ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಅಕ್ಟೋಬರ್ 27, 2025

ವಿನಂತಿ... (ಕವನ)

ಇಲ್ಲಿ ನಾನೂ
ಎನ್ನುವುದು ಗೌಣ.

ನಮ್ಮ ಬರಹಕ್ಕೆ
ನೀಡಿ ಸನ್ಮಾನ.

ಬರಹದೆದೆಯ ಮೇಲೆ
ಏಕೆ ನ/ನಿಮ್ಮ ಗತ್ತು ಗಮ್ಮತ್ತು.

ಒಮ್ಮೆ ಓದಿ ಹಾಕಿರಿ
ತಮ್ಮ ಅಭಿಪ್ರಾಯ.

ಸುಃಖಾ ಸುಮ್ಮನೆ
ಬೇಡ ಹೊಗಳಿಕೆಯ ಶರಾ.

ಇರಲಿ ಬರಹಕ್ಕೊಂದು
ನಿಜವಾದ ಅಭಿಪ್ರಾಯ.

ಓದುಗರು ನೀವು
ಬರೆಯುವವರು ನಾವು.

ಬರಹ ಮುಕುಟಕೆ
ಓದುಗರೇ ಕಳಶಪ್ರಾಯ.....    
                                                    @ಅನಾಮದೇಯ

ಶನಿವಾರ, ಅಕ್ಟೋಬರ್ 18, 2025

ಗೂಗಲ ಮೆಟ್ರೊನೋಮ್ ಪುಟದ ವಿಚಿತ್ರಗಳು (Google merto nome Pages) 61

Google ನಲ್ಲಿ ಹೀಗೆ ಟೈಪ್ ಮಾಡಿ: 

       "merto nome " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಗುಂಡಿ (Play Button) " ಕಾಣುತ್ತದೆ. ನೀವು ಆ ವೃತ್ತಾಕಾರದ ಗುಂಡಿ (Play Button) ಚಿತ್ರವನ್ನು ಮುಟ್ಟಿದಾಗ ನಿಮಗೆ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ ಗೆರೆ ನಿಮ್ಮ ಪರದೆಯಲ್ಲಿ ಕಾಣುತ್ತದೆ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಹೆಚ್ಚಿನ ಅಥವಾ ಕಡಿಮೆ  ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಟಿಕ್ ಟಿಕ್ ಎಂದು ಶಬ್ದ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ... 
(ಕಿವಿ ಮಾತು: ಈ ಶಬ್ದದಿಂದ ವೈದ್ಯರು ನಿಮ್ಮ ಆರೋಗ್ಯವನ್ನು ತಿಳಿಯುತ್ತಾರೆ.)


ಮೆಟ್ರೊನೋಮ್ ಸಕ್ರಮಗೊಳಿಸಬಲ್ಲ ಗತಿಯಲ್ಲಿ, ಪುನರಾವರ್ತಿತ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ, ಯಾಂತ್ರಿಕ ಇಲ್ಲವೆ ವಿದ್ಯುದುಪಕರಣ. ಇದು ಲೋಲಕದಂತೆ ಇದೆ. ಮೆಟ್ರೋನ್ (ಎಂದರೆ ಮಾಪನ) ಮತ್ತು ನೋಮೋಸ್ (ಎಂದರೆ ನಿಯಮ) ಎಂಬ ಗ್ರೀಕ್ ಶಬ್ದಗಳಿಂದ ಕೂಡಿ ಆಗಿರುವ ಸಂಯುಕ್ತಪದ ಮೆಟ್ರೊನೋಮ್. ಇದನ್ನು ಜರ್ಮನಿಯ ಯೋಹಾನ್ ಮ್ಯಾಲ್ಜೆಲ್ ಎಂಬವ ಉಪಜ್ಞಿಸಿದ (1816). ಇದರಲ್ಲಿಯ ಲೋಲಕವನ್ನು ತಿರುಗಣಿಯ ಮೇಲೆ ಅಳವಡಿಸಲಾಗಿದೆ.

