿ.ಮೀ. ಆಗ್ನೇಯದಲ್ಲಿದೆ. ಈ ಹಿಮನೀರಿನ ಧಾರೆಯು ಮುಂದೆ ಉಕಯಾಲಿ ನದಿಯ ಒಂದು ಭಾಗವಾಗುವುದು. ಹೀಗೆ ಮರನಾನ್ ನದಿ ಮತ್ತು ಉಕಯಾಲಿ ನದಿಗಳ ಸಂಗಮದಿಂದ ರೂಪುಗೊಂಡು ರಿಯೊ ಅಮೆಝೋನಾಸ್ ಎಂದು ಕರೆಯಲ್ಪಡುವ ಅಮೆಜಾನ್ ನದಿಯು ಹಲವು ಬಾರಿ ಹೆಸರನ್ನು ಸಹ ಬದಲಿಸಿಕೊಳ್ಳುವುದು. ಬ್ರೆಜಿಲ್,ಪೆರು ಮತ್ತು ಕೊಲಂಬಿಯ ದೇಶಗಳ ಸಂಧಿಸ್ಥಾನದಲ್ಲಿ ಸಾಲಿಮೋಸ್ ಎಂದು ಕರೆಯಲ್ಪಡೂವ ಈ ನದಿ ಮುಂದೆ ಮನೌಸ್ ಬಳಿ ರಿಯೊ ನಿಗ್ರೋ ನದಿಯನ್ನು ಸೇರಿಸಿಕೊಂಡು ಮತ್ತೆ ಅಮೆಜಾನ್ ನದಿ ಎನಿಸುವುದು. ರಿಯೊ ಅಪುರಿಮ್ಯಾಕ್ ಮತ್ತು ಉಕಯಾಲಿ ನದಿಗಳ ಸಂಗಮದ ನಂತರ ಈ ಮಹಾನದಿಯು ಆಂಡೆಸ್ ಪರ್ವತಪ್ರಾಂತ್ಯದಿಂದ ಹೊರಬಿದ್ದು ಬಯಲನ್ನು ಸೇರುವುದು. ಮುಂದೆ ಮರನಾನ್ ನದಿಯ ಸಂಗಮಸ್ಥಾನದವರೆಗೆ ಈ ಬಯಲು ಪ್ರದೇಶವು ಹರಡಿದ್ದು ಸದಾಕಾಲ ನದಿಯ ಪ್ರವಾಹದಲ್ಲಿ ಮುಳುಗಿರುತ್ತದೆ. ಆ ನಂತರ ಈ ಜಲರಾಶಿಯು ಅಗಾಧ ಅಮೆಜಾನ್ ಮಳೆಕಾಡನ್ನು ಪ್ರವೇಶಿಸುತ್ತದೆ.

