fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಜುಲೈ 09, 2022

ನಮ್ಮ ನಂಬಿಕೆಗಳು 19


೧೯) ಕೈಗಳಿಗೆ ಮೆಹಂದಿ/ಹೆನ್ನಾವನ್ನು ಹಚ್ಚಿ ಕೊಳ್ಳುವುದು:
ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೆ ಮೆಹಂದಿಯು ತನ್ನಲ್ಲಿರುವ ಔಷಧೀಯ ಗುಣಗಳಿಂದ ಖ್ಯಾತಿ ಪಡೆದಿದೆ. ಮದುವೆಯು ಅತ್ಯಂತ ಒತ್ತಡಕಾರಿಯಾಗಿರುವ ಸಂಗತಿ ಎಲ್ಲರಿಗೂ ತಿಳಿದ ವಿಚಾರವೇ. ಒತ್ತಡವು ತಲೆನೋವು ಮತ್ತು ಜ್ವರವನ್ನು ತರ ಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿಗೆ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೊಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.

ಶುಕ್ರವಾರ, ಜುಲೈ 01, 2022

ಜುಲೈ ತಿಂಗಳ ಮಹತ್ವದ ದಿನಗಳು

ಜುಲೈ ೧: ವೈದ್ಯರ ದಿನ
ಜುಲೈ ೨: ೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ.
ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.
ಜುಲೈ ೧೧:ವಿಶ್ವ ಜನಸಂಖ್ಯಾ ದಿನ
ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನುಮ ದಿನ.
ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ
ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.
ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ.
ಜುಲೈ ೧೯: ಪ್ರಮುಖವಾಗಿ ಹಿಂದುಗಳಿಗೆ ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾಬ್ಯಾಂಕ್ ರಾಷ್ಟ್ರೀಕರಣ ದಿನ.
ಜುಲೈ ೨೦: ಅಪೋಲೊ ೧೧ ರ ಗಗನಯಾನಿಗಳು (ಚಿತ್ರಿತ) ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು. 
ಅಪೊಲೊ 11 ಲೂನಾರ್ ಲ್ಯಾಂಡಿಂಗ್ ಮಿಷನ್ ಸಿಬ್ಬಂದಿ, ಎಡದಿಂದ ಬಲಕ್ಕೆ ಚಿತ್ರಿಸಲಾಗಿದೆ,
1) ನೀಲ್ A. ಆರ್ಮ್‌ಸ್ಟ್ರಾಂಗ್ (ಕಮಾಂಡರ್);
2) ಮೈಕೆಲ್ ಕಾಲಿನ್ಸ್ (ಕಮಾಂಡ್ ಮಾಡ್ಯೂಲ್ ಪೈಲಟ್); 
3) ಎಡ್ವಿನ್ ಇ. ಆಲ್ಡ್ರಿನ್ ಜೂನಿಯರ್ (ಲೂನಾರ್ ಮಾಡ್ಯೂಲ್ ಪೈಲಟ್).

ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾ ದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ.
ಜುಲೈ ೨೬: ಕಾರ್ಗಿಲ್ ವಿಜಯ ದಿನ
ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು
ವಿಶ್ವ ಹೆಪಟೈಟಿಸ್ ದಿನ.
ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ.
ಜುಲೈ ೨೯: ೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್ (ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು.
 ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

1.. ಜಾಹೀರಾತು

2.ಜಾಹೀರಾತು