ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಬುಧವಾರ, ನವೆಂಬರ್ 18, 2015
ಸೋಮವಾರ, ನವೆಂಬರ್ 16, 2015
ಶನಿವಾರ, ನವೆಂಬರ್ 14, 2015
ಸಿದ್ದೇಶ್ವರ ದೇವಾಲಯ
1997ರಲ್ಲಿ
ಜಿಲ್ಲೆಯಾಗಿ ಪರಿವರ್ತನೆಯಾದ ಹಾವೇರಿ ಐತಿಹಾಸಿಕವಾಗಿಯೂ ಪ್ರಸಿದ್ಧ ಜಿಲ್ಲೆ. ಜಿಲ್ಲೆಯ
ಕದರ ಮಂಡಲಗಿಯಲ್ಲಿ
ದ್ವಾಪರ
ಯುಗದಲ್ಲಿ ಜನಮೇಜಯ ಕಟ್ಟಿಸಿದ ಮಾರುತಿ ದೇವಾಲಯವಿದ್ದರೆ, ಕಾಗಿನೆಲೆಯಲ್ಲಿ
ಕನಕದಾಸರ ಆರಾಧ್ಯದೈವ ಆದಿಕೇಶವ ದೇವಾಲಯವಿದೆ.
ಇದಲ್ಲದೆ ಮೋಟೆಬೆನ್ನೂರಿನಲ್ಲಿ
ಮಲ್ಲಿಕಾರ್ಜುನ ದೇವಾಲಯ, ಸಂಗೂರಿನಲ್ಲಿ ಈಶ್ವರ, ವೀರಭದ್ರ ದೇವಾಲಯ,
ಹಿರೇಬೆಂಡಿಗೇರಿಯಲ್ಲಿ ಕಾಳಪ್ಪನ ದೇಗುಲ, ಹುಲಗೂರಿನಲ್ಲಿ ಸಿದ್ಧಲಿಂಗ ದೇವಾಲಯಗಳಿವೆ.
ಜಿಲ್ಲೆಯ ಅಬ್ಬಲೂರು ಸರ್ವಜ್ಞ ಕವಿ ಹುಟ್ಟಿದ ಊರು ಎಂದು ಹೇಳಲಾಗಿದೆ. ಸಂತ ಶಿಶುನಾಳ
ಷರೀಪರು ಶಿಗ್ಗಾಂವಿಯ ಬಾಡದಲ್ಲಿ ಹುಟ್ಟಿದವರು.
ಜಿಲ್ಲಾಕೇಂದ್ರ ಹಾವೇರಿ ಹಿಂದೆ
ಪಾವರಿ, ಹಾವರಿ,
ಹಾಹರಿ, ನಳಪುರಿ ಎಂಬ ಹೆಸರಿನಿಂದ
ಕರೆಸಿಕೊಂಡಿತ್ತು. ಚಾಳುಕ್ಯ, ಕಳಚುರಿ,
ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಹಾವೇರಿ ಪ್ರಸಿದ್ಧ
ನಗರವಾಗಿತ್ತೆಂದು ಇತಿಹಾಸ ಹೇಳುತ್ತದೆ.
ಪಟ್ಟಣದಲ್ಲಿ ಸಿದ್ದೇಶ್ವರ,
ನರಸಿಂಹ, ವೀರಭದ್ರ ಮತ್ತು ಕಲ್ಲೇಶ್ವರ
ದೇವಸ್ಥಾನಗಳಿವೆ. ಈ
ಪೈಕಿ ಸಿದ್ದೇಶ್ವರ
ದೇವಸ್ಥಾನ ಶಿಲ್ಪಕಲೆಯ ದೃಷ್ಟಿಯಿಂದ ಭವ್ಯವಾಗಿದೆ. ಕಲ್ಯಾಣ ಚಾಳುಕ್ಯರ ಕಾಲದ
ವಾಸ್ತುಶಿಲ್ಪವನ್ನೊಳಗೊಂಡ ಈ ದೇಗುಲದ ಭಿತ್ತಿಗಳ ಸಾಲು ಪಟ್ಟಿಕೆಗಳಲ್ಲಿರುವ ಸೂಕ್ಷ್ಮ
ಕುಸುರಿ ಕೆತ್ತನೆ ಆಕರ್ಷಕವಾಗಿದೆ.