ಬ್ರೆಜಿಲ್ ನ ಅಮೆಜಾನ್ ಮಳೆಕಾಡು

ಅಮೆಜಾನಿಯನ್ ಮಳೆಕಾಡು


ಅಮೆಜಾನ್ ಮಳೆಕಾಡಿನ ವಿಶಾಲ ಹರವನ್ನು ಹಳದಿ ಬಣ್ಣದಲ್ಲಿ ಗುರುತಿಸಲಾಗಿದೆ.
ಅಮೆಜಾನಿಯನ್ ಮಳೆಕಾಡು ಆಂಡೆಸ್ ಶ್ರೇಣಿಯ ಪೂರ್ವದ ಅಂಚಿನಿಂದ ಆರಂಭವಾಗುತ್ತದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಮಳೆಕಾಡು. ಇದು ವಾತಾವರಣದ ದೃಷ್ಟಿಯಿಂದ ಅತಿ ಮಹತ್ವ ಹೊಂದಿದೆ. ಈ ಮಳೆಕಾಡಿನಜೀವರಾಶಿಯು ಅಗಾಧಪ್ರಮಾಣದಲ್ಲಿ ಇಂಗಾಲಾಮ್ಲ ( ಕಾರ್ಬನ್ ಡೈ ಆಕ್ಸೈಡ್ )ವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಅಮೆಜಾನ್ ಮಳೆಕಾಡನ್ನು ಉಳಿಸಿಕೊಳ್ಳುವ ವಿಷಯ ಅತಿ ಮಹತ್ವ ಪಡೆದಿರುವುದು. ಅಮೆಜಾನ್ ಮಳೆಕಾಡು ಅಮೆಜಾನ್ ಕೊಳ್ಳದ ಅತ್ಯಂತ ತೇವಯುತ ವಾತವರಣದಿಂದ ಆಧರಿಸಲ್ಪಟ್ಟಿದೆ. ಅಲ್ಲದೆ ಈ ಮಳೆಕಾಡಿನಲ್ಲಿ ಅಮೆಜಾನ್ ಮತ್ತದರ ನೂರಾರು ಉಪನದಿಗಳು ಅತಿ ಮಂದಗತಿಯಲ್ಲಿ ಪ್ರವಹಿಸುತ್ತವೆ. ಇದಕ್ಕೆ ಕಾರಣ ಇಲ್ಲಿಂದ ಸಾಗರದವರೆಗೆ ಭೂಪ್ರದೇಶ ಹೆಚ್ಚೂಕಡಿಮೆ ಮಟ್ಟಸವಾಗಿದೆ. ಉದಾಹರಣೆಯೆಂದರೆ - ಸಾಗರತೀರದಿಂದ ೧೬೦೦ ಕಿ.ಮೀ. ದೂರದಲ್ಲಿ ಅಮೆಜಾನ್ ನದಿಯ ದಡದಲ್ಲಿರುವ ಮನೌಸ್ ಪಟ್ಟಣವು ಸಮುದ್ರಮಟ್ಟದಿಂದ ಕೇವಲ ೧೪೪ ಅಡಿಗಳಷ್ಟು ಎತ್ತರದಲ್ಲಿದೆ. ಅಮೆಜಾನ್ ಮಳೆಕಾಡಿನ ಜೀವವೈವಿಧ್ಯ ವಿಸ್ಮಯಕಾರಿ. ಇಲ್ಲಿ ಕನಿಷ್ಠ ೨೫ ಲಕ್ಷ ಬಗೆಯ ಕೀಟಗಳು, ಹಲವಿ ದಶಸಹಸ್ರ ಸಂಖ್ಯೆಯ ಗಿಡಮರಗಳು , ೨೦೦೦ ಕ್ಕೂ ಹೆಚ್ಚಿನ ಬಗೆಯ ಪ್ರಾಣಿ ಪಕ್ಷಿಗಳು ನೆಲೆಯಾಗಿವೆ. ಜಗತ್ತಿನಲ್ಲಿರುವ ಒಟ್ಟು ಹಕ್ಕಿಗಳಲ್ಲಿ ಕಾಲುಭಾಗದಷ್ಟು ಬಗೆಯವು ಇಲ್ಲಿಯೇ ಇವೆ.
ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಸಸ್ಯವೈವಿಧ್ಯ ಅಮೆಜಾನ್ ಮಳೆಕಾಡಿನಲ್ಲಿ ಕಾಣಬರುವುದು. ಒಂದು ಅಂದಾಜಿನ ಪ್ರಕಾರ ಒಂದು ಚದರ ಕಿ.ಮೀ.ನಷ್ಟು ಅಮೆಜಾನ್ ಮಳೆಕಾಡಿನಲ್ಲಿ ೭೫೦೦೦ ಬಗೆಯ ಮರಗಳು ಮತ್ತು ೧,೫೦,೦೦೦ ಬಗೆಯ ಇತರ ಸಸ್ಯಗಳು ಕಂಡುಬರುವುವು. ಅಲ್ಲದೆ ಪ್ರತಿ ಚದರ ಕಿ.ಮೀ.ನಷ್ಟು ಅಮೆಜಾನ್ ಮಳೆಕಾಡಿನಲ್ಲಿರುವ ಜೀವಂತ ಸಸ್ಯರಾಶಿಯು ೯೦೦೦೦ ಟನ್ ತೂಗುವುದು.

