೧೯) ಕೈಗಳಿಗೆ ಮೆಹಂದಿ/ಹೆನ್ನಾವನ್ನು ಹಚ್ಚಿ ಕೊಳ್ಳುವುದು:
ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೆ ಮೆಹಂದಿಯು ತನ್ನಲ್ಲಿರುವ ಔಷಧೀಯ ಗುಣಗಳಿಂದ ಖ್ಯಾತಿ ಪಡೆದಿದೆ. ಮದುವೆಯು ಅತ್ಯಂತ ಒತ್ತಡಕಾರಿಯಾಗಿರುವ ಸಂಗತಿ ಎಲ್ಲರಿಗೂ ತಿಳಿದ ವಿಚಾರವೇ. ಈ ಒತ್ತಡವು ತಲೆನೋವು ಮತ್ತು ಜ್ವರವನ್ನು ತರ ಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿಗೆ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೊಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.