ಬುಧವಾರ, ಅಕ್ಟೋಬರ್ 08, 2025

ವಾಟ್ಸಾಪ್ 🆚 ಅರಟ್ಟೈ

                                           vs     
    ಭಾರತದಲ್ಲಿ ವಾಟ್ಸಾಪ್‌ಗಾಗಿ ಹೊಸ ಸ್ಪರ್ಧೆ ಇದೆ. ಅಥವಾ ಕನಿಷ್ಠ ಪಕ್ಷ ಈಗ ಹಾಗೆ ಕಾಣುತ್ತಿದೆ. ಈ ಪ್ರತಿಸ್ಪರ್ಧಿ ಜೋಹೊ ರಚಿಸಿದ ಅರಟ್ಟೈ ಅಪ್ಲಿಕೇಶನ್. ಈ ಅಪ್ಲಿಕೇಶನ್ ಮೊದಲು 2021 ರಲ್ಲಿ ಆಪ್ ಸ್ಟೋರ್‌ಗಳಿಗೆ ಪ್ರವೇಶಿಸಿದರೂ, ಅದು ಈಗ ಭಾರತ ಸರ್ಕಾರದ ಅನುಮೋದನೆಯಿಂದ ಹಾಗೂ ಸಾಮಾಜಿಕ ಮಾಧ್ಯಮದ ಪ್ರಚಾರ ಮತ್ತು ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಎಂಬ ಸ್ಥಾನಮಾನ ಕಾರಣ. ಇದು ಇತ್ತೀಚೆಗೆ ಜನಪ್ರಿಯತೆಯಲ್ಲಿ ಭಾರಿ ಏರಿಕೆ ಕಂಡಿದೆ. ವಾಸ್ತವವಾಗಿ ಬಳಕೆದಾರರ ಸೈನ್-ಅಪ್‌ಗಳು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಟ್ರಾಫಿಕ್‌ನಲ್ಲಿ 100 ಪಟ್ಟು ಏರಿಕೆಯೊಂದಿಗೆ, ಇದು ಮೆಟಾದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ಗೆ ಸವಾಲು ಹಾಕಬಹುದು ಎಂದು ತೋರುತ್ತದೆ. ಜೊಹೊದ ಮೇಡ್ - ಇನ್ - ಇಂಡಿಯಾ Google (Noto Color Emoji 16.0) (ಇದರ ಹಿಂದೆ ಜೊಹೊ ಕಾರ್ಪೊರೇಷನ್‌ನ ಸಂಸ್ಥಾಪಕ ಶ್ರೀಧರ್ ವೆಂಬು ಇದ್ದಾರೆ. ಅವರು ತಮಿಳುನಾಡಿನ ತಂಜಾವೂರಿನವರು. ಜನನ 1968 ಇವರು ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಫೋರ್ಬ್ಸ್ ಪ್ರಕಾರ , ಅವರು 2024 ರ ಹೊತ್ತಿಗೆ $5.85 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ 39 ನೇ ಶ್ರೀಮಂತ ವ್ಯಕ್ತಿ. ಅವರಿಗೆ 2021 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು).

ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ
ಬಹುಸಾಧನ ಬೆಂಬಲ, ಪಾಕೆಟ್ ಮತ್ತು ಜಾಹೀರಾತು ಮುಕ್ತ ಬಳಕೆಯಂತಹ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್‌ಗೆ ಸವಾಲಾಗಿ ವೇಗವಾಗಿ ಹೊರ ಹೊಮ್ಮುತ್ತಿದೆ. ಎರಡು ಮೆಸೇಜಿಂಗ್ ಅಪ್ಲಿಕೇಶನ್ ಪ್ರತಿಸ್ಪರ್ಧಿಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ.

ಚಾನೆಲ್‌ಗಳು ಮತ್ತು ಕಥೆಗಳು: ಅರಟ್ಟೈ & ವಾಟ್ಸಾಪ್: ಕಥೆಗಳು ಮತ್ತು ಪ್ರಸಾರ ಶೈಲಿಯ ಚಾನಲ್‌ಗಳನ್ನು ಒದಗಿಸುತ್ತದೆ. ಸಂದೇಶ ಕಳುಹಿಸುವಿಕೆಯನ್ನು ಸಾಮಾಜಿಕ ಮಾಧ್ಯಮ ಅಂಶಗಳೊಂದಿಗೆ ವಿಲೀನಗೊಳಿಸುತ್ತದೆ.