ಅಮೆಜಾನ್ ಪ್ರವಾಹ

ಮಳೆಗಾಲದಲ್ಲಿ ಅಮೆಜಾನ್ ನದಿಯ ಸರಾಸರಿ ಆಳ ಸುಮಾರು ೧೩೧ ಅಡಿ ಹಾಗೂ ಸರಾಸರಿ ಅಗಲ ೪೦ ಕಿ.ಮೀ.ಗಳಷ್ಟಿರುತ್ತದೆ. ನವೆಂಬರ್ ತಿಂಗಳಿನಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚತೊಡಗಿ ಜೂನ್ ತಿಂಗಳಿನವರೆಗೂ ಮುಂದುವರೆಯುತ್ತದೆ. ನಂತರ ಅಕ್ಟೋಬರ್ ತಿಂಗಳವರೆಗೆ ನೀರು ಇಳಿಮುಖವಾಗಿರುವುದು. ಒಂದರಿಂದ ಆರು ಮೈಲಿಗಳಷ್ಟು ಅಗಲಕ್ಕಿರುವ ಮುಖ್ಯ ಅಮೆಜಾನ್ ನದಿದಿಯಲ್ಲಿ ಆಟ್ಲಾಂಟಿಕ್ ಸಾಗರದಿಂದ ೧೫೦೦ ಕಿ.ಮೀ. ಒಳಗಿರುವ ಮನೌಸ್ ವರೆಗೆ ಒಳನಾಡಿನ ನೌಕಾಯಾನ ಸಾಧ್ಯ. ಸಣ್ಣ ಗಾತ್ರದ ಸಾಗರನೌಕೆಗಳು ೩೬೦೦ ಕಿ.ಮೀ. ಗಳಷ್ಟು ಒಳನಾಡಿನಲ್ಲಿರುವ ಪೆರುವಿನ ಇಕ್ವಿಟೋಸ್ ಪಟ್ಟಣವನ್ನು ತಲುಪಬಲ್ಲವು. ಸಣ್ಣ ನದಿದೋಣಿಗಳು ಇಲ್ಲಿಂದ ಮುಂದೆ ಇನ್ನೂ ೭೮೫ ಕಿ.ಮೀ. ದೂರದಲ್ಲಿರುವ ಅಚುವಲ್ ಪಾಯಿಂಟ್ ವರೆಗೆ ಸಾಗಬಲ್ಲವು.

ಸಾಗರದೆಡೆಗೆ

ನೂರಕ್ಕೂ ಹೆಚ್ಚು ಗಣನೀಯ ಗಾತ್ರದ ಉಪನದಿಗಳಿರುವ ಅಮೆಜಾನ್ ನದಿಯ ಅಗಲವು ಹಲವೆಡೆ ೬ ರಿಂದ ೧೦ ಕಿ.ಮೀ. ಗಳಷ್ಟಿರುತ್ತದೆ. ಹಲವು ಸ್ಥಳಗಳಲ್ಲಿ ನದಿಯು ಎರಡು ಕವಲುಗಳಾಗಿ ಒಡೆದು ಬಹುದೂರದವರೆಗೆ ಸಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಹಲವಾರು ನೈಸರ್ಗಿಕ ಕಾಲುವೆಗಳು ಈ ಎರಡೂ ಕವಲುಗಳನ್ನು ಜೋಡಿಸುತ್ತವೆ. ಈ ಸನ್ನಿವೇಶವು ದೊಡ್ಡಸಂಖ್ಯೆಯ ದ್ವೀಪಗಳನ್ನು ನದಿಯಲ್ಲಿ ಸೃಷ್ಟಿಸಿದೆ. ಅಮೆಜಾನ್ ನದಿಯ ಅಳಿವೆ ೩೩೦ ಕಿ.ಮೀ. ಅಗಲವಾಗಿದೆ. ಇಂಗ್ಲೆಂಡಿನಥೇಮ್ಸ್ ನದಿಯ ಒಟ್ಟೂ ಉದ್ದಕ್ಕಿಂತ ಅಮೆಜಾನ್ ನದಿಯ ಅಳಿವೆಯ ಅಗಲವೇ ಹೆಚ್ಚು. ಅಳಿವೆಯ ಬಾಯಿಯಲ್ಲಿ ಸುಮಾರು ೧೬೦ ಕಿ.ಮೀ. ವರೆಗಿನ ಪ್ರದೇಶವು ಹಲವು ಅರೆಮುಳುಗಿದ ದ್ವೀಪಗಳು ಮತ್ತು ಆಳವಲ್ಲದ ಮರಳದಂಡೆಗಳನ್ನು ಒಳಗೊಂಡಿದೆ. ಇಲ್ಲಿ ಬೋರ್ ಅಥವಾ ಪೊರೊರೋಕಾ ಎಂದು ಕರೆಯಲ್ಪಡುವ ವಿಶಿಷ್ಟ ಪ್ರವಾಹ ಸನ್ನಿವೇಶವೇರ್ಪಡುವುದು. ಈ ಪ್ರವಾಹದ ಅಲೆಗಳು ಭಾರೀ ಗರ್ಜನೆಯೊಂದಿಗೆ ಆರಂಭವಾಗಿ ಸುಮಾರು ೫ ರಿಂದ ೧೩ ಅಡಿಗಳಷ್ಟು ಎತ್ತರದ ನೀರಿನ ಗೋಡೆಯ ರೂಪದಲ್ಲಿ ಅತಿ ವೇಗವಾಗಿ ಸಾಗರದತ್ತ ಧಾವಿಸುತ್ತವೆ. ಈ ಅತಿ ರಭಸದ ನೀರಿನ ಪ್ರವಾಹವು ನದಿಯುದ್ದಕ್ಕೂ ಸಾಗಿಬಂದ ಎಲ್ಲಾ ಮೆಕ್ಕಲುಮಣ್ಣನ್ನು ಸಾಗರದೊಳಗೆ ಬಹುದೂರದವರೆಗೆ ತಳ್ಳಿಬಿಡುತ್ತದೆ. ಈ ಕಾರಣದಿಂದಾಗಿಯೇ ಅಮೆಜಾನ್ ನದಿಗೆ ಮುಖಜ ಭೂಮಿಯಿಲ್ಲ.

