ಗುರುವಾರ, ಜೂನ್ 22, 2017

ಅವಳೇ ಅಮ್ಮ


ಇಂದು ಮದರ್ಸ್ ಡೇ ಇಂಗ್ಲಂಡಿನಲ್ಲಿ. ಅದಕ್ಕೆಂದೇ 'ಮೈ ಮದರ್' ಪದ್ಯದ ಸ್ಪೂರ್ತಿಯಿಂದ ಒಂದು ಚಿಕ್ಕ ಪದ್ಯ:

ಯಾರು ನನ್ನ ಹೊತ್ತು ಹೆತ್ತು ಹಾಲು ಕುಡಿಸಿ ನಕ್ಕಳೋ ನಿದ್ದೆಯಲ್ಲು ಮುದ್ದು ಮಾಡಿ ಜೋ ಜೋ ಲಾಲಿ ಅಂದಳೋ ಅವಳೇ ಅಮ್ಮ  
ಜ್ವರದ ಕಾವು ವಾಂತಿ ಭೇದಿ ಹೊಟ್ಟೆನೋವು ಕಾಡಲು ನಿದ್ದೆ ಬಿಟ್ಟು ಹಗಲು ರಾತ್ರಿ ನನ್ನ ನೋಡಿಕೊಂಡಳು ಅವಳೇ ಅಮ್ಮ
ಯಾರು ನನ್ನ ತೊದಲುಮಾತು ಅರ್ಥಮಾಡಿಕೊಂಡಳೋ ಅಳುವ ಅಳಿಸಿ ನಗುವ ಬರಿಸಿ ಕೈಯ ತುತ್ತ ಕೊಟ್ಟಳೋ ಅವಳೇ ಅಮ್ಮ
ಅಮ್ಮನಂಥ ಗುಮ್ಮನಿಲ್ಲ ಅಮ್ಮನಂಥ ಗೆಳೆಯನಿಲ್ಲ
ಅಮ್ಮನಂಥ ದೇವರಿಲ್ಲ ದೇವರೂ ಹಾಗಂತಾನಲ್ಲ! ಅಮ್ಮ ನಮ್ಮಮ್ಮ
ಕಾಮೆಂಟ್‌ಗಳಿಲ್ಲ: