ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಎಲ್ಲಿ ಹೋಗಿರುವೆ ನೀನು ಕಾಣದಾದೆಯೇ..
ನಿನ್ನ ತುಂಬು ಗಭ೯ದಿಂದ ..
ಹೊರಬಂದ ನಿನ್ನ ಕಂದ..
ಅಳುವ ನಿನ್ನ ಕೂಸಿನ ನೋಡೆ..
ತೋರೆ ನಿನ್ನ ಪ್ರೀತಿಯ ಭಾವ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಬಾಳಿನಲ್ಲಿ ಒಂಟಿ ನಾನು..
ಕರುಣೆ ಬಾರದೇನೆ ನಿನಗೆ..
ಕತ್ತಲಲ್ಲಿ ನೂಕಿ ನನಗೆ..
ಎತ್ತ ಹೋದೆ ಬಾರದೆ ಕೊನೆಗೆ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಯಾವ ಜನ್ಮದ ಪಾಪದಲ್ಲೊ..
ಮಿಂದ ನನಗೆ ನೋವಿನ ಶಾಪ..
ಬಂದು ಕೇಳೆ ನನ್ನದೆಯ ಅಳುವ..
ಹೇಳಲಾರೆ..ತಾಳಲಾರೆ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಕೃಪೆ: ಭಾಗ್ಯಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.