ಬಹುಸಾಧನ ಪ್ರವೇಶ: ಅರಟ್ಟೈ ಆಂಡ್ರಾಯ್ಡ್ ಟಿವಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಾಧನಗಳಲ್ಲಿ ಪ್ರವೇಶವನ್ನು ನೀಡುತ್ತದೆ, ಇವುಗಳನ್ನು ವಾಟ್ಸಾಪ್ ಪ್ರಸ್ತುತ ಬೆಂಬಲಿಸುವುದಿಲ್ಲ. ಬಳಕೆದಾರರು ತಮ್ಮ ಅರಟ್ಟೈ & ವಾಟ್ಸಾಪ್ ಖಾತೆಯನ್ನು ಏಕಕಾಲದಲ್ಲಿ ಐದು ಸಾಧನಗಳಲ್ಲಿ ಬಳಸಬಹುದು.

ಪ್ರವೇಶ ಸಾಧ್ಯತೆ : ಅರಟ್ಟೈ ಅನ್ನು ಹಗುರವಾಗಿರಲು ಮತ್ತು ಕಡಿಮೆ ಮೆಮೊರಿ ಸ್ಮಾರ್ಟ್‌ಫೋನ್‌ಗಳು ಮತ್ತು ಹಳೆಯ 2G/3G ನೆಟ್‌ವರ್ಕ್‌ಗಳಲ್ಲಿಯೂ ಸಹ ಸರಾಗವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಬಳಕೆದಾರರಿಗೆ ಮತ್ತು ಬಜೆಟ್ ಸಾಧನಗಳನ್ನು ಹೊಂದಿರುವವರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ. ವಾಟ್ಸಾಪ್ ಹೋಲಿಸಿದರೆ, ಹೆಚ್ಚಿನ ಡೇಟಾ ಮತ್ತು ಸಿಸ್ಟಮ್ ಸಂಪನ್ಮೂಲಗಳನ್ನು ಬಳಸುತ್ತದೆ.

ಪಾಕೆಟ್ ವೈಶಿಷ್ಟ್ಯ: ಅರಟ್ಟೈ ಪಾಕೆಟ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಬಳಕೆದಾರರು ವೈಯಕ್ತಿಕ ಸಂಘಟನೆಗಾಗಿ ಫೋಟೋಗಳು, ವೀಡಿಯೊಗಳು, ಟಿಪ್ಪಣಿಗಳು, ಜ್ಞಾಪನೆಗಳು ಮತ್ತು ಇತರ ಫೈಲ್‌ಗಳನ್ನು ಸಂಗ್ರಹಿಸಬಹುದಾದ ಮೀಸಲಾದ ಸ್ವಯಂ ಚಾಟ್ ಸ್ಥಳ. ಇದು ವೀಡಿಯೊ ಸಭೆಗಳನ್ನು ನಿಗದಿಪಡಿಸಲು ಮೀಸಲಾದ "ಸಭೆಗಳು" ಟ್ಯಾಬ್ ಅನ್ನು ಸಹ ಹೊಂದಿದೆ. ವಾಟ್ಸಾಪ್ ಪ್ರಸ್ತುತ ಹೊಂದಿರದ ವೈಶಿಷ್ಟ್ಯ. ಆದಾಗ್ಯೂ, ವಾಟ್ಸಾಪ್ 'ನೀವು' ಚಾಟ್ ವಿಂಡೋವನ್ನು ಒದಗಿಸುತ್ತದೆ. ಅಲ್ಲಿ ಬಳಕೆದಾರರು ತಮ್ಮೊಂದಿಗೆ ಚಾಟ್ ಮಾಡಬಹುದು ಮತ್ತು ಮಾಧ್ಯಮವನ್ನು ಉಳಿಸಬಹುದು.

█▓▒░⯮ ಕೃಪೆ: 🙶 Google 🙷 ░▒▓█

ಶುಕ್ರವಾರ, ಅಕ್ಟೋಬರ್ 03, 2025

ಕಲ್ಲು / ಮನಸ್ಸು

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
||  ವಾವ್ಹಾ   ||
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
 ||  ವಾವ್ಹಾ   ||
ಆದರೆ
ನಿನ್ನ ಒಮ್ಮೆ ನೆನೆದು 
ನನ್ನ ಮನಸ್ಸು ಮೆತ್ತಗಾಯಿತಲ್ಲ...

1.. ಜಾಹೀರಾತು

2.ಜಾಹೀರಾತು