fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಶುಕ್ರವಾರ, ಡಿಸೆಂಬರ್ 31, 2021
ಅಪೂರ್ವ ಶಕ್ತಿ
ಮನೆ ಮನಗಳ ಕದ ತಟ್ಟಿ ಕಿವಿ ಇಂಪಾಗಿ ತಂಪೆನಿಸುವುದೆ ಅದೊಂದು/
ತನ್ನೆಡೆಗೆ ಆಕರ್ಷಿಸಿ ಹಿಡಿದಿಡುವ ಅಪೂರ್ವ ಶಕ್ತಿ ಇದೆ ಕನ್ನಡಕ್ಕೊಂದು//
ಸಾವಿರಾರು ವರ್ಷಗಳ ಇತಿಹಾಸ ಇರುವ ಸೊಬಗಿದು ಅರಿತಿರುವೆ ಆಸ್ವಾದಿಸಿ/
ಪೋಷಿಸಿ ನೀರೆರೆವ ಹೃದಯ ಬಿತ್ತನೆ ಎದೆಯಲ್ಲಿ ಅಚ್ಚಾಗಬೇಕಿದೆ ಇದೊಂದು//
ಜಗದ ಭಾಷೆಗಳೆಲ್ಲಾ ಅಡಗಿಸಿಕೊಳ್ಳುವ ಶಕ್ತಿಯ ಭವ್ಯ ಪರಂಪರೆಯ ನುಡಿ/
ಹಳೆ ನಡು ಹೊಸಗನ್ನಡ ಅಂದಿನಿಂದ ನಿರಂತರ ಪುಟಿದೇಳುತ್ತಲಿದೆ ಎಂದೆಂದು//
ತಂದು ಹಾಕಿದರೂ ನುಸುಳಿ ಬಂದರೂ ಕೊಬ್ಬಿ ಮೆರೆದರೂ ಅಜರಾಮರ ಕನ್ನಡ/
ಮಾತಾಡುವ ಹೆಮ್ಮೆ ಮಾಡಿರುವೆ ಪುಣ್ಯ ಕೇಳಿಕೊಂಡು ಬರಬೇಕಿದೆ ಇದಕ್ಕೆಂದು//
ವಿವಿಧ ರೂಪ ವಿಶಿಷ್ಟ ಸಂಸ್ಕೃತಿ ವಿಭಿನ್ನ ಪ್ರದೇಶಗಳ ಮುಕುಟಮಣಿ ನಾಡಿದು/
ಕಲಿತು ಕಲಿಸುವ ಅಭಿಮಾನ ಪಸರಿಸಿದರೆ ಸ್ವಾಭಿಮಾನ ನಿಜವಾಗಲಿದೆ ಎಂದೆಂದೂ//
-ಬಸವರಾಜ ಕಾಸೆ
ಬುಧವಾರ, ಡಿಸೆಂಬರ್ 15, 2021
ಅ-ಅಃ ಅಕ್ಷರಬಳ್ಳಿ ಕವನಗಳು
ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ಆನೆಯ ಸೊಂಡಿಲ ಮೊಗವಿತ್ತು
ಇಲಿಯನ್ನೇರಿದ ಯಾರಿದು ಎಂದೆನು
ಈಶ್ವರಸುತನೆಂದನು ಅಪ್ಪ
ಉಮಾಕುಮಾರನ ಚೆಲುಹಬ್ಬದದಿನ
ಊಟಕೆ ಬಂದರು ಅತಿಥಿಗಳು
ಎಲೆಯನ್ನಿರಿಸಿ ಅನ್ನವ ಬಡಿಸಲು
ಏಕಾಗ್ರತೆಯಲಿ ಜನರುಣಲು
ಐದು ಬಗೆಯ ಸಿಹಿಭಕ್ಷ್ಯಗಳಿದ್ದುವು
ಒಗ್ಗರಣೆಯ ಹುಳಿಮೊಸರಿತ್ತು
ಓಡುವ ತಿಳಿಪಾಯಸವನು ಮೆಲ್ಲುತ
ಔತಣದೂಟವ ಹೊಗಳಿದರು
ಅಂದದ ಊಟದ ನಂತರ ಅಡಿಕೆಯ
ಅಃ ಎಂದರು ಜನ ಸವಿಯುತಲಿ
ಬಾ ನವಿಲೆ...
ಕರೆಯುವೆ ನಿನ್ನ ಕಣ್ಮಣಿಯನ್ನ
ಕಾಡಿಗೆ ಕಣ್ಣಿನ ಓ ನವಿಲೇ
ಕಿಟಿಕಿಯಾಳಿಂದ ಬಾ ಮುದದಿಂದ
ಕೀಟಲೆ ಮಾಡೆನು ನಾ ನಿನಗೆ
ಕುಡಿಯಲು ಹಾಲು ತರಲೇನ್
ಹೇಳು
ಕೂಗುತ ನಲಿಯುತ ಬಂದುಬಿಡು
ಕೆಣಕುವುದಿಲ್ಲ ಮೋಸವಿದಲ್ಲ
ಕೇಕೇ ಗಾನವ ಮಾಡುತಿರು
ಕೈಯಲ್ಲಿರುವ ಹಣ್ಣನು ಕೊಡುವೆ
ಕೊರಳನು ಬಾಗುತ ಬಾ ಬಾ ಬಾ
ಕೋರಿಕೆಯನ್ನ ನೀ ಸಲಿಸೆನ್ನ
ಕೌತುಕ ಪಡುವೆನು ನಿನಗಾಗಿ
ಕಂದನ ಕರೆಯಿದು ಪ್ರೇಮದ ಕುರುಹಿದು
ಕಃ ಎನ್ನದೆ ಬಾ ಕುಣಿ ಕುಣಿ ।।
(ಈ ಎರಡೂ ಕವಿತೆಗಳನ್ನು, ಮೊನ್ನೆ ಊರಿಗೆ ಹೋಗಿದ್ದಾಗ ಹಳೇ ಪುಸ್ತಕವೊಂದರಲ್ಲಿ ಓದಿದೆ. ಇವನ್ನು ಬರೆದ ಕವಿ ದಿವಂಗತ ಮುಂಡಾಜೆ ರಾಮಚಂದ್ರ ಭಟ್. 1947ರಿಂದ ಸುಮಾರು 1965ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ರಾಮಚಂದ್ರ ಮಾಷ್ಟ್ರು ಸಂಗೀತದಲ್ಲೂ ಪರಿಣತರಾಗಿದ್ದರಂತೆ. ಮಕ್ಕಳಿಗಾಗಿ ಸುಂದರ ಕವಿತೆಗಳನ್ನು ರಚಿಸಿದ ಇವರ ಪ್ರಕಟಿತ ಸಂಕಲನಗಳೆಂದರೆ 'ತಮ್ಮನ ಕವಿತೆಗಳು", 'ಪೀಪೀ", 'ಪುಟ್ಟನ ಪಿಟೀಲು" ಇತ್ಯಾದಿ. ಇವರ 'ರೈಲು ಪ್ರವಾಸದ ಕನಸು" ಎಂಬ ಒಂದು ಕವಿತೆಯಂತೂ ಬಹಳ ಚೆನ್ನಾಗಿದೆ.)
ಗುರುವಾರ, ಡಿಸೆಂಬರ್ 09, 2021
ನಮ್ಮ ನಂಬಿಕೆಗಳು 12
೧೨) ನಾವೇಕೆ ಉಪವಾಸವಿರುತ್ತೇವೆ?
ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈದ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರ ಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ನಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿ ಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ. 80%ರಷ್ಟು ನೀರು ಮತ್ತು ಶೇ. 20%ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿ ಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿ ಪಡಿಸುತ್ತದೆ.
ಸೋಮವಾರ, ಡಿಸೆಂಬರ್ 06, 2021
ಶುಕ್ರವಾರ, ಡಿಸೆಂಬರ್ 03, 2021
ಬಿರ್ಲಾ / ಬರ್ಲಾ
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು ನೀನೇ ನನ್ನ ಟಾಟಾ ಬಿರ್ಲಾ..
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು ನೀನೇ ನನ್ನ ಟಾಟಾ ಬಿರ್ಲಾ..
ಆದರೆ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು ಟಾಟಾ ಬರ್ಲಾ..