ದೇಗುಲದ ಗೋಪುರ ಏಕಕೂಟವಾಗಿದ್ದು,
ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳ ಸಂಗಮವಾಗಿ ಅಚ್ಚುಕಟ್ಟಾಗಿದೆ.
ದೇವಾಲಯದಲ್ಲಿ ಉಮಾಮಹೇಶ್ವರ,
ಮಹಾಲಕ್ಷ್ಮಿ, ಸೂರ್ಯ ಮತ್ತು
ನಾಗ-ನಾಗಿಣಿ ವಿಗ್ರಹಗಳಿವೆ. ಶಿವಲಿಂಗವನ್ನು ಹಿಡಿದಿರುವ ವಿಷ್ಣುವಿನ ಮೂರ್ತಿ ಹಾಗೂ
ಅಷ್ಟ ಮಾತೃಕೆಯರ ನೃತ್ಯಭಂಗಿಯ ಶಿಲ್ಪಗಳು ಅಪರೂಪದ್ದಾಗಿವೆ.
ಈ ದೇವಾಲಯದಲ್ಲಿಯೂ ಮುಖಮಂಟಪ,
ಸುಖನಾಸಿ, ಭುವನೇಶ್ವರಿ ಹಾಗೂ ಗರ್ಭಗೃಹವಿದೆ.
ನರಸಿಂಹ ದೇವಾಲಯದ ಭಮುಭಾಗದಲ್ಲಿ
ಕಲಾತ್ಮಕ ಕಂಬಗಳಿವೆಯಾದರೂ ಭಿತ್ತಿಗಳು ಸಾದಾ ಕಲ್ಲಿನ ನಿರ್ಮಾಣವಾಗಿದ್ದು ಕಲಾತ್ಮಕ
ವಿಶೇಷತೆಗಳಿಲ್ಲ. ಆದರೆ ತಳಪಾಯದ ಕಲ್ಲಿನ ಮೇಲಿರುವ ಪಟ್ಟಿಕೆಯಲ್ಲಿ ಸೂಕ್ಷ್ಮ
ಕೆತ್ತನೆಗಳಿವೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಗುರುವಾರ, ನವೆಂಬರ್ 12, 2015
ಕನ್ನಡಿಗರ ಸರ್ವೇ
ಓ ನಮ್ಮ ಕನ್ನಡಿಗರೇ
ಇಲ್ಲಿ ಕೇಳಿ,
ಇದು ಒಂದು ಕನ್ನಡಿಗರ ಸರ್ವೇ,
ತಪ್ಪದೇ ನಿಮ್ಮ ಕಾಮೆಂಟ್ ಮಾಡಿ,
ಓ ನಮ್ಮ ಕನ್ನಡ ಬಾಂದವರೇ ಮರೆಯದಿರಿ,
..
ನಿಮ್ಮ ಕಾಮೆಂಟ್ ಹೀಗಿರಲಿ, ಅದರಲ್ಲಿ ಪ್ರಸ್ತೂತ ನೀವೂ ವಾಸಿಸುವ ದೇಶ ಮತ್ತು ರಾಜ್ಯ ತಿಳಿಸಿ
ಉದಾ : ಕರ್ನಾಟಕ, ಭಾರತ
ಸೂಚನೆ : ಇಲ್ಲಿ ಕನ್ನಡಿಗರು ನಮ್ಮಿಂದ ಎಷ್ಟು ಅಂತರದಲ್ಲಿದ್ದರೂ, ಅವರು ಕನ್ನಡಿಗರಾಗಿದ್ದಾರೆ ಎಂದು ನಮಗೆ ತಿಳಿತುವ ಆಸೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...

.jpg)
.jpg)