ವನ್ಯಜೀವಿಗಳು


ಪಿರಾನಾ ಮೀನು
ಜಗತ್ತಿನಲ್ಲಿರುವ ಒಟ್ಟೂ ವನ್ಯಜೀವಿ ಪ್ರಭೇದಗಳ ಮೂರನೆಯ ಒಂದು ಭಾಗ ಅಮೆಜಾನ್ ಮಳೆಕಾಡಿನಲ್ಲಿವೆ. ಈ ಮಳೆಕಾಡಿನ ಒಟ್ಟು ವಿಸ್ತೀರ್ಣ ೨೧ ಲಕ್ಷ ಚ.ಕಿ.ಮೀ. ಅಮೆಜಾನ್ ನದಿಯಲ್ಲಿ ಈವರೆಗೆ ೩೦೦೦ ತಳಿಯ ಮೀನುಗಳನ್ನು ಗುರುತಿಸಲಾಗಿದೆ.
ಬೋಟೊ ಎಂದು ಕರೆಯಲ್ಪಡುವ ಅಮೆಜಾನ್ ನದಿ ಡಾಲ್ಫಿನ್ ಜಗತ್ತಿನ ಅತಿ ದೊಡ್ಡ ನದಿ ಡಾಲ್ಫಿನ್. ಅತಿ ಕ್ರೂರ ಸ್ವಭಾವದ ಮೀನಾದ ಪಿರಾನಾಗೆ ಅಮೆಜಾನ್ ನದಿ ನೆಲೆ. ಪಿರಾನಾ ಮೀನುಗಳು ದೊಡ್ಡ ಹಿಂಡುಗಳಲ್ಲಿ ಜೀವಿಸಿ ಮನುಷ್ಯರೂ ಸೇರಿದಂತೆ ಪ್ರಾಣಿಗಳ ಮೇಲೆ ದಾಳಿಯಿಡುತ್ತವೆ. ೧೯೮೧ರಲ್ಲಿ ಓಬಿಡಾಸ್ ಬಳಿ ಸಂಭವಿಸಿದ ದೋಣಿ ಮುಳುಗಡೆಯಲ್ಲಿ ೩೩೧ ಜನರು ಈ ಪಿರಾನಾಗಳಿಗೆ ಬಲಿಯಾದರೆಂದು ನಂಬಲಾಗಿದೆ. ಆದರೆ ಕೆಲವೇ ಜಾತಿಯ ಪಿರಾನಾಗಳು ಮನುಷ್ಯರ ಮೇಲೆ ದಾಳಿಯಿಡುತ್ತವೆ.
ಅಮೆಜಾನ್ ನದಿಯಲ್ಲಿ ವಾಸಿಸುವ ಅರಪಿಮಾ ಅಥವಾ ಪಿರರುಕು ಎಂಬ ಹೆಸರಿನ ಮೀನು ಜಗತ್ತಿನ ದೊಡ್ಡ ಸಿಹಿನೀರಿನ ಮೀನುಗಳಲ್ಲಿ ಒಂದು. ಇದು ಸುಮಾರು ೧೦ ಅಡಿಗಳ ವರೆಗೆ ಬೆಳೆದು ೨೦೦ ಕಿಲೋ ವರೆಗೆ ತೂಗಬಲ್ಲುದು. ಪ್ರಪಂಚದ ಅತಿ ದೊಡ್ಡ ಹಾವುಗಳ ಪೈಕಿ ಒಂದಾದ ಅನಕೊಂಡಾ ಅಮೆಜಾನ್ ನದಿಯಲ್ಲಿ ಆಳ ಕಡಿಮೆಯಿರುವಲ್ಲಿ ನೆಲೆಸುತ್ತದೆ. ಹೆಚ್ಚಿನ ಕಾಲ ನೀರಿನ ಒಳಗೆಯೇ ಉಳಿದು ಹೊರಳೆಗಳನ್ನು ಮಾತ್ರ ನೀರಿನಿಂದ ಹೊರಗೆ ಇಟ್ಟುಕೊಂಡಿರುವ ಈ ಹಾವು ಕೆಲವು ಬಾರಿ ಮೀನುಗಾರರ ಮೇಲೆ ದಾಳಿ ಮಾಡುವುದೆಂದು ವದಂತಿಗಳಿವೆ.

