ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಏಪ್ರಿಲ್ 22, 2020

ತಾಯಿ ಅವಳು (That's the MOTHER)

ತಾಯಿಯ ಆ ರೂಪ
ಮಮತೆಯ ಪ್ರತಿರೂಪ 
ಅವಳ ಜನ್ಮವು ಅಪರೂಪ
ಮನಸದು ರಾತ್ರಿಯ ಕೈದೀಪ...

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು 
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು 
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧

ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು 
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು 
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು 
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨

ಅಪರೂಪ ಮಾಣಿಕ್ಯ 
ಬಾಳಿನ ಸೌಭಾಗ್ಯ 
ಅಮ್ಮ ನೆಂದು ಮರೆಯದಿರು 
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩

ಅಮ್ಮ , माँ , అమ్మ, Mother , அம்மா, അമ്മ
ಕೃಪೆ:  **

ಶನಿವಾರ, ಏಪ್ರಿಲ್ 18, 2020

ಗೂಗಲಿನ 8 ನೇ ಪುಟದ ವಿಚಿತ್ರ - teapot

ನಾನು ಟೀ ಪಾಟ್
ವಿನಂತಿಸಿದ ಘಟಕದ ದೇಹವು ಚಿಕ್ಕದಾಗಿದೆ ಮತ್ತು stout.
ನನಗೆ ಸಲಹೆ ನೀಡಿ ಮತ್ತು ನನ್ನನ್ನು ಸುರಿಯಿರಿ.
 spn3187 teapot page

ಗುರುವಾರ, ಏಪ್ರಿಲ್ 16, 2020

ಮಗ ಅಥವಾ ಮಗಳು ಯಾರು ಶ್ರೇಷ್ಠ ?

ಮಗ ಮಗಳು
ರಾಗ ಅನುರಾಗ
ಬುದ್ದಿ ಸಮೃಧ್ಧಿ
ಸಾಹಿತ್ಯ ಸಂಗೀತ
ಪ್ರೀತಿ ವಾತ್ಸಲ್ಯ
ಧಣಿ ಧ್ವನಿ
ಮನೆತನ ಮರ್ಯಾದೆ
ಚೇತನ ಸಾಂತ್ವನ
ಗಣ್ಯ ಧನ್ಯ
ಧೈರ್ಯ ಐಶ್ವರ್ಯ
ಸಿಹಿ ಮಧುರ
ಝೇಂಕಾರ ಮಮಕಾರ
ಇಂಪು ತಂಪು
ಸೊಬಗು ಸೌಂದರ್ಯ
ದೃಷ್ಟಿ ಸೃಷ್ಟಿ
ಕಿಮ್ಮತ್ತು ಕಿಸ್ಮತ್ತು
ಹೃದಯ ಮಿಡಿತ
ಕಣ್ಣು ಬೆಳಕು
ಮೃದಂಗ ಅಂತರಂಗ
ಆತ್ಮ ಆತ್ಮಸಾಕ್ಷಿ
ಸ್ವರ್ಗ ಮೋಕ್ಷ
ಕೃಷ್ಣ ಯಶೋಧೆ
ವಾರಸ್ದಾರ ಹರ್ಷಧಾರ
ಸಂಸ್ಕಾರ ಸಂಸ್ಕೃತಿ
ಜೀವಜಲ ಜೀವನದಿ
ಮಗ ತಾಯಿ
ಮದುವೆಯವರೆಗೆ ಕೊನೆಯವರೆಗೆ


ಹೆಣ್ಣು ಹೆತ್ತೊಡಲ ಹೆಮ್ಮೆಯಾಗಲಿ, ಅದುವೇ ನನ್ನ ಕಳಕಳಿ.

(ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 & https://spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ)


ಮಂಗಳವಾರ, ಏಪ್ರಿಲ್ 14, 2020

ಕೊರೋನಾ ಜಾಗೃತಿ


ಕೊರೋನಾವನ್ನು ಅಲಕ್ಷ ಮಾಡದಿರಿ, ನಿಮ್ಮ ಒಂದು ನಿರ್ಲಕ್ಷ, ಹಲವು ಜೀವಗಳಿಗೆ ಕುತ್ತು.... 
(ನಿಮ್ಮ ಮನೆಯವರು ಕೂಡ ಕೊರೋನಾ ತುತ್ತಾಗಬಹುದು )

ಮನೆಯಲ್ಲಿಯೇ ಇರು,
ನೀವೂ ಬದುಕಿ,
ನಿಮ್ಮವರನ್ನು ಬದುಕಿಸಿ....

1.. ಜಾಹೀರಾತು

2.ಜಾಹೀರಾತು