೧೬) ನಾವೇಕೆ ಅರಳಿ ಮರವನ್ನು ಪೂಜಿಸುತ್ತೇವೆ?
"ಅರಳಿ ಮರ" ಅಥವಾ
"ಅಶ್ವತ್ಥ ವೃಕ್ಷ" ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳ ಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ? ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕವೆಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.