ಕಳವಳಕಾರಿ ಸಂಗತಿಗಳು

ಇಂದು ಅಮೆಜಾನ್ ಮಳೆಕಾಡು ಅಪಾಯದ ಅಂಚಿನಲ್ಲಿದೆ. ಅವಿರತವಾಗಿ ಸಾಗಿರುವ ಮರಮಟ್ಟುಗಳ ಉದ್ಯಮ, ಬ್ರೆಜಿಲ್ ನ ಅಮೆಜಾನ್ ಪ್ರದೇಶದಲ್ಲಿ ಹೆದ್ದಾರಿಗಳ ನಿರ್ಮಾಣ , ಕೃಷಿಭೂಮಿಗಾಗಿ ಕಾಡಿನ ನಾಶ ಇವುಗಳಿಂದಾಗಿ ಮಳೆಕಾಡಿನ ವ್ಯಾಪ್ತಿ ಕುಗ್ಗುತ್ತಿದೆ. ಇದರ ಪರಿಣಾಮ ಜಗತ್ತಿನ ವಾತಾವರಣವದ ಮೇಲೆ ಪ್ರತಿಕೂಲವಾಗಲಿದೆ. ಅಮೆಜಾನ್ ಮಳೆಕಾಡನ್ನು ಹೀಗೆಯೆ ಉಳಿಸಿಕೊಳ್ಳುವುದು ಮನುಕುಲದ ಒಳಿತಿನ ದೃಷ್ಟಿಯಿಂದ ಬಲು ಆವಶ್ಯಕ.

ಅಮೆಜಾನ್
( ಅಪುರಿಮ್ಯಾಕ್, ಈನ್, ಟ್ಯಾಂಬೊ, ಉಕಯಾಲಿ, ಅಮೆಜೋನಾಸ್,ಸೊಲಿಮೋಸ್ )
ನದಿ
none  ಅಮೆಜಾನ್ ನದಿ ಸಾಗರಮುಖದಲ್ಲಿ
ಅಮೆಜಾನ್ ನದಿ ಸಾಗರಮುಖದಲ್ಲಿ
ದೇಶಗಳುಪೆರು, ಕೊಲೊಂಬಿಯ, ಬ್ರೆಜಿಲ್, ಬೊಲಿವಿಯ,ವೆನೆಜುವೇಲ, ಎಕ್ವಡಾರ್
ಉಪನದಿಗಳು
 - ಎಡಬದಿಯಲ್ಲಿಮ್ಯಾರನಾನ್, ಜಪೂರಾ, ರಿಯೊ ನೆಗ್ರೊ
 - ಬಲಬದಿಯಲ್ಲಿಉಕಾಯಾಲಿ, ಪುರುಸ್, ಮೆಡೀರಾ, ಟಪಜೋಸ್,ಕ್ಸಿಂಗು
Cityಇಕ್ವಿಟೋಸ್ (ಪೆರು); ಮನಾಸ್ (ಬ್ರೆಜಿಲ್)
ಮೂಲಅಪಾಚೇಟ ಕ್ಲಿಫ್ಫ್
 - ಸ್ಥಳನೆವಾಡೋ ಮಿಸ್ಮಿ, ಅರೆಕ್ವಿಪಾಪೆರು
 - ಸಮುದ್ರ ಮಟ್ಟದಿಂದ ಎತ್ತರ೫,೧೭೦ m (೧೬,೯೬೨ ft)
 - ಅಕ್ಷಾಂಶ-ರೇಖಾಂಶ15°31′05″S 71°45′55″W
ಸಾಗರಮುಖ
 - ಸ್ಥಳಅಟ್ಲಾಂಟಿಕ್ ಮಹಾಸಾಗರಬ್ರೆಜಿಲ್
 - ಸಮುದ್ರ ಮಟ್ಟದಿಂದ ಎತ್ತರ೦ m (೦ ft)
ಉದ್ದ೬,೯೯೨ km (೪,೩೦೦ mi(ಸುಮಾರು)
ಜಲಾನಯನ೭೦,೫೦,೦೦೦ km² (೨೭,೨೦,೦೦೦ sq mi)(ಸುಮಾರು)
ನೀರಿನ ಬಿಡುಗಡೆfor ಸಾಗರಕ್ಕೆ
 - ಸರಾಸರಿ೨,೧೯,೦೦೦ /s (೭೭,೩೪,೦೦೦ cu ft/s)
ಅಮೆಜಾನ್ ಜಲಾನಯನ ಪ್ರದೇಶದ ನಕಾಶೆ
ಅಮೆಜಾನ್ ಜಲಾನಯನ ಪ್ರದೇಶದ ನಕಾಶೆ