(ವಾಹ್ ವಾಹ್)
ಮಂಗಳವಾರ, ನವೆಂಬರ್ 09, 2021
ನಮ್ಮ ನಂಬಿಕೆಗಳು 11
೧೧) ಸೂರ್ಯ ನಮಸ್ಕಾರ:
ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳ ಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿ ಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗ ಪಡಿಸಿ ಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
ಶನಿವಾರ, ನವೆಂಬರ್ 06, 2021
ಸೋಮವಾರ, ನವೆಂಬರ್ 01, 2021
ಭಾನುವಾರ, ಅಕ್ಟೋಬರ್ 31, 2021
ನಮ್ಮ ಕನ್ನಡ ನಾಡು
ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು
ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು
ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ
ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ
ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ
ಗುರುವಾರ, ಅಕ್ಟೋಬರ್ 14, 2021
ಹಬ್ಬ
ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು
1.ಶೈಲಪುತ್ರಿ - ಪರ್ವತ ರಾಜ ಹಿಮಾಲಯದ ಮಗಳಾದ ಪಾರ್ವತಿಯ ರೂಪದಲ್ಲಿ ಶೈಲಪುತ್ರಿ ದೇವಿಯನ್ನು ನವರಾತ್ರಿಯ ಮೊದಲನೇ ದಿನ ಪೂಜಿಸಲಾಗುತ್ತದೆ. ಆಕೆ ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಹಿಮಾಲಯದ ಮೇಲೆ ಕುಳಿತಿರುವ ನಂದಿಯ ಮೇಲೆ ಈಕೆ ಸವಾರಿ ಮಾಡುತ್ತಾಳೆ. ಈ ವೃಷಭ ವಾಹನವು ಶಿವನ ರೂಪವಾಗಿದೆ. ತೀವ್ರ ತಪಸ್ಸು ಮಾಡುವ ಶೈಲಪುತ್ರಿ ಎಲ್ಲಾ ಕಾಡು ಪ್ರಾಣಿಗಳ ರಕ್ಷಕಿ ಕೂಡ ಆಗಿದ್ದಾಳೆ.
2.ಬ್ರಹ್ಮಚಾರಿಣಿ - ನವದುರ್ಗೆಯ 9 ಅವತಾರಗಳಲ್ಲಿ ಬ್ರಹ್ಮಚಾರಿಣಿ ಎರಡನೇ ಅವತಾರವಾಗಿದೆ. ನವರಾತ್ರಿಯ ಎರಡನೇ ದಿನ ಅವಳನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿ ಈ ಪ್ರಪಂಚದ ಎಲ್ಲಾ ಸ್ಥಿರ ಮತ್ತು ಚರ ಜ್ಞಾನವನ್ನು ಬಲ್ಲವಳು. ಆಕೆಯ ರೂಪವು ಬಿಳಿ ಬಟ್ಟೆಯಲ್ಲಿ ಸುತ್ತಿದ ಹುಡುಗಿಯ ರೂಪದಲ್ಲಿದ್ದು, ಒಂದು ಕೈಯಲ್ಲಿ ಅಷ್ಟದಳ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಇದನ್ನು ಅಕ್ಷಯಮಾಲಾ ಮತ್ತು ಕಮಂಡಲ ಧಾರಿಣಿ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ಅವಳು ತನ್ನ ಸರ್ವಜ್ಞ ಜ್ಞಾನವನ್ನು ನೀಡುವ ಮೂಲಕ ತನ್ನ ಭಕ್ತರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. ಬ್ರಹ್ಮಚಾರಿಣಿಯ ರೂಪವು ತುಂಬಾ ಸರಳ ಮತ್ತು ಭವ್ಯವಾಗಿದೆ. ಇತರ ದೇವತೆಗಳಿಗೆ ಹೋಲಿಸಿದರೆ, ಅವಳು ಸೌಮ್ಯ, ಕೋಪ ಮುಕ್ತ ಮತ್ತು ಶೀಘ್ರವಾಗಿ ವರವನ್ನು ನೀಡುವವಳು.
3.ಚಂದ್ರಘಂಟ,
4.ಕೂಷ್ಮಾಂಡ,
5.ಸ್ಕಂದಮಾತೆ,
6.ಕಾತ್ಯಾಯಿನಿ,
7.ಕಾಳರಾತ್ರಿ,
8.ಮಹಾಗೌರಿ,
9.ಸಿದ್ಧಿದಾತ್ರಿ.
ಶನಿವಾರ, ಅಕ್ಟೋಬರ್ 09, 2021
ನಮ್ಮ ನಂಬಿಕೆಗಳು 10
೧೦) ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ?
ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟ ಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...