fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಡಿಸೆಂಬರ್ 31, 2021

ಆನಂದ ಕಂದ

ಅಪೂರ್ವ ಶಕ್ತಿ

ಮನೆ ಮನಗಳ ಕದ ತಟ್ಟಿ ಕಿವಿ ಇಂಪಾಗಿ ತಂಪೆನಿಸುವುದೆ ಅದೊಂದು/

ತನ್ನೆಡೆಗೆ ಆಕರ್ಷಿಸಿ ಹಿಡಿದಿಡುವ ಅಪೂರ್ವ ಶಕ್ತಿ ಇದೆ ಕನ್ನಡಕ್ಕೊಂದು//

ಸಾವಿರಾರು ವರ್ಷಗಳ ಇತಿಹಾಸ ಇರುವ ಸೊಬಗಿದು ಅರಿತಿರುವೆ ಆಸ್ವಾದಿಸಿ/
ಪೋಷಿಸಿ ನೀರೆರೆವ ಹೃದಯ ಬಿತ್ತನೆ ಎದೆಯಲ್ಲಿ ಅಚ್ಚಾಗಬೇಕಿದೆ ಇದೊಂದು//

ಜಗದ ಭಾಷೆಗಳೆಲ್ಲಾ ಅಡಗಿಸಿಕೊಳ್ಳುವ ಶಕ್ತಿಯ ಭವ್ಯ ಪರಂಪರೆಯ ನುಡಿ/
ಹಳೆ ನಡು ಹೊಸಗನ್ನಡ ಅಂದಿನಿಂದ ನಿರಂತರ ಪುಟಿದೇಳುತ್ತಲಿದೆ ಎಂದೆಂದು//

ತಂದು ಹಾಕಿದರೂ ನುಸುಳಿ ಬಂದರೂ ಕೊಬ್ಬಿ ಮೆರೆದರೂ ಅಜರಾಮರ ಕನ್ನಡ/
ಮಾತಾಡುವ ಹೆಮ್ಮೆ ಮಾಡಿರುವೆ ಪುಣ್ಯ ಕೇಳಿಕೊಂಡು ಬರಬೇಕಿದೆ ಇದಕ್ಕೆಂದು//

ವಿವಿಧ ರೂಪ ವಿಶಿಷ್ಟ ಸಂಸ್ಕೃತಿ ವಿಭಿನ್ನ ಪ್ರದೇಶಗಳ ಮುಕುಟಮಣಿ ನಾಡಿದು/
ಕಲಿತು ಕಲಿಸುವ ಅಭಿಮಾನ ಪಸರಿಸಿದರೆ ಸ್ವಾಭಿಮಾನ ನಿಜವಾಗಲಿದೆ ಎಂದೆಂದೂ//