ಕನ್ನಡ ರಾಜ್ಯೋತ್ಸವ

            ಸಿದ್ಲಿಂಗು ಫೋನ್ ಬಂತು ಕಳ್ ಮಂಜನಿಗೆ...ಮಂಜು, ನನ್ನ ಆಫೀಸಲೊಬ್ಬ ಸೆಲ್ವ ಅಂತ ಇದ್ದಾನಲ್ಲ, ಅವರ ಊರಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಾರಂತೆ. ಒಂದು ಕಿತ ನಮ್ಮೂರಿಗೆ ಬಂದಿದ್ದಾಗ ನಿಮ್ಮೆಲ್ಲರ ಕಾರ್ಯಕ್ರಮ ನೋಡಿ ಖುಸಿ ಆಗಿ ಈಗ ಅವರ ಊರಲ್ಲಿ ನೀವೆ ಕಾರ್ಯಕ್ರಮ ಕೊಡಬೇಕೆಂದು ಕೇಳಿದ್ದಾನೆ, ನೀವೆಲ್ಲಾ ಸೇರಿ ಏನಾರೂ ಮಾಡ್ರಲಾ ಅಂದ. ಆಯ್ತಣ್ಣೊ ಯಲ್ಲರೂ ಪ್ರಾಕ್ಟೀಸು ಮಾಡ್ತೀವಿ ಅಂತೇಳಿ ಯಲ್ಲರಿಗೂ ಹೇಳಿದ. ಈ ಕಿತ ಹೆಂಗಸರು ಸಹ ಮಾಡಲಿ ಅಂತ ಅವರು ಸಹ ಡ್ಯಾನ್ಸು, ಡೊಳ್ಳು ಕುಣಿತ, ವೀರಗಾಸೆ ಯಲ್ಲ ಪ್ರಾಕ್ಟೀಸು ಮಾಡಿರು.


             ರಾಜ್ಯೋತ್ಸವ ಡೇಟ್ ಪಿಕ್ಸ್ ಆಯ್ತು. ಕಳ್ ಮಂಜನಿಗೆ ಸಿದ್ಲಿಂಗು ಪೋನ್ ಬಂತು. ಸೆಲ್ವ ಅವರ ಊರು ಮೆಟ್ಟುಪಾಳ್ಯ ಅಂತ ತಮಿಳುನಾಡಲ್ಲಿ ಕನ್ಲಾ, ಚೆನ್ನೈನಿಂದ ೬೦ ಕಿಲೋಮೀಟರ್ . ಚೆನ್ನೈಗೆ ನೀವೆ ಟಿಕೇಟ್ ತಕ್ಕಂಡು ಹೋದ್ರೆ ಅಲ್ಲಿಂದ ಅವರು ಕರೆದುಕೊಂಡು ಹೋಗ್ತಾರೆ. ಆಮ್ಯಾಕೆ ಅಲ್ಲಿ ಟಿಕೇಟ್ ದುಡ್ಡು ಯಲ್ಲಾ ಕೊಡ್ತಾರಂತೆ. ಅಲ್ಲಿ ಊಟ ತಿಂಡಿ ರೂಮು ಯಲ್ಲಾ ಅವರೆ ನೋಡಿಕೊಂತಾರೆ. ಭಾನುವಾರ ಬೆಳ್ಳಿಗೆ ಕಾರ್ಯಕ್ರಮ. ಶನಿವಾರ ಬೆಳ್ಳಿಗೆ ೮ ಘಂಟೆಗೆ ಚೆನ್ನೈ ಬಸ್ ಸ್ಟಾಂಡಿನಿಂದ ನಿಮ್ಮನ್ನು ಕರೆದುಕೊಂಡು ಹೋಗ್ತಾರೆ. ಬಿಳಿ ಬಣ್ಣದ ಟಿಟಿ ಗಾಡಿ ಬತ್ತದೆ. ನೀವೆಲ್ಲಾ ಶುಕ್ರವಾರ ರಾತ್ರಿನೇ ಹೊರಟು ಬುಡ್ರಿ ಅಂದ ಸಿದ್ಲಿಂಗು.



