fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಮೇ 29, 2023

ABCDಯ ಹಾಸ್ಯ ಕಥೆ

"A B C D" ಯ ಕಥೆಯಲ್ಲಿ
"B" ಗೆ ತುಂಬಾ ಚಳಿ, ಯಾಕೆ ಗೊತ್ತಾ ?
ಅದು "AC" ಮಧ್ಯೆ ಇದೆ ಅದಕ್ಕೆ.

"C" ತುಂಬಾ ಕೆಮ್ಮುತ್ತೆ, ಯಾಕೆ ಗೊತ್ತಾ ?
ಅದು "BD" ಮಧ್ಯೆ ಇದೆ ಅದಕ್ಕೆ.

"B" ಸಿಕ್ಕಾಪಟ್ಟೆ ಫಿಲ್ಮ್ ನೋಡುತ್ತೆ ಯಾಕಂದ್ರೆ
"CD" ಅದರ ಹಿಂದೆ ಇರುತ್ತೆ.
"D" ಯಾವಾಗಲೂ ಬಿಸಿ (HOT) ಆಗಿರುತ್ತೆ ಯಾಕಂದರೆ
"BC" ಅದರ ಮುಂದೆ ಇರುತ್ತೇ.....

ಶುಕ್ರವಾರ, ಮೇ 19, 2023

ಗೂಗಲ ಪುಟದ ವಿಚಿತ್ರಗಳು (Google loco Pages) 33



Google ನಲ್ಲಿ ಟೈಪ್ ಮಾಡಿ: “https://thatsloco.com” ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ. ನಂತರ ಗೂಗಲ್ ಹುಡುಕಾಟ ಫಲಿತಾಂಶ ಚಿತ್ರ ಕಾಣುತ್ತದೆ.   ಇದೇ ಗೂಗಲ್ ನ ಇನ್ನೊಂದು ಮೋಜು ಪುಟ....