-ಬಸವರಾಜ ಕಾಸೆ

ಬುಧವಾರ, ಡಿಸೆಂಬರ್ 15, 2021

ಅ-ಅಃ ಅಕ್ಷರಬಳ್ಳಿ ಕವನಗಳು

ಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ನೆಯ ಸೊಂಡಿಲ ಮೊಗವಿತ್ತು
ಲಿಯನ್ನೇರಿದ ಯಾರಿದು ಎಂದೆನು
ಶ್ವರಸುತನೆಂದನು ಅಪ್ಪ
ಮಾಕುಮಾರನ ಚೆಲುಹಬ್ಬದದಿನ
ಟಕೆ ಬಂದರು ಅತಿಥಿಗಳು
ಲೆಯನ್ನಿರಿಸಿ ಅನ್ನವ ಬಡಿಸಲು
ಕಾಗ್ರತೆಯಲಿ ಜನರುಣಲು
ದು ಬಗೆಯ ಸಿಹಿಭಕ್ಷ್ಯಗಳಿದ್ದುವು
ಗ್ಗರಣೆಯ ಹುಳಿಮೊಸರಿತ್ತು
ಡುವ ತಿಳಿಪಾಯಸವನು ಮೆಲ್ಲುತ
ತಣದೂಟವ ಹೊಗಳಿದರು
ಅಂದದ ಊಟದ ನಂತರ ಅಡಿಕೆಯ
ಅಃ ಎಂದರು ಜನ ಸವಿಯುತಲಿ
ಬಾ ನವಿಲೆ...
ರೆಯುವೆ ನಿನ್ನ ಕಣ್ಮಣಿಯನ್ನ
ಕಾಡಿಗೆ ಕಣ್ಣಿನ ನವಿಲೇ
ಕಿಟಿಕಿಯಾಳಿಂದ ಬಾ ಮುದದಿಂದ
ಕೀಟಲೆ ಮಾಡೆನು ನಾ ನಿನಗೆ
ಕುಡಿಯಲು ಹಾಲು ತರಲೇನ್ಹೇಳು
ಕೂಗುತ ನಲಿಯುತ ಬಂದುಬಿಡು
ಕೆಣಕುವುದಿಲ್ಲ ಮೋಸವಿದಲ್ಲ
ಕೇಕೇ ಗಾನವ ಮಾಡುತಿರು
ಕೈಯಲ್ಲಿರುವ ಹಣ್ಣನು ಕೊಡುವೆ
ಕೊರಳನು ಬಾಗುತ ಬಾ ಬಾ ಬಾ
ಕೋರಿಕೆಯನ್ನ ನೀ ಸಲಿಸೆನ್ನ
ಕೌತುಕ ಪಡುವೆನು ನಿನಗಾಗಿ
ಕಂದನ ಕರೆಯಿದು ಪ್ರೇಮದ ಕುರುಹಿದು
ಕಃ ಎನ್ನದೆ ಬಾ ಕುಣಿ ಕುಣಿ ।।


(ಈ ಎರಡೂ ಕವಿತೆಗಳನ್ನು, ಮೊನ್ನೆ ಊರಿಗೆ ಹೋಗಿದ್ದಾಗ ಹಳೇ ಪುಸ್ತಕವೊಂದರಲ್ಲಿ ಓದಿದೆ. ಇವನ್ನು ಬರೆದ ಕವಿ ದಿವಂಗತ ಮುಂಡಾಜೆ ರಾಮಚಂದ್ರ ಭಟ್‌. 1947ರಿಂದ ಸುಮಾರು 1965ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ರಾಮಚಂದ್ರ ಮಾಷ್ಟ್ರು ಸಂಗೀತದಲ್ಲೂ ಪರಿಣತರಾಗಿದ್ದರಂತೆ. ಮಕ್ಕಳಿಗಾಗಿ ಸುಂದರ ಕವಿತೆಗಳನ್ನು ರಚಿಸಿದ ಇವರ ಪ್ರಕಟಿತ ಸಂಕಲನಗಳೆಂದರೆ 'ತಮ್ಮನ ಕವಿತೆಗಳು", 'ಪೀಪೀ", 'ಪುಟ್ಟನ ಪಿಟೀಲು" ಇತ್ಯಾದಿ. ಇವರ 'ರೈಲು ಪ್ರವಾಸದ ಕನಸು" ಎಂಬ ಒಂದು ಕವಿತೆಯಂತೂ ಬಹಳ ಚೆನ್ನಾಗಿದೆ.)

ಗುರುವಾರ, ಡಿಸೆಂಬರ್ 09, 2021

ನಮ್ಮ ನಂಬಿಕೆಗಳು 12


೧೨) ನಾವೇಕೆ ಉಪವಾಸವಿರುತ್ತೇವೆ?
ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಪ್ರಾಚೀನ ವೈದ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರ ಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಅವಧಿಯಲ್ಲಿ ನಿಯಮಿತವಾಗಿ ನಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿ ಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ. 80%ರಷ್ಟು ನೀರು ಮತ್ತು ಶೇ. 20%ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿ ಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿ ಪಡಿಸುತ್ತದೆ.

ಶುಕ್ರವಾರ, ಡಿಸೆಂಬರ್ 03, 2021

ಬಿರ್ಲಾ / ಬರ್ಲಾ



ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು ನೀನೇ ನನ್ನ ಟಾಟಾ ಬಿರ್ಲಾ..
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು ನೀನೇ ನನ್ನ ಟಾಟಾ ಬಿರ್ಲಾ..
ಆದರೆ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು ಟಾಟಾ ಬರ್ಲಾ.. 

(ವಾಹ್ ವಾಹ್)

1.. ಜಾಹೀರಾತು

2.ಜಾಹೀರಾತು