             ಆಯ್ತಣ್ಣೊ ಅಂತ ಕಳ್ ಮಂಜ ಯಲ್ಲರಿಗೂ ಹೇಳಿದ. ಯಲ್ಲರ ಹತ್ತಿರ ನೋಡ್ರಲಾ ನಿಮ್ಮ ಕಾರ್ಯಕ್ರಮನಾ ಹೊರನಾಡಲ್ಲಿ ಮಾಡುಸ್ತ ಇದ್ದೀನಿ. ಖರ್ಚು ಸ್ಯಾನೆ ಬತ್ತದೆ. ಆಮ್ಯಾಕಿಂದ ನೀವು ಪೇಮಸ್ ಆಗ್ತೀರಾ...ಇನ್ನ ಹೆಚ್ಚು ಕಾರ್ಯಕ್ರಮ ಯಲ್ಲಾ ಸಿಗ್ತದೆ...ಈಗ ಖರ್ಚಿಗೆ ಅಂತ ನೀವೆಲ್ಲಾ ನಾಲಕು ಸಾವಿರ ಮತ್ತೆ ಡ್ರಸ್ಸಿಗೆ ಒಂದು ಸಾವಿರ ಯಲ್ಲ ಐದು ಸಾವಿರ ಆಯ್ತದೆ ಅಂತ ಹತ್ತು ಜನಗಳಿಂದ ಐವತ್ತು ಸಾವಿರ ಕಿತ್ತ. ಅದ್ರಾಗೆ ೮ ಜನ ಹೆಂಗಸರು ಇಬ್ಬರು ಗಂಡಸರು ಇದ್ದರು.



             ಪಕ್ಕದೂರಲ್ಲಿ ಜಲಗೇರಮ್ಮನ ದೇವಸ್ಥಾನ ಇತ್ತು. ಅಲ್ಲಿ ಹೋಗಿ ಪೂಜಾರಿಗೆ ಐನೂರು ರೂಪಾಯಿ ಕೊಟ್ಟು ಭಕ್ತಾದಿಗಳು ಅಮ್ಮನವರಿಗೆ ಉಡಿಸುವ ಸೀರೆ ಗಳಲ್ಲಿ ಒಂದೆ ತರಹದ ಏಂಟು ಹರಿಶಿಣ ಬಣ್ಣದ ಕೆಂಪು ಬಾರ್ಡರ್ ಸೀರೆ ತಕ್ಕಂಡು ಬಂದ. ಗಂಡಸರಿಗೆ ಒಂದೊಂದು ಹಳದಿ ಜುಬ್ಬ ಕೆಂಪು ಪೈಜಾಮ ತಂದು ಯಲ್ಲರಿಗೂ ಕೊಟ್ಟ. ಯಲ್ಲ ಸೇರಿ ಒಂದು ಸಾವಿರ ಆಯ್ತು. ಶುಕ್ರವಾರ ಯಲ್ಲರನ್ನು ಅದೇ ಡ್ರಸ್ ನಲ್ಲಿ ಬರಬೇಕು ಅಂತ ಹೇಳಿದ್ದ. ಯಲ್ಲರೂ ಬಸ್ ಹತ್ತಿದರು. ನಾವೆಲ್ಲಾ ಕರ್ನಾಟಕ ರಕ್ಷಣ ವೇದಿಕೆಯವರು ಚಳುವಳಿಗೆ ಹೊಂಟಿದ್ದೀವಿ ಅಂತೇಳಿ ಬಡ್ಡಿಮಗ ಬಸ್ಸಿನಲ್ಲೂ ಟಿಕೇಟ್ ತೆಗೆದುಕೊಳ್ಳಲಿಲ್ಲ.