ಬುಧವಾರ, ಮೇ 10, 2023

ಅಮ್ಮಂದಿರ ದಿನದ ಕಿರು ಮಾಹಿತಿ

`ಅಮ್ಮಂದಿರ ದಿನ'!
" ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?
ಮತ್ತೊಂದು `ಅಮ್ಮಂದಿರ ದಿನ'! ಎಲ್ಲೆಡೆ ಕಾರ್ಡ್ ಕೊಳ್ಳುವ, ಹೂವಿನಿಂದ ವಜ್ರದವರೆಗೂ ಶಕ್ತ್ಯಾನುಸಾರ ಕೊಡುಗೆ ನೀಡಿ ಇನ್ನೊಂದು `ಅಮ್ಮಂದಿರ ದಿನ'ದವರೆಗೆ ಅಮ್ಮನನ್ನು ಮರೆತುಬಿಡುವ ಸಂಭ್ರಮ!
ಅಮ್ಮ ಸತ್ತ ಮೇಲೆ ಶ್ರಾದ್ಧ ಮಾಡಿ ನೆನಪಿಸಿಕೊಳ್ಳುವ (ಹೆಣ್ಣು ಮಕ್ಕಳಿಗೆ ಅದೂ ಇಲ್ಲ!) ಅಥವಾ `ಬೂದಿ ಬುಧವಾರ'ದಂದೋ, `ಮಹಾಲಯ ಅಮಾವಾಸ್ಯೆ'ಯಂದೋ ಪಿತೃಗಳಿಗೆ ತರ್ಪಣ ನೀಡುವ ನಮ್ಮ ಸಂಪ್ರದಾಯಗಳನ್ನೂ ಮೀರಿ ಇಂದು ಬೆಳೆದು ನಿಂತಿರುವ `ಮದರ್ಸ್‌ ಡೇ' ಬಂದಿದ್ದಾದರೂ ಎಲ್ಲಿಂದ? ದೂರದ ಅಮೆರಿಕೆಯಿಂದ. ಪಾಶ್ಚಾತ್ಯ ಜಗತ್ತಿನಲ್ಲೂ ಇರಬಹುದಾದ ಮೌಲ್ಯಯುತ ಜೀವನ- ಆಚರಣೆಗಳನ್ನು ಭಾಗಶಃವಾಗಿ ಮಾತ್ರ ಸ್ವೀಕರಿಸುವ ನಮ್ಮ ಎಂದಿನ ಅಭ್ಯಾಸದಂತೆ `ಮದರ್ಸ್‌ ಡೇ'ಯ ಹಿನ್ನೆಲೆ, ಮೌಲ್ಯ ಯಾವುದನ್ನೂ ತಿಳಿಯದೆ ನಾವು ಆಚರಿಸುವ ಈ ದಿನ ಅರ್ಥಹೀನವೇ ಸರಿ.
1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.
ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!
ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.
ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.
ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!
ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.
1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.
ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.
1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.
`ತಾಯಂದಿರ ದಿನ' ಅಮ್ಮಂದಿರಿಗೆ ಸಂತಸದೊಂದಿಗೆ ದುಃಖ ತರುವ ದಿನವೂ ಆಗಬಹುದಷ್ಟೆ. ಮಕ್ಕಳಿಲ್ಲದ `ಮಾತೆ'ಯರಿಗೆ ತಮಗೆ ಮಕ್ಕಳಿಲ್ಲ ಎಂದು ನೆನಪಿಸುವ ದಿನ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ತನ್ನ ಮಕ್ಕಳನ್ನು ನೆನೆಯುವ ನೋವು ಅಥವಾ ತಾಯಿಯನ್ನು ಕಳೆದುಕೊಂಡ ಮಗಳಿಗೆ ತನ್ನ ತಾಯಿಯನ್ನು ಸ್ಮರಿಸುವ ದುಃಖದ ದಿನ. ಹಾಗೆಯೇ ತಾಯಿ ಪ್ರೀತಿ ಸಿಗದ ಕಂದಮ್ಮಗಳಿಗೆ `ಪ್ರೀತಿ' ಎಂದರೇನೆಂಬುದೇ ಅರ್ಥವಾಗಿಲ್ಲ ಎಂಬುದನ್ನು ನೆನಪಿಸುವ ಕ್ಷಣವೂ ಹೌದು.
ಇವೆಲ್ಲದರ ಮಧ್ಯೆ ಭಾರತದ `ಅಮ್ಮ'ನಂತೂ ಅನಾರೋಗ್ಯ, ಅನಕ್ಷರತೆ, ಬಡತನ, ಅತ್ಯಾಚಾರಗಳ ನಡುವೆ ನಲುಗಿ ಹೋಗಿರುವವಳು. ಹೊರಗೆ ದುಡಿಯುತ್ತಿದ್ದರೂ, ಆರ್ಥಿಕ ಸ್ವಾತಂತ್ರ್ಯ ಇಲ್ಲದ, ಓದಿದ್ದರೂ ತನ್ನ ಅಭಿಪ್ರಾಯ ಹೇಳಲಾಗದ, ಸದಾ ಮಕ್ಕಳು- ಮನೆಯ ಬಗ್ಗೆ ಚಿಂತಿಸುವ `ಅಮ್ಮ'ನಿಗೆ ತನ್ನ ಆರೋಗ್ಯ, ಆಸೆ, ಆಕಾಂಕ್ಷೆಗಳ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. 16ರ ವಯಸ್ಸಿಗೇ ಮಕ್ಕಳನ್ನು ಹೆರುವ ಹುಡುಗಿ `ಅಮ್ಮ', 50ಕ್ಕೆ ಮಕ್ಕಳಿಬ್ಬರನ್ನೂ ಅಮೆರಿಕಕ್ಕೆ ಕಳುಹಿಸಿ ಹಳ್ಳಿಯಲ್ಲಿ ನಲುಗುವ `ಅಮ್ಮ' ಅಥವಾ 60ಕ್ಕೆ ಸಾಮರ್ಥ್ಯ ಇರದಿದ್ದರೂ ಮೊಮ್ಮಕ್ಕಳನ್ನು ಮಕ್ಕಳಂತೆ ಕಷ್ಟಪಟ್ಟು ಬೆಳೆಸುವ `ಅಮ್ಮ'... ಹೀಗೆ ಅಮ್ಮಂದಿರ ಜವಾಬ್ದಾರಿ ವೈವಿಧ್ಯಮಯ!
`ಅಮ್ಮಂದಿರ ದಿನ' ಅಮೆರಿಕದಿಂದ ಬಂದ ಅರ್ಥಪೂರ್ಣ ಆಚರಣೆ ಎಂದು ಬೀಗುತ್ತಿದ್ದ ನಮಗೆ ಅದೊಂದು `ಭ್ರಮೆ' ಎಂಬುದು ಅರಿವಾಗಬೇಕಿದೆ. `ಅಮ್ಮಂದಿರ ದಿನ'ವಾಗಲೀ, `ಶ್ರಾದ್ಧ'ವಾಗಲೀ `ಅಮ್ಮ'ನನ್ನು ನೆನೆಸುವ ಮತ್ಯಾವುದೇ ಆಚರಣೆಯಾಗಲೀ, ಪ್ರಾಯೋಗಿಕವಾಗಿ ಅದು ಸಂಕೇತಿಸುವ ಮೌಲ್ಯಗಳು `ರೂಢಿ'ಗಳಾಗಿ ಬದಲಾಗಬೇಕು. `ಅಮ್ಮ'ನಿಗೆ ಸಮಯ ಕೊಡದ, `ಅಮ್ಮ'ನ ಆರೋಗ್ಯದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ, ನಮ್ಮ `ಅಮ್ಮ'ನನ್ನು ನನ್ನ ಹೆಂಡತಿ/ ಅತ್ತಿಗೆ/ ಅಣ್ಣ- ತಮ್ಮ- ಅಕ್ಕ- ತಂಗಿ ನೋಡಿಕೊಳ್ಳಲಿ ಎನ್ನುವ ನಾವು ಬಹುತೇಕರು, ಇಂದು ಕೇವಲ `ಅಮ್ಮಂದಿರ ದಿನ'ದ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ ಅಲ್ಲವೇ?

ಶನಿವಾರ, ಮೇ 06, 2023

1. 404 ಪುಟ ದೋಷ (404 Error Page)

404

ನಾವು ನಿಮ್ಮ ಪುಟ ಗುರುತಿಸಲು ಸಾಧ್ಯವಾಗುತ್ತಿಲ್ಲ

ಈ ಪುಟವನ್ನು ಬೇರೆಲ್ಲಿಗೋ ವರ್ಗಾಯಿಸಲಾಗಿದೆ ಅಥವಾ ಅದು ಅಸ್ತಿತ್ವದಲ್ಲಿ ಇಲ್ಲ.

█▓▒▒░░░⮊⯮ ಕೃಪೆ: 🙶 ಇತರೆ ವೆಬ್-ತಾಣ 🙷 ⮈░░░▒▒▓█

1.. ಜಾಹೀರಾತು

2.ಜಾಹೀರಾತು