             ಹೆಂಗೊ ಬೆಳ್ಳಿಗೆ ಏಳು ಘಂಟೆಗೆ ಚೆನ್ನೈ ತಲುಪಿರು. ಯಲ್ಲರೂ ಅಣ್ಣ ಹೊಟ್ಟೆ ಹಸಿವು ಅಂದರು. ತಡೀರಲಾ ಕಾರ್ಯಕರ್ತರು ಬತ್ತಾರೆ ಅಂತ ತಿಂಡಿನೂ ಕೊಡಿಸಲಿಲ್ಲ. ಅಮ್ಯಾಕೆ ಅವರೆ ಒಂದೊಂದು ದ್ವಾಸೆ ತಿಂದು ಕಳ್ ಮಂಜನಿಗೂ ಒಂದು ದ್ವಾಸೆ ಕೊಡಿಸಿದ್ರು. ಅಣ್ಣೊ ವಿಸರ್ಜನೆ ಅಂದ್ರು...ಕೈನಲ್ಲಿ ಕಲ್ಲು ಹಿಡಿದುಕೊಂಡ್ರೆ ತಡೆದುಕೊಳ್ಳಬಹುದು ಅಂತ ಐಡಿಯಾ ಬ್ಯಾರೆ ಕೊಟ್ಟ. ಕೊನೆಗೂ ಏಂಟಾಯಿತು. ಇವರಿಗೆ ತಮಿಳು ಭಾಸೆ ಬ್ಯಾರೆ ಬರಕ್ಕಿಲ್ಲ. ಒಂದು ಬಿಳಿ ಟಿಟಿ ಗಾಡಿ ಸ್ಲೋ ಮಾಡಿದ. ಇವರನ್ನೆ ನೋಡ್ತಾ ಇದ್ದ ಹೆಂಗೆ ಪೊಣೊ ಅಂದ... ಪೋಗ್ರಾಮ್, ಪೋಗ್ರಾಮ್ ಅಂದ. ವಾಂಗೊ ಅಂತ ಗಾಡಿಗೆ ಹತ್ತಿಸಿಕೊಂಡ ಯಲ್ಡು ಘಂಟೆ ಆದಮ್ಯಾಕೆ ಇಳಿಸಿದ.


             ಇಳಿದು ನೋಡುತ್ತಾರೆ. ದೊಡ್ಡ ದೇವಸ್ಥಾನ. ಎಲ್ಲ ಹಷಣ ಸೀರೆ ಉಟ್ಕೊಂಡಿರೊ ಜನ ಸುತ್ತ ಮುತ್ತ... ಐದು ಸಾವಿರ ರೂಪಾಯಿ ಕೇಳಿದ ಡ್ರೈವರ್. ಮಂಜ ಕೊಡಕಿಲ್ಲ ಅಂತ ಕ್ಯಾತೆ ತೆಗೆದ. ಹೆಂಗಸರೆಲ್ಲಾ ಹಳದಿ ಸೀರೆ ಗಂಡಸರು ಹಳದಿ ಜುಬ್ಬನಲ್ಲಿ ಇದ್ದಿದಕ್ಕೆ ಡ್ರೈವರ್ ಓಂ ಸಕ್ತಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಕೊನೆಗೆ ಮಾತಾಡೊಕೆ ಭಾಸೆ ಬರದೆ ಮಂಜ ದುಡ್ಡು ಕೊಟ್ಟ. ಬೋರ್ಡು ಓದೋಣ ಅಂದ್ರೆ ಯಲ್ಲ ಕಡೆ ಜಿಲೀಬಿ ಅಕ್ಷರ. ಕೊನೆಗೆ ಸಿದ್ಲಿಂಗುಗೆ ಫೋನ್ ಮಾಡಿ ಮೆಟ್ಟುಪಾಳ್ಯ ತಲುಪಿ ಕಾರ್ಯಕ್ರಮ ಮಾಡಿರು. ಊರಿಗೆ ಬತ್ತಿದ್ದಂಗೆ ಯಲ್ಲರೂ ಕಳ್ ಮಂಜನ್ನ ನಂಬಿ ಮೆಟ್ಟುಪಾಳ್ಯಕ್ಕೆ ಹೋದವಲ್ಲ ನಾವು ಮೆಟ್ ನಾಗೆ ಹೊಡ್ಕೊಬೇಕು ಅಂತ ಅವನಿಗೆ ನಾಲಕ್ಕು ಇಕ್ಕಿ ಮಿಕ್ಕ ಕಾಸ್ ಕಿತ್ಕೊಂಡರು

1.. ಜಾಹೀರಾತು

2.ಜಾಹೀರಾತು